ಖರ್ಗೆ, ರಾಹುಲ್ ಜೊತೆಗೆ ಡಿಕೆ ಶಿವಕುಮಾರ್


ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಿಗದಿಪಡಿಸಲಾಗಿದೆ.  ಈ ಹೈಪ್ರೊಫೈಲ್ ಶಾಸಕರ ಸಭೆಯಲ್ಲಿ ಎಐಸಿಸಿ ವತಿಯಿಂದ ನಿಯೋಜನೆಗೊಂಡಿರುವ ವೀಕ್ಷಕರು ಹಾಗೂ ಇಲಾಖೆಯ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ.

ರಾಹುಲ್ ಜೊತೆಗೆ ಡಿಕೆ ಶಿವಕುಮಾರ್

ಬೆಂಗಳೂರು: ಇಂದು ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ. ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಿಗದಿಪಡಿಸಲಾಗಿದೆ.  ಈ ಹೈಪ್ರೊಫೈಲ್ ಶಾಸಕರ ಸಭೆಯಲ್ಲಿ ಎಐಸಿಸಿ ವತಿಯಿಂದ ನಿಯೋಜನೆಗೊಂಡಿರುವ ವೀಕ್ಷಕರು ಹಾಗೂ ಇಲಾಖೆಯ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ.

ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರನ್ನು ಹೊಸ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಕಡ್ಡಾಯವಾಗಿ ಹಾಗೂ ಅವಿರೋಧವಾಗಿ ಆಯ್ಕೆ ಮಾಡಲು ಎಲ್ಲಾ ನೂತನ ಶಾಸಕರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.ಈ ಅವಿರೋಧ ಆಯ್ಕೆಯ ಅಧಿಕೃತ ಪ್ರಕ್ರಿಯೆಯು ಪೂರ್ಣಗೊಳ್ಳುತ್ತಿದ್ದಂತೆ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಗದ್ದುಗೆಯನ್ನು ಅಧಿಕೃತವಾಗಿ ಅಲಂಕರಿಸಲು ಇದ್ದ ಎಲ್ಲಾ ತಾಂತ್ರಿಕ ಅಡೆತಡೆಗಳು ಸಂಪೂರ್ಣವಾಗಿ ನಿವಾರಣೆಯಾಗಿ ದಾರಿ ಸುಗಮವಾಗಲಿದೆ.

ಜೂನ್ 3 ಪ್ರಮಾಣವಚನಮಹೂರ್ತ: ಹೈಕಮಾಂಡ್‌ನ ಅಂತಿಮ ಗ್ರೀನ್ ಸಿಗ್ನಲ್ ಪತ್ರದೊಂದಿಗೆ ಡಿ ಕೆ ಶಿವಕುಮಾರ್ ಅವರು ಮುಂಬರುವ ಜೂನ್ 3 ರಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ದೃಢಪಡಿಸಿವೆ.

ಇದನ್ನೂ ಓದಿ: ಸಿದ್ದರಾಮಯ್ಯರಾಜೀನಾಮೆ: ಅಹಿಂದ ಸಮುದಾಯಗಳ ಶಾಸಕರು, ನಾಯಕರ ಮೌನಕ್ಕೆ ಕಾರಣವೇನು?

ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಗೆ ಮುನ್ನ ಡಿ.ಕೆ. ಶಿವಕುಮಾರ್ ಅವರು ಲೋಕಭವನಕ್ಕೆ ಆಗಮಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರನ್ನು ಭೇಟಿ ಮಾಡಿದ್ದಾರೆ. ಈ ನಡುವೆಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಗಳೂರಿನ ‘ಕಾವೇರಿ’ ನಿವಾಸಕ್ಕೆ ಕಾಂಗ್ರೆಸ್ ಶಾಸಕರು ಮತ್ತು ಪ್ರಮುಖ ನಾಯಕರು ಇಂದು ಅಪರಾಹ್ನ ಸಿಎಲ್ಪಿ ಸಭೆಗೆ ಮುನ್ನ ಭೇಟಿ ನೀಡುತ್ತಿದ್ದಾರೆ. ನಾಯಕರಾದ ಕೆ.ಜೆ. ಜಾರ್ಜ್, ಎ.ಎಸ್. ಪೊನ್ನಣ್ಣ, ಪುಟ್ಟರಂಗಶೆಟ್ಟಿ ಹಾಗೂ ಬಿಲ್ಕೀಸ್ ಬಾನು ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.

#Karnataka #Congress #CLPMeeting #DKShivakumarcm #takeoathceremony #ಕರ್ನಾಟಕ #ಕಾಂಗ್ರೆಸ್ #ಸಿಎಲ್ ಪಿ ಮೀಟಿಂಗ್ #ಡಿಕೆಶಿವಕುಮಾರ್ #ಪದಗ್ರಹಣ ಸಮಾರಂಭ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link