ಕಾಂಗ್ರೆಸ್ ಆರ್‌ಜೆಡಿ, ಶಿವಸೇನೆ, ಎನ್‌ಸಿಪಿ ಮತ್ತು ಈಗ ಡಿಎಂಕೆಯಂತಹ ಪಕ್ಷಗಳನ್ನು ಬಳಸಿಕೊಂಡು ಎಸೆದಿದೆ. ಇಂಡಿ ಒಕ್ಕೂಟಕ್ಕೆ ಯಾವುದೇ ಸ್ಪಷ್ಟ ಉದ್ದೇಶ, ದೂರದೃಷ್ಟಿ ಇಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ. 

ನವದೆಹಲಿ: ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ರಚನೆಗೆ ಬೆಂಬಲ ನೀಡಲು ಕಾಂಗ್ರೆಸ್ ಮುಂದಾಗುತ್ತಿದ್ದಂತೆಯೇ ಆ ಪಕ್ಷದ ವಿರುದ್ಧ ಬಿಜೆಪಿ ರಾಷ್ಟ್ರೀಯ ವಕ್ತಾರ 

ಶೆಹಜಾದ್ ಪೂನಾವಾಲಾ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಿತ್ರ ಪಕ್ಷದವರನ್ನು ಬಳಸಿಕೊಂಡು ಎಸೆಯುವುದು ಕಾಂಗ್ರೆಸ್ ಚಾಳಿಯಾಗಿದ್ದು, ತನ್ನ ಮಿತ್ರಪಕ್ಷಗಳಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಆರ್‌ಜೆಡಿ, ಶಿವಸೇನೆ, ಎನ್‌ಸಿಪಿ ಮತ್ತು ಈಗ ಡಿಎಂಕೆಯಂತಹ ಪಕ್ಷಗಳನ್ನು ಬಳಸಿಕೊಂಡು ಎಸೆದಿದೆ. ಇಂಡಿ ಒಕ್ಕೂಟಕ್ಕೆ ಯಾವುದೇ ಸ್ಪಷ್ಟ ಉದ್ದೇಶ, ದೂರದೃಷ್ಟಿ ಇಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ. 

ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್ ಅತ್ಯಂತ ಮೋಸಗಾರ ಪಕ್ಷವಾಗಿದೆ. ಪ್ರಾದೇಶಿಕ ಪಕ್ಷಗಳನ್ನು ಬಳಸಿಕೊಳ್ಳುತ್ತಾರೆ ನಂತರ ಎಸೆಯುತ್ತಾರೆ. ಆರ್ ಜೆಡಿ ಬಳಸಿಕೊಂಡು ದೂರ ಎಸೆದರು. ಶಿವಸೇನೆ, ಉದ್ಧವ್ ಠಾಕ್ರೆ, ಎನ್ ಸಿಪಿ ಶರದ್ ಪವಾರ್ ಬಣವನ್ನು ಬಳಸಿಕೊಂಡು ದೂರ ಎಸೆದರು. ಈಗ ಡಿಎಂಕೆ ಬಳಸಿಕೊಂಡು ಎಸೆದಿದ್ದಾರೆ.  ಆದ್ದರಿಂದ ಇಂಡಿ ಒಕ್ಕೂಟಕ್ಕೆ ಯಾವುದೇ ಸ್ಪಷ್ಟ ಗುರಿ ಉದ್ದೇಶ ಇಲ್ಲ ಎಂದರು.

ಕಾಂಗ್ರೆಸ್ ತನ್ನ ಸ್ವಂತ ಲಾಭಕ್ಕಾಗಿ ಪ್ರಾದೇಶಿಕ ಮಿತ್ರಪಕ್ಷಗಳನ್ನು ಬಳಸುತ್ತಿದೆ ಎಂದು ಆರೋಪಿಸಿದರು. ಇಂಡಿ ಮೈತ್ರಿಕೂಟವು ಗೊಂದಲ, ವಿಭಜನೆ ಮತ್ತು ಭ್ರಷ್ಟಾಚಾರದಿಂದ ತುಂಬಿದೆ. ಎಲ್ಲವೂ ಅಧಿಕಾರದ ಬಯಕೆಯಿಂದ ನಡೆಯುತ್ತದೆ ಎಂದು ಅವರು ಹೇಳಿದರು.

#Tamilnadu #TVK#Congress #DMK #BJP #ತಮಿಳುನಾಡು #ಟಿವಿಕೆ #ಕಾಂಗ್ರೆಸ್ #ಡಿಎಂಕೆ #ಬಿಜೆಪಿ

Leave a Reply

Your email address will not be published. Required fields are marked *