ನನಗೆ ಬಂದಿರುವ ವರದಿ ನೋಡಿಕೊಂಡು ಕಾನೂನುಪ್ರಕಾರ ಹೋರಾಟ ಮಾಡುತ್ತೇವೆ, ಸರ್ಕಾರದ ಮಟ್ಟದಲ್ಲಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಮುಂದುವರಿಯುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರು: ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ದೊಡ್ಡ ಪಿತೂರಿ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇಡೀ ದೇಶಕ್ಕೆ ಇಂತಹ ಕ್ರಿಮಿನಲ್ ಚಟುವಟಿಕೆ ಮಾಡುತ್ತಾರೆ ಎಂದು ಊಹಿಸಲೂ ಸಾಧ್ಯವಿಲ್ಲ. ಮಾಜಿ ಶಾಸಕ ಡಿ ಎನ್ ಜೀವರಾಜ್ ಅವರು ಯಾವ ರೀತಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಪಿತೂರಿ ನಡೆಸಿದ್ದಾರೆ ಎಂಬುದಕ್ಕೆ ಶೃಂಗೇರಿ ಕ್ಷೇತ್ರದ ಅಂಚೆ ಮತ ಎಣಿಕೆ ದೊಡ್ಡ ಸಾಕ್ಷಿಯಾಗಿದ್ದು, ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆಯಿಂದ ನಡೆದ ಬೆಳವಣಿಗೆ ಬಗ್ಗೆ ನನಗೆ ವರದಿ ಬಂದಿದೆ, ನಾನು ಪರಿಶೀಲನೆ ಮಾಡುತ್ತಿದ್ದೇನೆ, ಬ್ಯಾಲೆಟ್ ಬಾಕ್ಸ್ ನ್ನು ತೆರೆಸಿ ಏನೆಲ್ಲಾ ಅಕ್ರಮ ಮಾಡಬಹುದು, ಕೋರ್ಟ್ ಗೆ ಹೋಗಿ ಬರೀ ಅಂಚೆ ಮತಎಣಿಕೆಯನ್ನು ಮಾತ್ರ ಮತ್ತೆ ಎಣಿಕೆ ಮಾಡಿಸಿರುವುದು, ಅವರ ಏಜೆಂಟ್ ಸಹಿ ಮಾಡಿದ್ದನ್ನು ತಿರುಚಿದ್ದು ಇಡೀ ದೇಶಕ್ಕೆ ವ್ಯವಸ್ಥಿತ ಅಪರಾಧವಿದು ಎಂದು ಆಕ್ರೋಶ ವ್ಯಕ್ತಪಡಿಸಿದರು. ನನಗೆ ಬಂದಿರುವ ವರದಿ ನೋಡಿಕೊಂಡು ಕಾನೂನುಪ್ರಕಾರ ಹೋರಾಟ ಮಾಡುತ್ತೇವೆ, ಸರ್ಕಾರದ ಮಟ್ಟದಲ್ಲಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಮುಂದುವರಿಯುತ್ತೇವೆ ಎಂದರು. #Sringeri #recount #DCM DK Shivakumar #react #ಶೃಂಗೇರಿ#ಮರುಮತಎಣಿಕೆ#ಡಿಸಿಎಂ ಡಿಕೆ ಶಿವಕುಮಾರ್ #ಪ್ರತಿಕ್ರಿಯೆ Share via: Facebook X (Twitter) LinkedIn More Post navigation ಶೃಂಗೇರಿ ಕ್ಷೇತ್ರ: ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯ ಜೀವರಾಜ್ ಗೆ ಬಹುಮತ? ಯಡಿಯೂರಪ್ಪ ಅಭಿಮಾನೋತ್ಸವ: ನಿಜಕ್ಕೂ ಅಭಿಮಾನದ ಅಚರಣೆಯೇ or ಮುಂದಿನ ಚುನಾವಣೆ ಟಾರ್ಗೆಟಾ?