ನಿಖಿಲ್ ಕುಮಾರಸ್ವಾಮಿ

ಈ ಕುರಿತು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ತಮ್ಮ ಭೂಮಿ ಮತ್ತು ಜೀವನೋಪಾಯಕ್ಕಾಗಿ ಧ್ವನಿ ಎತ್ತುವವರನ್ನು ಅಧಿಕಾರಬಲದಿಂದ ಹತ್ತಿಕ್ಕಲು ಸಾಧ್ಯವಿಲ್ಲ ಎಂದಿದ್ದಾರೆ.

ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಬಿಡದಿಯ ರಾಜಕೀಯ ಪ್ರೇರಿತ ಸುಳ್ಳು ಎಫ್‌ಐಆರ್‌ ಪ್ರಕರಣದಲ್ಲಿ, ರಾಮನಗರ ನ್ಯಾಯಾಲಯವು ಸ್ಥಳೀಯ 11 ರೈತರು ಹಾಗೂ ನಿವಾಸಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದು ನಮ್ಮ ಕಾನೂನು ಹೋರಾಟಕ್ಕೆ ಸಿಕ್ಕ ದೊಡ್ಡ ಜಯ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೋಮವಾರ ಹೇಳಿದ್ದಾರೆ.

ಈ ಕುರಿತು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ತಮ್ಮ ಭೂಮಿ ಮತ್ತು ಜೀವನೋಪಾಯಕ್ಕಾಗಿ ಧ್ವನಿ ಎತ್ತುವವರನ್ನು ಅಧಿಕಾರಬಲದಿಂದ ಹತ್ತಿಕ್ಕಲು ಸಾಧ್ಯವಿಲ್ಲ ಎಂದಿದ್ದಾರೆ.

 ಪ್ರದೀಪ್‌ ಅವರ ನೇತೃತ್ವದ ನಮ್ಮ ವಕೀಲರ ತಂಡದ ಕಾನೂನು ಸಮರ ಇಲ್ಲಿಗೆ ಮುಗಿಯುವುದಿಲ್ಲ; ಈ ಸುಳ್ಳು ಪ್ರಕರಣಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಬಿಡದಿಯ ಜನರ ಪರವಾಗಿ ನಾವು ನೆಲದಲ್ಲೂ ನಿಂತಿದ್ದೇವೆ, ನ್ಯಾಯಾಲಯದಲ್ಲೂ ನಿಂತಿದ್ದೇವೆ. ಸಂಪೂರ್ಣ ನ್ಯಾಯ ಸಿಗುವವರೆಗೂ ಅವರ ಪರವಾಗಿ ಹೋರಾಡಲಿದ್ದೇವೆ ಎಂದು ತಿಳಿಸಿದ್ದಾರೆ.

#Bidaditownship #anticipatory bail #farmers #Nikhil Kumaraswamy #ಬಿಡದಿಟೌನ್ ಶಿಪ್ #ನಿರೀಕ್ಷಣಾಜಾಮೀನು# ರೈತರು#ನಿಖಿಲ್ ಕುಮಾರಸ್ವಾಮಿ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link