15 ದಿನಗಳಿಗಿಂತ ಹೆಚ್ಚು ಕಾಲ ಸಾರ್ವಜನಿಕ ರಸ್ತೆ ಅಥವಾ ಫುಟ್‌ಪಾತ್‌ನಲ್ಲಿ ನಿಲ್ಲಿಸಿರುವ ವಾಹನಗಳನ್ನು ವಾರಸುದಾರರಿಲ್ಲದ ವಾಹನಗಳೆಂದು ಪರಿಗಣಿಸಲಾಗುತ್ತದೆ. ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವತಿಯಿಂದ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಾರಸುದಾರರಿಲ್ಲದೆ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿ ನಿಲ್ಲಿಸಿರುವ ಅನಾಥ ವಾಹನಗಳನ್ನು ತೆರವುಗೊಳಿಸುವ ವಿಶೇಷ ಅಭಿಯಾನವನ್ನು ಜುಲೈ 10, 2026 ರಿಂದ ಆರಂಭಿಸಲಾಗಿದೆ. ನಿಯಮಾವಳಿ: 15 ದಿನಗಳಿಗಿಂತ ಹೆಚ್ಚು ಕಾಲ ಸಾರ್ವಜನಿಕ ರಸ್ತೆ ಅಥವಾ ಫುಟ್‌ಪಾತ್‌ನಲ್ಲಿ ನಿಲ್ಲಿಸಿರುವ ವಾಹನಗಳನ್ನು ವಾರಸುದಾರರಿಲ್ಲದ ವಾಹನಗಳೆಂದು ಪರಿಗಣಿಸಲಾಗುತ್ತದೆ. ಕಾರ್ಯಾಚರಣೆಯಹಂತಗಳು: ಗುರುತಿಸಲಾದ ವಾಹನಗಳಿಗೆ 7 ದಿನಗಳ ನೋಟಿಸ್ ಅಂಟಿಸಿ ವೀಲ್ ಕ್ಲಾಂಪ್ ಹಾಕಲಾಗುತ್ತದೆ. ಅವಧಿ ಮುಗಿದರೂ ತೆರವುಗೊಳಿಸದ ವಾಹನಗಳನ್ನು ಟೋ (Tow) ಮಾಡಿ ಜಪ್ತಿ ಮಾಡಲಾಗುತ್ತದೆ. ಜಪ್ತಿ ಮಾಡಿದ ವಾಹನಗಳನ್ನು ನಿಯಮಾನುಸಾರ ಬಹಿರಂಗ ಹರಾಜು ಮಾಡಲಾಗುವುದು. ರಸ್ತೆ ಸುರಕ್ಷತೆ, ಸುಗಮ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ಅನುಕೂಲ ಮಾಡಿಕೊಡುವುದು. ಈ ಅಭಿಯಾನವು ಜಿಬಿಎ ಕಾಯ್ದೆ-೨೦೨೪ರ ಸೆಕ್ಷನ್ ೩೨೪ರ ಅನ್ವಯ ಜಾರಿಯಲ್ಲಿದೆ. #GBA #clearvehicles #Campaign #Krishna Byregowda #ಜಿಬಿಎ #ವಾರಸುದಾರರಿಲ್ಲದ ವಾಹನಗಳ ತೆರವು# ಅಭಿಯಾನ#ಕೃಷ್ಣ ಬೈರೇಗೌಡ Share via: Facebook X (Twitter) LinkedIn More Post navigation SIR ಅಕ್ರಮ; ಜೋಶಿ ನೇತೃತ್ವದಲ್ಲಿ ಮುಖ್ಯ ಚುನಾವಣಾಧಿಕಾರಿಗೆ NDA ನಿಯೋಗ ದೂರು! ಬಿಡದಿ ರೈತ ಮಹಿಳೆಯರ ಪೊರಕೆ ಸೇವೆ, ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ!