ಕೇವಲ ಪ್ರಚಾರದಲ್ಲಿ ಬ್ಯುಸಿಯಾಗಿರುವ ಸಿಎಂ ಮತ್ತು ಡಿಸಿಎಂ ಅವರೇ, ಜನರ ಜೀವದೊಂದಿಗೆ ಆಟವಾಡದೆ, ತುರ್ತಾಗಿ ತಡೆಗೋಡೆಯನ್ನು ದುರಸ್ತಿಪಡಿಸಿ ಎಂದು ಒತ್ತಾಯಿಸಿದೆ. ಬೆಂಗಳೂರು: ಬೆಂಗಳೂರಿನ ಯಶವಂತಪುರ ರಸ್ತೆಗೆ ಸಂಪರ್ಕಿಸುವ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ಸ್ಟೇಷನ್ ಹತ್ತಿರದ ಫ್ಲೈಓವರ್‌ನ ತಡೆಗೋಡೆ ಕುಸಿಯುತ್ತಿದ್ದು, ಸಾರ್ವಜನಿಕರ ಜೀವಕ್ಕೆ ಕುತ್ತು ತರುವಂತಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಜೆಡಿಎಸ್, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದೆ. ನುಡಿದಂತೆ ನಡೆಯುತ್ತಿದ್ದೇವೆ ಎನ್ನುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಸಲಿ ಮುಖ ಇಲ್ಲಿದೆ ನೋಡಿ. ಅಧಿಕಾರದ ಮದದಲ್ಲಿ ತೇಲುತ್ತಿರುವ ಸರ್ಕಾರಕ್ಕೆ ಇಂತಹ ಗಂಭೀರ ಮೂಲಸೌಕರ್ಯ ಲೋಪಗಳು ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಟೀಕಾಪ್ರಹಾರ ನಡೆಸಿದೆ. "ನುಡಿದಂತೆ ನಡೆಯುತ್ತಿದ್ದೇವೆ ಎನ್ನುವ ಭ್ರಷ್ಟ @INCKarnataka ಸರ್ಕಾರದ ಅಸಲಿ ಮುಖ ಇಲ್ಲಿದೆ ನೋಡಿ! ಬೆಂಗಳೂರಿನ ಯಶವಂತಪುರ ರಸ್ತೆಗೆ ಸಂಪರ್ಕಿಸುವ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ಸ್ಟೇಷನ್ ಹತ್ತಿರದ ಫ್ಲೈಓವರ್‌ನ ತಡೆಗೋಡೆ ಕುಸಿಯುತ್ತಿದ್ದು, ಸಾರ್ವಜನಿಕರ ಜೀವಕ್ಕೆ ಕುತ್ತು ತರುವಂತಿದೆ.ಅಧಿಕಾರದ ಮದದಲ್ಲಿ ತೇಲುತ್ತಿರುವ… pic.twitter.com/IwJJ8bhfxR— Janata Dal Secular (@JanataDal_S) July 14, 2026 ಕೇವಲ ಪ್ರಚಾರದಲ್ಲಿ ಬ್ಯುಸಿಯಾಗಿರುವ ಸಿಎಂ ಮತ್ತು ಡಿಸಿಎಂ ಅವರೇ, ಜನರ ಜೀವದೊಂದಿಗೆ ಆಟವಾಡದೆ, ತುರ್ತಾಗಿ ತಡೆಗೋಡೆಯನ್ನು ದುರಸ್ತಿಪಡಿಸಿ ಎಂದು ಒತ್ತಾಯಿಸಿದೆ. #Bengaluru #Sandal Soap Factory Metro Station #flyover #JDS #ಬೆಂಗಳೂರು#ಸ್ಯಾಂಡಲ್ ಸೋಪು ಪ್ಯಾಕ್ಟರಿ ಮೆಟ್ರೋ ನಿಲ್ದಾಣ #ಮೇಲ್ಸುತುವೆ#ಜೆಡಿಎಸ್ Share via: Facebook X (Twitter) LinkedIn More Post navigation ಬಿಡದಿ ರೈತ ಮಹಿಳೆಯರ ಪೊರಕೆ ಸೇವೆ, ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ! ಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರತಿಷ್ಠೆ ನಡುವೆ ಬೀದಿಗೆ ಬಂದ ರೈತರು!