ವಿ.ಸೋಮಣ್ಣ



ಕೆಂಗೇರಿ ಬಳಿ ರಾಮೋಹಳ್ಳಿ ಗೇಟ್‌ನಲ್ಲಿ ರಸ್ತೆ ಕೆಳಸೇತುವೆ ಕಾಮಗಾರಿ ಉತ್ತಮವಾಗಿ ಸಾಗುತ್ತಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ 
ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.

ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿರುವ  ಮಂತ್ರಿ  ಮಾಲ್  ಹಿಂಭಾಗದಲ್ಲಿ  ಪಾದಚಾರಿ  ಸಬ್  ನಿರ್ಮಾಣಕ್ಕೆ  ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯಸಚಿವ ವಿ. ಸೋಮಣ್ಣ  ಇಂದು ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ  ಸಚಿವ ಕೃಷ್ಣಬೈರೇಗೌಡ, ಸಂಸದ ಪಿ.ಸಿ. ಮೋಹನ್  ಮತ್ತಿತರರುಉಪಸ್ಥಿತರಿದ್ದರು.

ಇದೇ  ಸಂದರ್ಭದಲ್ಲಿ  ಮಾತನಾಡಿದ  ವಿ.  ಸೋಮಣ್ಣನವರು,  ಮಲ್ಲೇಶ್ವರಂನ  ಮಂತ್ರಿ  ಮಾಲ್  ಹಿಂದೆ  ಪಾದಚಾರಿ  ಸಬ್‌ವೇಯನ್ನು  ಅಂದಾಜು₹5.5 ಕೋಟಿ ವೆಚ್ಚದಲ್ಲಿ  ನಿರ್ಮಿಸಲಾಗುತ್ತಿದೆ. ಈ ಯೋಜನೆಯಿಂದ ಪಾದಚಾರಿಗಳು ಸುರಕ್ಷಿತವಾಗಿ  ರೈಲ್ವೆ ಹಳಿ ದಾಟಲು ಸಹಾಯವಾಗುತ್ತದೆ ಎಂದರು. 

ಕೆಂಗೇರಿ ಬಳಿ ರಾಮೋಹಳ್ಳಿ ಗೇಟ್‌ನಲ್ಲಿ ರಸ್ತೆ ಕೆಳ ಸೇತುವೆ ಕಾಮಗಾರಿ ಉತ್ತಮವಾಗಿ ಸಾಗುತ್ತಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ವಿ. ಸೋಮಣ್ಣ ಹೇಳಿದರು.


ಕರ್ನಾಟಕದಲ್ಲಿ  ರೈಲ್ವೆ  ಮೂಲಸೌಕರ್ಯ  ಅಭಿವೃದ್ಧಿ  ವೇಗವಾಗಿ  ಸಾಗಿದೆ. ಬೆಂಗಳೂರು  ಕಂಟೋನ್ಮೆಂಟ್  ನಿಲ್ದಾಣವನ್ನು  ಅಂದಾಜು  ₹485 ಕೋಟಿ ವೆಚ್ಚದಲ್ಲಿ   ಪುನರಾಭಿವೃದ್ಧಿಗೊಳಿಸಲಾಗುತ್ತಿದೆ.  ಯಶವಂತಪುರ  ನಿಲ್ದಾಣದ  ಪುನರಾಭಿವೃದ್ಧಿ  ಕಾರ್ಯವೂ ಸಹ  ತ್ವರಿತವಾಗಿನಡೆಯುತ್ತಿದೆ  ಎಂದು ಅವರು ಮಾಹಿತಿ ನೀಡಿದರು. ಯಲಹಂಕದಲ್ಲಿ  ಮೆಗಾ  ಕೋಚಿಂಗ್ ಟರ್ಮಿನಲ್  ಅನ್ನುಸಹಅಭಿವೃದ್ಧಿಪಡಿಸಲುಯೋಜಿಸಲಾಗಿದೆ ಎಂದರು. 

#Bengaluru #VSomanna #PedestrianSubway #foundation stone #ಬೆಂಗಳೂರು#ವಿಸೋಮಣ್ಣ#ಪಾದಚಾರಿಸಬ್ ವೇ #ಶಂಕುಸ್ಥಾಪನೆ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link