2013ರಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಕೂಡಲೇ ಹೈಕಮಾಂಡ್ ಗಮನಕ್ಕೂ ತರದೇ ಅನ್ನಭಾಗ್ಯ ಯೋಜನೆಯಂತಹ ಪ್ರಬಲ ಯೋಜನೆ ಜಾರಿಗೆ ತಂದು ಅನ್ನರಾಮಯ್ಯ, ದೇವರಾಜು ಅರಸು ಅಂತ ಬಿಂಬಿಸಿಕೊಂಡಿದ್ದ ಸಿದ್ದರಾಮಯ್ಯ, ಎರಡನೇ ಅವಧಿಯಲ್ಲಿ ಹಲವು ವಿಚಾರಗಳಲ್ಲಿ ಟೀಕೆಗೊಳಗಾದರು. ಬೆಂಗಳೂರು: ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬಳಿಕ ಅವರ ಸುತ್ತಮುತ್ತ ಇರುತ್ತಿದ್ದ ಯಾವುದೇ ಶಾಸಕರು ರಾಜೀನಾಮೆ ನೀಡಲು ಮುಂದಾಗಲಿಲ್ಲ. ರಾಜ್ಯದ ಯಾವುದೇ ಭಾಗದಲ್ಲೂ ಸಿದ್ದು ಪರ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಲಿಲ್ಲ. ಅಹಿಂದ ಸಮುದಾಯದ ಯಾವುದೇ ನಾಯಕರು ಏನನ್ನೂ ಮಾತನಾಡಲಿಲ್ಲ. ಸ್ವತ: ಕುರುಬ ಸಮುದಾಯ ಕೂಡಾ ಎಲ್ಲೂ ಕೂಡಾ ಪ್ರತಿರೋಧ ತೋರಲಿಲ್ಲ! ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಹೌದು. 2013ರಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಕೂಡಲೇ ಹೈಕಮಾಂಡ್ ಗಮನಕ್ಕೂ ತರದೇ ಅನ್ನಭಾಗ್ಯ ಯೋಜನೆಯಂತಹ ಪ್ರಬಲ ಯೋಜನೆ ಜಾರಿಗೆ ತಂದು ಅನ್ನರಾಮಯ್ಯ, ದೇವರಾಜು ಅರಸು ಅಂತ ಬಿಂಬಿಸಿಕೊಂಡಿದ್ದ ಸಿದ್ದರಾಮಯ್ಯ, ಎರಡನೇ ಅವಧಿಯಲ್ಲಿ ಹಲವು ವಿಚಾರಗಳಲ್ಲಿ ಟೀಕೆಗೊಳಗಾದರು. ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು, ಅಧಿಕಾರಿಗಳ ಮೇಲೆ ನಿಯಂತ್ರಣ ಕಳೆದುಕೊಂಡರು. ಎಷ್ಟೋ ಅಧಿಕಾರಿಗಳು ಅವರ ಮಾತನ್ನು ಕೇಳುತ್ತಿರಲಿಲ್ಲ ಎಂಬಂತಹ ಮಾತುಗಳು ಕೇಳಿಬರುತ್ತಿದೆ. ಮೊದಲ ಐದು ವರ್ಷಗಳ ಕಾಲ ಅಧಿಕಾರಿಗಳು ಹಾಗೂ ಆಡಳಿತದ ಮೇಲಿನ ನಿಯಂತ್ರಣದಿಂದಾಗಿ ಸಚಿವರು, ಶಾಸಕರ ಮಟದಲ್ಲಿಯೂ ಗೌರವ ಹೆಚ್ಚಾಗಿತ್ತು. ಆದರೆ ಎರಡನೇ ಅವಧಿಯಲ್ಲಿ ಕೆಲವೇ ಸಚಿವರ ಮಾತಿಗೆ ಮನ್ನಣೆ ನೀಡುತ್ತಿದ್ದರು. ವರ್ಗಾವಣೆ, ಬಡ್ತಿ ಮತ್ತಿತರ ವಿಚಾರಗಳಲ್ಲಿ ಯತೀಂದ್ರ ಸಿದ್ದರಾಮಯ್ಯ ಜೊತೆಗೆ ಮಾತನಾಡಿ ಅನ್ನುತ್ತಿದ್ದರು. ಇದು ಕೂಡಾ ಅವರ ಜನಪ್ರಿಯತೆ ಕುಗ್ಗಿಸುವಲ್ಲಿ ಪ್ರಮುಖ ಕೊಡುಗೆ ನೀಡಿದೆ. ಕೆಲವೊಂದು ವಿವಾದಾತ್ಮಕ ತೀರ್ಮಾನಗಳಿಂದ ಅಹಿಂದ ವರ್ಗಗಳು ಕೂಡಾ ಸಿದ್ದರಾಮಯ್ಯ ಪರ ಅಸಮಾಧಾನ ಹೊಂದಿದ್ದವು. ಹೀಗಾಗಿ ಈ ಸಮುದಾಯದ ಯಾವುದೇ ಸಂಘಟನೆ ಕೂಡಾ ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ಇಲ್ಲಿಯವರೆಗೂ ಏನನ್ನು ಪ್ರತಿಕ್ರಿಯೆ ನೀಡಿಲ್ಲ. ಸ್ವತ: ತಮ್ಮ ಸಮುದಾಯದವರೇ ಆದ ಎಚ್.ವಿಶ್ವನಾಥ್, ಹೆಚ್.ಎಂ. ರೇವಣ್ಣ ಅವರಂತಹ ನಾಯಕರನ್ನು ನಿರ್ಲಕ್ಷಿಸುವ ಮೂಲಕ ಕುರುಬ ಸಮುದಾಯ ಕೂಡಾ ಸಿದ್ದರಾಮಯ್ಯ ರಾಜೀನಾಮೆಗೆ ಎಲ್ಲೂ ಪ್ರಬಲ ವಿರೋಧ ವ್ಯಕ್ತಪಡಿಸಲಿಲ್ಲ. ಅಧಿಕಾರ ಹಂಚಿಕೆ ಒಪ್ಪಂದ ಕುರಿತು ಡಿಕೆ ಶಿವಕುಮಾರ್ ಸಮಯ ಸಿಕ್ಕಾಗಲೆಲ್ಲಾ ಹೇಳುತ್ತಿದ್ದರೂ ನಾನೇ 5 ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು. ಆಗಲೇ ನನ್ನ ಅವಧಿ ಮುಗಿದ ಕೂಡಲೇ ರಾಜೀನಾಮೆ ನೀಡುತ್ತೇನೆ ಎಂದು ಡಿಕೆ ಶಿವಕುಮಾರ್ ಗೆ ಹೇಳಿ ಸುಮ್ಮನಿರಿಸಿದ್ದರೆ ಸಿದ್ದರಾಮಯ್ಯ ಅವರ ಮೇಲಿನ ಗೌರವ ಜನರಲ್ಲಿ ಮತ್ತಷ್ಟು ಹೆಚ್ಚಾಗುತಿತ್ತು. ಒಟ್ಟಾರೇ, ರಾಜ್ಯ ಕಂಡ ಅಪರೂಪದ ಧೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಸಿದ್ದರಾಮಯ್ಯ, ಈಗ ಯಾವುದೇ ಗಲಾಟೆಗೆ ಅವಕಾಶ ಇಲ್ಲದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ವಿರೋಧ ಪಕ್ಷಗಳು ಕೂಡಾ ಶ್ಲಾಘಿಸುತ್ತಿವೆ. #Karnataka #Leadershipchange #Siddaramaiah resign #Ahindaleaders #ಕರ್ನಾಟಕ #ನಾಯಕತ್ವಬದಲಾವಣೆ #ಸಿದ್ದರಾಮಯ್ಯ ರಾಜೀನಾಮೆ#ಅಹಿಂದ ನಾಯಕರು Share via: Facebook X (Twitter) LinkedIn More Post navigation ‘ಯಶವಂತಪುರ-ವಿಜಯಪುರ’ ದ್ವಿಸಾಪ್ತಾಹಿಕ ವಿಶೇಷ ರೈಲು ಸಂಚಾರಕ್ಕೆ ಕೇಂದ್ರ ಅಸ್ತು! ಇಂದು ನೂತನ ಸಿಎಂ ಆಯ್ಕೆ: CLP ಸಭೆಗೂ ಮುನ್ನಾ ರಾಜ್ಯಪಾಲರನ್ನು ಭೇಟಿಯಾದ DKS !ಜೂನ್ 3 ಕ್ಕೆ ಪದಗ್ರಹಣ?