ಬಿಡದಿ ರೈತರ ಹೋರಾಟ ಕೇವಲ ಒಂದು ಸಾಮಾನ್ಯ ಪ್ರತಿಭಟನೆಯಲ್ಲ; ಅದು ತುತ್ತು ಅನ್ನ ನೀಡುವ ಭೂಮಿ ತಾಯಿಯನ್ನು ಉಳಿಸಿಕೊಳ್ಳುವಲ್ಲಿ ರೈತರೊಡಲ ಆಕ್ರೋಶವಾಗಿದೆ ಎಂದಿದ್ದಾರೆ ಜೋಶಿ. ನವದೆಹಲಿ: ಬಿಡದಿ ಟೌನ್ ಶಿಪ್ ಗೆಂದು ಹೋದ ಜಂಟಿ ಮಾಪನ ಸಮೀಕ್ಷೆಗೆ ಹೋದ ಅಧಿಕಾರಿಗಳಿಗೆ ರೈತರ ಮಹಿಳೆಯರು ಪೊರಕೆಯಿಂದ ಥಳಿಸಿರುವ ಘಟನೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಬಿಡದಿ ರೈತರ ಹೋರಾಟ ಕೇವಲ ಒಂದು ಸಾಮಾನ್ಯ ಪ್ರತಿಭಟನೆಯಲ್ಲ; ಅದು ತುತ್ತು ಅನ್ನ ನೀಡುವ ಭೂಮಿ ತಾಯಿಯನ್ನು ಉಳಿಸಿಕೊಳ್ಳುವಲ್ಲಿ ರೈತರೊಡಲ ಆಕ್ರೋಶವಾಗಿದೆ ಎಂದಿದ್ದಾರೆ ಜೋಶಿ. ಸರ್ಕಾರದ್ದು ಅತಿರೇಕದ ನಡೆ: ಬಿಡದಿ ಟೌನ್ ಶಿಪ್ ನೆಪದಲ್ಲಿ ಅನ್ನದಾತರ ಜಮೀನು ಕಸಿದುಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆ ಅತಿರೇಕದ್ದಾಗಿದೆ.ಹಾಗಾಗೀ ರೈತ ಮಹಿಳೆಯರು ಪೊರಕೆಯನ್ನು ಕೈಗೆ ತೆಗೆದುಕೊಂಡಿದ್ದಾರೆ. ಸರ್ಕಾರ ಇನ್ನಾದರೂ ಕಣ್ತೆರುದುಕೊಳ್ಳಬೇಕಾಗಿದೆ ಎಂದು ಚಾಟಿ ಬೀಸಿದ್ದಾರೆ. ದುರಾಡಳಿತದಪರಮಾವಧಿ: ರೈತರ ಬಗ್ಗೆ ಕಾಳಜಿಯೇ ಇಲ್ಲದ ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿ ಧೋರಣೆಯಲ್ಲಿ ಮುನ್ನುಗುತ್ತಿರುವುದು ದುರಾಡಳಿತದ ಪರಮಾವಧಿ. ರೈತರ ಒಪ್ಪಿಗೆಯಿಲ್ಲದೆ ಅವರ ಜೀವನಾಧಾರವಾಗಿರುವ ಭೂಮಿಯನ್ನು ಕಿತ್ತುಕೊಂಡು ಟೌನ್ ಶಿಪ್ ಅಭಿವೃದ್ಧಿ ಯಾರ ಉದ್ಧಾರಕ್ಕಾಗಿ ಎಂದು ಜೋಶಿ ಪ್ರಶ್ನಿಸಿದ್ದಾರೆ. ಶಾಂತಿಯುತ ಬದುಕು ನೂಕುತ್ತಿರು ವರೈತರನ್ನು ಹೆದರಿಸಿ, ಬೆದರಿಸಿ ಜಮೀನು ವಶಪಡಿಸಿಕೊಳ್ಳಲು ಯತ್ನಿಸುತ್ತಿರುವ ಸರ್ಕಾರದ ಧೋರಣೆ ಖಂಡನೀಯ. ಮುಗ್ಧ ರೈತರನ್ನು ಬೆದರಿಸಿ, ಪೊಲೀಸ್ ಬಲ ಬಳಸಿ ಜಮೀನು ಕಿತ್ತುಕೊಳ್ಳಬಹುದು ಎಂದುಕೊಂಡಿದ್ದರೆ ಅದು ಭ್ರಮೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಬಿಡದಿ ಟೌನ್ಶಿಪ್ ಹೆಸರಿನಲ್ಲಿ ರೈತರ ಜಮೀನುಗಳನ್ನು ಕಸಿದುಕೊಳ್ಳಲು ಮುಂದಾಗಿರುವ ಸರ್ಕಾರದ ನಡೆ ಅತಿರೇಕವಾಗಿದೆ. ಜಂಟಿ ಮಾಪನ (JMC) ಸಮೀಕ್ಷೆಗೆ ಹೋದ ಅಧಿಕಾರಿಗಳಿಗೆ ರೈತ ಮಹಿಳೆಯರು ಪೊರಕೆಯಿಂದ ತಳಿಸಿರುವ ಘಟನೆ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಮಣೆ ಹಾಕಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧದ ಒಡಲ ಆಕ್ರೋಶ.ರೈತರ…— Pralhad Joshi (@JoshiPralhad) July 13, 2026 ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಇದು ಕೇವಲ ಬಿಡದಿ ರೈತರ ಹೋರಾಟವಲ್ಲ, ರಾಜ್ಯದ ಸಮಸ್ತ ಜನತೆಯ ಆಕ್ರೋಶ. ರೈತರ ಭೂಮಿ ಅವರ ಹಕ್ಕು, ಅವರ ಬೆಂಬಲವಿಲ್ಲದೆ, ಅವರ ಭೂಮಿಯನ್ನು ಕಿತ್ತುಕೊಳ್ಳುವುದು ಸರಿಯಲ್ಲ. ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದೂ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. #Bidadi township survey #Farmers’protest #violent #pralhad joshi #ಬಿಡದಿಟೌನ್ ಶಿಪ್ ಸರ್ವೆ#ರೈತರ ಪ್ರತಿಭಟನೆ #ಹಿಂಸಾಚಾರ #ಪ್ರಲ್ಹಾದ್ ಜೋಶಿ Share via: Facebook X (Twitter) LinkedIn More Post navigation GBA ವ್ಯಾಪ್ತಿಯಲ್ಲಿ ಅನಾಥ ವಾಹನಗಳ ತೆರವು ಕಾರ್ಯಾಚರಣೆ ಅಭಿಯಾನಕ್ಕೆ ಚಾಲನೆ! ಬೆಂಗಳೂರು: ಕುಸಿಯುತ್ತಿರುವ ಫ್ಲೈಓವರ್ನ ತಡೆಗೋಡೆ, ಸಾರ್ವಜನಿಕರ ಜೀವಕ್ಕೆ ಕುತ್ತು ತರುವ ಆತಂಕ, ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಆಕ್ರೋಶ! Video