ಅಹಲ್ಯಾಬಾಯಿ ಮಹಿಳಾ ಮತ್ತು ಮಕ್ಕಳ ಸಂಘ ಮತ್ತು ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ 301ನೇಪುಣ್ಯ ಶ್ಲೋಕ ಅಹಲ್ಯಾ ಬಾಯಿ ಹೋಲ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಡಾ.ನಾಗಲಕ್ಷ್ಮಿ ಚೌಧರಿ ಬೆಂಗಳೂರು: ಮಹಿಳೆಯರು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸ್ವಾವಲಂಭಿಗಳಷ್ಟೆಅಲ್ಲ, ಸಬಲರೂಆಗಬೇಕಿದೆ. ಮಹಿಳೆಯರ ಶ್ರೇಯೋಭಿವೃದ್ದಿಗಾಗಿಯೇ ಸರಕಾರ ರೂಪಿಸಿ, ಜಾರಿಗೊಳಿಸಿರುವ ಯೋಜನೆಗಳ ಸದುಪಯೋಗ ಪಡೆದುಕೊಂಡು ಮಹಿಳೆಯರು ಸ್ವಾವಲಂಭಿಗಳಾಗಬೇಕು ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌಧರಿ ತಿಳಿಸಿದ್ದಾರೆ. ಶ್ರೀನಿವಾಸನಗರದ ಕಾಗಿನೆಲೆಕನಕಗುರುಪೀಠದಶಾಖಾಆವರಣದಲ್ಲಿ ಶ್ರೀಸಿದ್ಧರಾಮಾನಂದಮಾಹಾಸ್ವಾಮೀಜಿಗಳಸತ್ಸಂಗ ಸೇವಾಮಂಡಳಿಟ್ರಸ್ಟ್,ಅಹಲ್ಯಾಬಾಯಿಮಹಿಳಾಮತ್ತುಮಕ್ಕಳಸಂಘಮತ್ತುಕನಕದಾಸರಸಾಹಿತ್ಯಪ್ರಚಾರಸಮಿತಿಸಹಯೋಗದಲ್ಲಿಆಯೋಜಿಸಿದ್ದ301ನೇಪುಣ್ಯಶ್ಲೋಕಅಹಲ್ಯಾಬಾಯಿಹೋಲ್ಕರ್ಜಯಂತಿಕಾರ್ಯಕ್ರಮದಲ್ಲಿಅವರುಪಾಲ್ಗೊಂಡುಮಾತನಾಡಿದರು. ಭಾರತದಲ್ಲಿ ಮಹಿಳೆಯರಿಗೆ ಇರುವ ಗೌರವ, ಜಗತ್ತಿನ ಬೇರೆ ಯಾವುದೇ ದೇಶದಲ್ಲಿಇಲ್ಲ. ಆದರೂ, ದೇಶದಲ್ಲಿ ಕೆಲದುಷ್ಕರ್ಮಿಗಳು ಮಹಿಳೆಯರ ಮೇಲೆ ನಡೆಸುವ ಕುಕೃತ್ಯಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡುತ್ತದೆ. ಎಲ್ಲರೂ ಇದನ್ನು ತಡೆಗಟ್ಟಲು ಶ್ರಮಿಸಬೇಕಿದೆ. ಈ ನಾಡಿನಲ್ಲಿ ಮೂಢನಂಬಿಕೆಗಳಿಂದಲೂ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಹೇಳಿದರು. ವೀರಯೋಧರಿಗೆ ಅಭಿನಂದನೆ ಕಾರ್ಯಕ್ರಮವು ಅಹಲ್ಯಾಬಾಯಿಮಹಿಳಾಮತ್ತುಮಕ್ಕಳಸಂಘ ಅಧ್ಯಕ್ಷೆ ಸಿ. ಸ್ವರೂಪರಾಣಿ, ಶ್ರೀಸಿದ್ಧರಾಮಾನಂದಸ್ವಾಮೀಜಿಯವರಸತ್ಸಂಗಸೇವಾಮಂಡಳಿಟ್ರಸ್ಟ್ಅಧ್ಯಕ್ಷೆ ವಿಜಯಕುಮಾರಿ ಆರ್. ಗೌಡ ನೇತೃತ್ವದಲ್ಲಿ ನಡೆಯಿತು. ಮುಖ್ಯಅತಿಥಿಗಳಾದ ಇನ್ಸೈಟ್ಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಧಾರ್ಮಿಕ ಮುಖಂಡರುಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಗೊರವರ ಕುಣಿತದ ತಂಡ ವಿಶೇಷವಾಗಿ ಗಣ್ಯರನ್ನು ಬರಮಾಡಿಕೊಂಡಿತು. ಇದೇ ವೇಳೆ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ವೀರ ಯೋಧರನ್ನು ಸನ್ಮಾನಿಸಲಾಯಿತು ನಂತರ ಸತ್ಸಂಗದಲ್ಲಿ ಶಿವನ ಆರಾಧನೆ ಎಲ್ಲರ ಕಣ್ಮರೆಸೆಳೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. #Bengaluru #ahilyabai holkar jayanti #DrNagalakshmi Chaudhary #ಬೆಂಗಳೂರು #ಅಹಲ್ಯಾಬಾಯಿಹೋಲ್ಕರ್ ಜಯಂತಿ #ಡಾ.ನಾಗಲಕ್ಷ್ಮಿಚೌಧರಿ Share via: Facebook X (Twitter) LinkedIn More Post navigation ಬೆಂಗಳೂರು: 301 ನೇಯ ಪುಣ್ಯ ಶ್ಲೋಕ ಅಹಲ್ಯಾಬಾಯಿ ಹೋಲ್ಕರ್ ಜಯಂತಿ! IIHMR ಬೆಂಗಳೂರು 15ನೇ ಘಟಿಕೋತ್ಸವ! ಪದವಿ ಪಡೆದ PGDM ಬ್ಯಾಚ್ ವಿದ್ಯಾರ್ಥಿಗಳಿಗೆ ಸನ್ಮಾನ!