ಸಾಂದರ್ಭಿಕ ಚಿತ್ರ

17ನೇ ಸುತ್ತಿನಲ್ಲಿದ್ದ 10,766 ಮತಗಳ ಲೀಡ್‌ಗಿಂತ ಈ ಸುತ್ತಿನಲ್ಲಿ ಕಾಂಗ್ರೆಸ್ ತನ್ನ ಮುನ್ನಡೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಇದೀಗ 19ನೇ ಸುತ್ತಿನ ಮತ ಎಣಿಕೆ ಪ್ರಾರಂಭವಾಗಿದ್ದು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆ ಎಣಿಕೆ ಕಾರ್ಯ ಸಾಗುತ್ತಿದೆ.

ಬಾಗಲಕೋಟೆ : ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಅಂತಿಮ ಹಂತದತ್ತ ಸಾಗುತ್ತಿದ್ದು, 18ನೇ ಸುತ್ತಿನ ಅಂತ್ಯಕ್ಕೂ ಕಾಂಗ್ರೆಸ್ ಅಭ್ಯರ್ಥಿ ಭಾರೀ ಮುನ್ನಡೆ ಸಾಧಿಸಿದ್ದಾರೆ. 18ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡ ಬಳಿಕ ಕಾಂಗ್ರೆಸ್ ಅಭ್ಯರ್ಥಿಗೆ ಒಟ್ಟು 73,715 ಮತಗಳು ಲಭಿಸಿದ್ದರೆ, ಬಿಜೆಪಿ ಅಭ್ಯರ್ಥಿಗೆ 60,697 ಮತಗಳು ಬಂದಿವೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ 13,025 ಮತಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

17ನೇ ಸುತ್ತಿನಲ್ಲಿದ್ದ 10,766 ಮತಗಳ ಲೀಡ್‌ಗಿಂತ ಈ ಸುತ್ತಿನಲ್ಲಿ ಕಾಂಗ್ರೆಸ್ ತನ್ನ ಮುನ್ನಡೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಇದೀಗ 19ನೇ ಸುತ್ತಿನ ಮತ ಎಣಿಕೆ ಪ್ರಾರಂಭವಾಗಿದ್ದು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆ ಎಣಿಕೆ ಕಾರ್ಯ ಸಾಗುತ್ತಿದೆ.

ದಾವಣಗೆರೆ 9ನೇ ಸುತ್ತಿನಲ್ಲಿ ಬಿಜೆಪಿ ಹಿನ್ನಡೆ

 ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಬಿರುಸಿನಿಂದ ಸಾಗಿದ್ದು, ಒಂಭತ್ತನೇ ಸುತ್ತಿನ ಮುಕ್ತಾಯಕ್ಕೆ ಕಾಂಗ್ರೆಸ್ 3986’ಮತಗಳ ಮುನ್ನೆಡೆ ಸಾಧಿಸಿದೆ. 7 ನೇ ಸುತ್ತಿನವರೆಗೂ ಮುನ್ನೆಡೆ ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ಶ್ರೀ ನಿವಾಸ ದಾಸಕರಿಯಪ್ಪ ಅವರಿಗೆ ಎಂಟನೇ ಸುತ್ತಿನಿಂದ ಹಿನ್ನಡೆ ಪಡೆದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶ್ಯಾಮನೂರು ಅವರು ಭರ್ಜರಿ ಪೈಪೋಟಿ ನೀಡುತ್ತಿದ್ದು, ಎಂಟನೇ ಸುತ್ತಿನ ಅಂತ್ಯಕ್ಕೆ ಒಟ್ಟು 30  ಸಾವಿರದ 530  ಮತಗಳನ್ನು ಪಡೆದಿದ್ದರೆ,  ಬಿಜೆಪಿಯ ಶ್ರೀನಿವಾಸ್ ದಾಸ ಕರಿಯಪ್ಪ ಅವರು  26 ಸಾವಿರದ 544 ಮತಗಳಿಸಿ 3986 ಮತಗಳ ಹಿನ್ನಡೆ ಅನುಭವಿಸಿದ್ದಾರೆ‌.ಹತ್ತನೆ ಸುತ್ತಿನ ಮತ ಎಣಿಕೆ ಪ್ರಗತಿಯಲ್ಲಿದೆ.

#Karnataka #Bagalakote #Davanagere #bypoll #counting #ಕರ್ನಾಟಕ #ಬಾಗಲಕೋಟೆ #ದಾವಣಗೆರೆ #ಉಪ ಚುನಾವಣೆ #ಮತ ಎಣಿಕೆ

Leave a Reply

Your email address will not be published. Required fields are marked *