ಚೆನ್ನಮ್ಮ ಪಾರ್ಥಿವ ಶರೀರದ ಅಂತಿಮ ಯಾತ್ರೆ


ಅಂತಿಮ ಯಾತ್ರೆಗೂ ಮುನ್ನ ಚೆನ್ನಮ್ಮ ಅವರಿಗೆ ಕುಟುಂಬಸ್ಥರು ಕೊನೆಯ ಪೂಜೆ ಸಲ್ಲಿಸಿದರು. ಚೆನ್ನಮ್ಮ ಪಾರ್ಥಿವ ಶರೀರಕ್ಕೆ ದೇವೇಗೌಡರು ಮೊದಲ ಪೂಜೆ ಮಾಡಿದರು. ಚೆನ್ನಮ್ಮರಿಗೆ ಭಾರತದ ಬಾವುಟ ಹೊದಿಸಿ ಗೌರವ ಸಲ್ಲಿಸಲಾಯಿತು.

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ  ಪತ್ನಿ ಚೆನ್ನಮ್ಮ ಅವರ ಅಂತಿಮ ಯಾತ್ರೆ ಆರಂಭವಾಗಿದೆ. ಚೆನ್ನಮ್ಮ (Chennamma) ಅವರ ಪಾರ್ಥಿವ ಶರೀರ ಹೊತ್ತ ವಾಹನ ಬೆಂಗಳೂರಿನಿಂದ ಹಾಸನ ಕಡೆಗೆ ಹೊರಟಿದೆ.

ಅಂತಿಮ ಯಾತ್ರೆಗೂ ಮುನ್ನ ಚೆನ್ನಮ್ಮ ಅವರಿಗೆ ಕುಟುಂಬಸ್ಥರು ಕೊನೆಯ ಪೂಜೆ ಸಲ್ಲಿಸಿದರು. ಚೆನ್ನಮ್ಮ ಪಾರ್ಥಿವ ಶರೀರಕ್ಕೆ ದೇವೇಗೌಡರು ಮೊದಲ ಪೂಜೆ ಮಾಡಿದರು. ಚೆನ್ನಮ್ಮರಿಗೆ ಭಾರತದ ಬಾವುಟ ಹೊದಿಸಿ ಗೌರವ ಸಲ್ಲಿಸಲಾಯಿತು.

ಅಂತಿಮ ಯಾತ್ರೆ ಹೊರಟ ವಾಹನದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮತ್ತು ಮೊಮ್ಮಕ್ಕಳು ಕುಳಿದಿದ್ದಾರೆ. ಹಾಸನ ಕಡೆಗೆ ಹೊರಟ ಚೆನ್ನಮ್ಮ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರು, ಅಭಿಮಾನಿಗಳು ಕಣ್ಣೀರ ವಿದಾಯ ಹೇಳಿದ್ದಾರೆ.

ರಾತ್ರಿ: ಹೊಳೆನರಸೀಪುರದಲ್ಲಿರುವ ಹೆಚ್.ಡಿ.ರೇವಣ್ಣ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ. ಮತ್ತೆ ಮಾರನೇ ದಿನ (ಜು.20) ಬೆಳಗ್ಗೆ 7:00 ರಿಂದ 9:30 ಗಂಟೆಯವರೆಗೆ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದೆ.

ಬೆಳಗ್ಗೆ 10 ಗಂಟೆಗೆ ಹೊಳೆನರಸೀಪುರದಿಂದ ನಿರ್ಗಮಿಸಿ, ಬೆಳಗ್ಗೆ 11:30ಕ್ಕೆ ಮಾವಿನಕೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲು ಕ್ಯಾತನಹಳ್ಳಿಯಲ್ಲಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ನೆರವೇರಲಿದೆ. ಮಧ್ಯಾಹ್ನ 2 ರಿಂದ ಸಂಜೆ 4:15 ಗಂಟೆವರೆಗೆ ಅಂತ್ಯಕ್ರಿಯೆ ವಿಧಿವಿಧಾನಗಳು ನಡೆಯಲಿವೆ.

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link