83 ವರ್ಷದ ಹಿರಿಯ ನಾಯಕನಿಗೆ ಗೌರವ ಸಲ್ಲಿಸಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಆಯೋಜಿಸಿದ್ದ ಈ ಕಾರ್ಯಕ್ರಮ ನಿಜಕ್ಕೂ ಅಭಿಮಾನದ ಆಚರಣೆಯೇ ಅಥವಾ ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ತಂತ್ರವೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಚಿತ್ರದುರ್ಗ: ರಾಜಕೀಯ ಜೀವನದಲ್ಲಿ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ನಾಯಕನ ಸಾಧನೆ ಪ್ರತಿಬಿಂಬ ಹಾಗೂ ಸನ್ಮಾನಿಸುವ ನಿಟ್ಟಿನಲ್ಲಿ ಶನಿವಾರ ಅಭಿಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶನಿವಾರ ನಡೆದ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದರು. ನಾಡಿನ ವಿವಿಧ ಮಠಾಧೀಶರು, ಸಮಾವೇಶದಲ್ಲಿ ಭಾಗಿಯಾದರು.ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿದ್ದರು. ಇದೇ ವೇಳೆ ಬಿ.ಎಸ್.ಯಡಿಯೂರಪ್ಪನವರ ಬದುಕಿನ ಮೈಲಿಗಲ್ಲುಗಳನ್ನು ಸಾರುವ ‘ಕೆಂದಾವರೆ-ಕಮಲ ಅರಳಿದ ಕಥೆ’ ಹಾಗೂ ಅವರ ಸುದೀರ್ಘ ಶಾಸಕತ್ವದ ಅವಧಿಯಲ್ಲಿ ಸದನದಲ್ಲಿ ಮಾಡಿದ ಭಾಷಣಗಳ ಸಂಗ್ರಹಗಳನ್ನು ಹೊತ್ತ ʼʼಸದನ ಶಿಕಾರಿ-ಯಡಿಯೂರಪ್ಪನವರ ಗುಡುಗಿನ ನುಡಿಗಳು” ಎನ್ನುವ ಎರಡು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ ಮೊದಲಾದ ಬಿಜೆಪಿ ನಾಯಕರು, ಬಿಎಸ್‌ವೈ ರಾಜಕೀಯ ಹೋರಾಟವನ್ನು ಕೊಂಡಾಡಿದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹಿಂದಿ ಭಾಷಣ ಗಮನ ಸೆಳೆಯಿತು. 83 ವರ್ಷದ ಹಿರಿಯ ನಾಯಕನಿಗೆ ಗೌರವ ಸಲ್ಲಿಸಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಆಯೋಜಿಸಿದ್ದ ಈ ಕಾರ್ಯಕ್ರಮ ನಿಜಕ್ಕೂ ಅಭಿಮಾನದ ಆಚರಣೆಯೇ ಅಥವಾ ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ತಂತ್ರವೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಲಿಂಗಾಯಿತ ಸಮುದಾಯದ ಪ್ರಬಲ ನಾಯಕರಾದ ಯಡಿಯೂರಪ್ಪ ಮಾಸ್ ಲೀಡರ್ . ಒಂದು ಕಡೆ ಉತ್ತರ ಭಾರತದಲ್ಲಿ ಕಾಂಗ್ರೆಸ್ ಮುಕ್ತ ಮಾಡುತ್ತಿರುವ ಬಿಜೆಪಿಗೆ ದಕ್ಷಿಣದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ನೆಲೆಯಿಲ್ಲದಂತಾಗಿದೆ. ರಾಜ್ಯ ಬಿಜೆಪಿಯಲ್ಲಿ ಪ್ರಸ್ತುತ ವರ್ಚಸ್ಸಿ ನಾಯಕನೇ ಇಲ್ಲದಂತಾಗಿದೆ. ಹೀಗಾಗಿ ಯಡಿಯಯೂರಪ್ಪ ಅವರ ಹಿರಿತನ ಹಾಗೂ ಸಮುದಾಯದ ಮೇಲಿರುವ ಹಿಡಿತವನ್ನು ಮತ್ತೊಮ್ಮೆ ಬಳ್ಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ಬಿಜೆಪಿ ಹೈಕಮಾಂಡ್ ಈ ಅಭಿಮಾನೋತ್ಸವ ಕಾರ್ಯಕ್ರಮವನ್ನು ದಾಳವನ್ನು ಬಳಸಿಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಒಟ್ಟಾರೇ, ರಾಜ್ಯ ಕಂಡ ಧೀಮಂತ ನಾಯಕ, ಮುಖ್ಯಮಂತ್ರಿಗಳ ಸಾಲಿನಲ್ಲಿ ಯಡಿಯೂರಪ್ಪ ಕೂಡಾ ಒಬ್ಬರಾಗಿದ್ದು, ಕರ್ನಾಟಕದ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. #50yearsofBSY ##BSYAbhimanosthava #BJP #yediyurappa #amitsha #ಬಿಎಸ್ ವೈ50 ವರ್ಷ #ಬಿಎಸ್ ವೈಅಭಿಮಾನೋತ್ಸವ #ಬಿಜೆಪಿ #ಯಡಿಯೂರಪ್ಪ # ಅಮಿತ್ ಶಾ Post navigation ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆ; ಬಿಜೆಪಿ ಪಿತೂರಿ, ಕಾನೂನು ಹೋರಾಟ ಮಾಡ್ತೀವಿ- ಡಿಕೆ ಶಿವಕುಮಾರ್