ಮೈಸೂರು ಭಾರತೀಯ ವಾಕ್ ಮತ್ತು ಶ್ರವಣ ಸಂಸ್ಥೆ ಮತ್ತು ಇಂಡಿಯನ್ ಸೊಸೈಟಿ ಆಫ್ ಕ್ಲೆಫ್ಟ್ ಲಿಪ್ ಸಹಯೋಗದಲ್ಲಿ ನಡೆಯುವ 24 ನೇ ವಾರ್ಷಿಕ ಕಾನ್ಫರೆನ್ಸ್ ಉದ್ಘಾಟಿಸಿ ಮಾತನಾಡಿದ ಅವರು, ಸೀಳು ತುಟಿ ಸಮಸ್ಯೆಗೆ ಸರಿಯಾದ ಚಿಕಿತ್ಸೆ ದೊರೆಯದಿದ್ದಲ್ಲಿ ಮಗು ಸಾಮಾಜಿಕವಾಗಿ, ಹಲ್ಲು, ಮಾತು, ಮಾನಸಿಕವಾಗಿ ಸಮಸ್ಯೆಗೆ ಒಳಗಾಗುತ್ತದೆ ಎಂದರು. ಮೈಸೂರು: ಭಾರತದಲ್ಲಿ ಜನಿಸುವ ಪ್ರತಿ 700 ಮಕ್ಕಳಲ್ಲಿ ಒಬ್ಬರಿಗೆ ಈ ಸೀಳುತುಟಿಯ ಸಮಸ್ಯೆ ಇದೆ. ಇದಕ್ಕೆ ಸಮಯೋಚಿತ ಸರಿಯಾದ ಚಿಕಿತ್ಸೆ ಆದಾಗ ಮಾತ್ರ ರೋಗಿಗೆ ಅನುಕೂಲ ಆಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮೈಸೂರು ಭಾರತೀಯ ವಾಕ್ ಮತ್ತು ಶ್ರವಣ ಸಂಸ್ಥೆ ಮತ್ತು ಇಂಡಿಯನ್ ಸೊಸೈಟಿ ಆಫ್ ಕ್ಲೆಫ್ಟ್ ಲಿಪ್ ಸಹಯೋಗದಲ್ಲಿ ನಡೆಯುವ 24 ನೇ ವಾರ್ಷಿಕ ಕಾನ್ಫರೆನ್ಸ್ ಉದ್ಘಾಟಿಸಿ ಮಾತನಾಡಿದ ಅವರು, ಸೀಳು ತುಟಿ ಸಮಸ್ಯೆಗೆ ಸರಿಯಾದ ಚಿಕಿತ್ಸೆ ದೊರೆಯದಿದ್ದಲ್ಲಿ ಮಗು ಸಾಮಾಜಿಕವಾಗಿ, ಹಲ್ಲು, ಮಾತು, ಮಾನಸಿಕವಾಗಿ ಸಮಸ್ಯೆಗೆ ಒಳಗಾಗುತ್ತದೆ ಎಂದರು. ಆದರೆ ಈಚಿನ ವರ್ಷಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಿದ ಪರಿಣಾಮವಾಗಿ ಪೋಷಕರು ಚಿಕಿತ್ಸೆಗೆ ಮುಂದಾಗುತ್ತಿರುವುದು ಸಂತಸದ ಸಂಗತಿ. ಇಂತಹ ಸಮ್ಮೇಳನಗಳು ಇನ್ನೂ ಹೆಚ್ಚಾಗಿ ನಡೆಯಬೇಕು. ಸೀಳು ತುಟಿ ಸಮಸ್ಯೆ ಕೇವಲ ಒಬ್ಬ ವೈದ್ಯರಿಂದ ಪರಿಹಾರವಾಗುವುದಿಲ್ಲ. ಸರ್ಜನ್ಗಳು, ಮಕ್ಕಳ ಡೆಂಟಿಸ್ಟ್, ಭಾಷೆ ಮತ್ತು ಮಾತಿನ್ನು ಕಲಿಸುವ ಶಿಕ್ಷಕರು ಹೀಗೆ ಹಲವು ಜನರ ಸಹಭಾಗಿತ್ವ ಅಗತ್ಯ. ಆಗ ಮಾತ್ರ ಮಗು ಸಾಮಾನ್ಯ ಮಗುವಿನಂತೆ ಆಗಲು ಸಾಧ್ಯ ಎಂದು ಹೇಳಿದರು. ಸ್ಮೈಲ್ ಇಂಡಿಯಾ NGO ಇಡೀ ಭಾರತದಾದ್ಯಂತ ಸೀಳುತುಟಿ ಶಸ್ತ್ರಚಿಕಿತ್ಸೆ ನಡೆಸುವ, ಆ ಮೂಲಕ ಮಕ್ಕಳ ಬದುಕನ್ನು ಹಸನಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸೂಕ್ತ ತರಬೇತಿಯನ್ನು ವೈದ್ಯರಿಗೆ ನೀಡುವಲ್ಲಿ ಮುಂಚೂಣಿಯಲ್ಲಿದೆ.ನಮ್ಮ ಸರ್ಕಾರ ಆರೋಗ್ಯ ಕ್ಷೇತ್ರವನ್ನು ಸಬಲಗೊಳಿಸಲು ರೋಗ ಪತ್ತೆ ಮತ್ತು ಚಿಕಿತ್ಸೆ ಮಹತ್ವ ನೀಡಿದೆ ಎಂದು ತಿಳಿಸಿದರು. #Mysuru #HealthMinisterDineshgundurao #conference #inauguration #ಮೈಸೂರು #ಆರೋಗ್ಯಸಚಿವ ದಿನೇಶ್ ಗುಂಡೂರಾವ್ #ಸಮ್ಮೇಳನ # ಉದ್ಘಾಟನೆ Post navigation ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ! ಸುವೇಂದು ಅಧಿಕಾರಿ ಆಪ್ತ ಗುಂಡೇಟಿಗೆ ಬಲಿ, ತನಿಖೆ ಚುರುಕು