ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸಂಪುಟದ ಸಚಿವರ ಸಾಂದರ್ಭಿಕ ಚಿತ್ರ



ಮೂರು ವರ್ಷಗಳ ಅವಧಿಯಲ್ಲಿ 35, 99 ಕೋಟಿರೂ. ವೆಚ್ಚದಲ್ಲಿ ಕರ್ನಾಟಕ ಅಗ್ರಿಟೆಕ್ ಮಿಷನ್ 2026ನ್ನು ಜಾರಿಗೆ ತರಲು ನಿರ್ಣಯಿಸಲಾಗಿದೆ ಎಂದರು.

ಬೆಂಗಳೂರು: ಕರ್ನಾಟಕ ಅಗ್ರಿ ಟೆಕ್ ಮಿಷನ್2026 ಅನ್ನು ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಭೆ ಬಳಿಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಈ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಕೃಷಿ ಸಲಹಾ ಸೇವೆಗಳು, ಬೆಳೆ ಮೇಲ್ವಿಚಾರಣೆ ಮತ್ತು ಬೆಳೆ ಗುರುತಿಸುವಿಕೆ ವ್ಯವಸ್ಥೆಗಳನ್ನು ಬಲಪಡಿಸಲು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ, ಡ್ರೋನ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತಿತರ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ಉದ್ದೇಶದಿಂದ ಮೂರು ವರ್ಷಗಳ ಅವಧಿಯಲ್ಲಿ 35, 99 ಕೋಟಿರೂ. ವೆಚ್ಚದಲ್ಲಿ ಕರ್ನಾಟಕ ಅಗ್ರಿ ಟೆಕ್ ಮಿಷನ್ 2026ನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಹಿಂದುಳಿದವರ್ಗಗಳಕಲ್ಯಾಣಇಲಾಖೆಯಡಿಕಾರ್ಯನಿರ್ವಹಿಸುತ್ತಿರುವಹಾಲಿಇರುವಹಾಗೂಹೊಸದಾಗಿಮಂಜೂರಾದ ವಿದ್ಯಾರ್ಥಿನಿಲಯಗಳಿಗೆ  29. 98 ಕೋಟಿ ಅಂದಾಜು ವೆಚ್ಚದಲ್ಲಿ ಹಾಸಿಗೆಗಳನ್ನು ಖರೀದಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.

ಈಸಂದರ್ಭದಲ್ಲಿ, ಆರೋಗ್ಯಮತ್ತುಕುಟುಂಬಕಲ್ಯಾಣಇಲಾಖೆಸಚಿವರಾದಯು.ಟಿ.ಖಾದರ್ಫರೀದ್, ವಿಧಾನಪರಿಷತ್ ಸದಸ್ಯರಾದಗೋವಿಂದರಾಜು,ಮಧುಮಾದೇಗೌಡ ಸೇರಿದಂತೆ ಮುಖ್ಯಮಂತ್ರಿಗಳ ಕಚೇರಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link