ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಒತ್ತಾಸೆ, ಪ್ರಸ್ತಾವನೆ ಮೇರೆಗೆ “ಯಶವಂತಪುರ-ವಿಜಯಪುರ” ನಡುವೆ ಇದೇ ಜೂನ್ 1 ರಿಂದಲೇ ದ್ವಿಸಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಅನುಮೋದಿಸಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನವದೆಹಲಿ: ಕರ್ನಾಟಕದ ಶಕ್ತಿ ಕೇಂದ್ರ, ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಸಂಪರ್ಕ ಸೇತುವಾಗಿರುವ ವಿಜಯಪುರ ಮಧ್ಯೆ ಹೊಸ ದ್ವಿಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಒತ್ತಾಸೆ, ಪ್ರಸ್ತಾವನೆ ಮೇರೆಗೆ “ಯಶವಂತಪುರ-ವಿಜಯಪುರ” ನಡುವೆ ಇದೇ ಜೂನ್ 1 ರಿಂದಲೇ ದ್ವಿಸಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಅನುಮೋದಿಸಿದೆ. ವಿಜಯಪುರ ಭಾಗದ ಜನರ ಬಹು ದಿನದ ಬೇಡಿಕೆ ಮನಗಂಡು ಸಚಿವ ಪ್ರಲ್ಹಾದ ಜೋಶಿ ಅವರು ಕೆಲ ದಿನಗಳಿಂದ ರೈಲ್ವೆ ಇಲಾಖೆ, ಸಚಿವ ಅಶ್ವಿನಿ ವೈಷ್ಣವ ಅವರ ಗಮನ ಸೆಳೆದು ಅಂತೂ ಬೆಂಗಳೂರಿನ ಯಶವಂತಪುರದಿಂದ ವಿಜಯಪುರಕ್ಕೆ ಹೊಸ ದ್ವಿಸಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಸುಗಮಗೊಳಿಸಿದ್ದಾರೆ. ಈ ವಿಶೇಷ ಹೈಸ್ಪೀಡ್ ರೈಲು ಯಶವಂತಪುರ-ವಿಜಯಪುರ ಮಧ್ಯೆ ನೇರ ಸಂಪರ್ಕ ಕಲ್ಪಿಸಲಿದೆ. ಪ್ರತಿ ಶನಿವಾರ ಮತ್ತು ಸೋಮವಾರ 06577 ಸಂಖ್ಯೆಯ ರೈಲು ಯಶವಂತಪುರದಿಂದ ವಿಜಯಪುರಕ್ಕೆ ಹಾಗೂ ಪ್ರತಿ ಭಾನುವಾರ ಮತ್ತು ಮಂಗಳವಾರ 06578 ಸಂಖ್ಯೆಯ ವಿಶೇಷ ರೈಲು ವಿಜಯಪುರದಿಂದ ಯಶವಂತಪುರಕ್ಕೆ ಸಂಚರಿಸಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ. ರಾಜ್ಯದ ರೈಲ್ವೆ ಸೌಲಭ್ಯಕ್ಕೆ ಕೇಂದ್ರ ಬದ್ಧ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರ ಸಹಕಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ರೈಲ್ವೆ ಸೌಲಭ್ಯ ಕಲ್ಪಿಸಲು ಯಾವತ್ತೂ ಬದ್ಧವಾಗಿದೆ ಎಂದಿದ್ದಾರೆ. #YesvantpurVijayapura #Biweekly Express #Specialtrain #ಯಶವಂತಪುರವಿಜಯಪುರ #ದ್ವಿಸಾಪ್ತಾಹಿಕಎಕ್ಸ್ ಪ್ರೆಸ್ #ವಿಶೇಷ ರೈಲು Share via: Facebook X (Twitter) LinkedIn More Post navigation ಸಿದ್ದರಾಮಯ್ಯರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ! ಸಿದ್ದರಾಮಯ್ಯರಾಜೀನಾಮೆ: ಅಹಿಂದ ಸಮುದಾಯಗಳ ಶಾಸಕರು, ನಾಯಕರ ಮೌನಕ್ಕೆ ಕಾರಣವೇನು?