ಬಳ್ಳಾರಿ ಪಾದಯಾತ್ರೆಯಲ್ಲಿ ರೈತ ಮಹಿಳೆಯರ ಆತಿಥ್ಯ ಸ್ವೀಕರಿಸಿ, ರೈತರ ಹಕ್ಕುಗಳ ಹೋರಾಟಕ್ಕೆ ಸಂಕಲ್ಪ

ವಾಲ್ಮೀಕಿ ನಿಗಮ ಹಗರಣ, ಬರ ಪರಿಸ್ಥಿತಿ ಹಾಗೂ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ಕೈಗೊಂಡಿರುವ ‘ರಾಯಚೂರು ಟು ಬಳ್ಳಾರಿ’ ಪಾದಯಾತ್ರೆ ಶುಕ್ರವಾರ ಯಶಸ್ವಿಯಾಗಿ 4ನೇ ದಿನಕ್ಕೆ ಕಾಲಿಟ್ಟಿದರೆ.

ವಾಲ್ಮೀಕಿ ನಿಗಮ ಹಗರಣ, ಬರ ಪರಿಸ್ಥಿತಿ ಹಾಗೂ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ಕೈಗೊಂಡಿರುವ ‘ರಾಯಚೂರು ಟು ಬಳ್ಳಾರಿ’ ಪಾದಯಾತ್ರೆ ಶುಕ್ರವಾರ ಯಶಸ್ವಿಯಾಗಿ 4ನೇ ದಿನಕ್ಕೆ ಕಾಲಿಟ್ಟಿದರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಸಾಗುತ್ತಿರುವ ಈ ನಡಿಗೆಯು, ಉತ್ತರ ಕರ್ನಾಟಕ ಭಾಗದಲ್ಲಿ ಅವರ ರಾಜಕೀಯ ನಾಯಕತ್ವವನ್ನು ಮತ್ತಷ್ಟು ಬಲಪಡಿಸಲು ಪ್ರಮುಖ ವೇದಿಕೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜನಸಾಮಾನ್ಯರ ಜೊತೆ ಸಂವಾದ: ಸಿಂಧನೂರಿನಲ್ಲಿ 4ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದ ವಿಜಯೇಂದ್ರ, ರೈತ ಮಹಿಳೆಯೊಂದಿಗೆ ಹೊಲದಲ್ಲಿ ಭೋಜನ ಸವಿದರು. ಬಳಿಕ ಅನ್ನದಾತರ ಹಕ್ಕಿಗಾಗಿ ಇನ್ನಷ್ಟು ಬದ್ಧತೆಯಿಂದ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು. ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, ಸರ್ಕಾರದ ಪಂಚ ಗ್ಯಾರಂಟಿ ಭ್ರಮೆಯಿಂದಾಗಿ ಬಡವರು, ರೈತರು, ವೃದ್ಧರು ಹಾಗೂ ಅಂಗವಿಕಲರು ಕಷ್ಟಪಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಾಮಾಜಿಕ ಭದ್ರತಾ ಪಿಂಚಣಿ ಬಾಕಿ: ಕಳೆದ 6 ತಿಂಗಳಿನಿಂದ ವೃದ್ಧಾಪ್ಯ ಹಾಗೂ ಅಂಗವಿಕಲರ ಮಾಸಾಶನ ತಲುಪಿಲ್ಲ ಮತ್ತು ಗಂಗಾ ಕಲ್ಯಾಣ ಯೋಜನೆಯ ಅಡಿ ಬಡವರಿಗೆ ಸೂಕ್ತ ಸೌಲಭ್ಯ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ವಿಪಕ್ಷ ನಾಯಕ ಅಶೋಕ್ ಗೈರುಹಾಜರಿ: ಮಂಡಿ ನೋವಿನ ಕಾರಣದಿಂದಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ. ಆದಾಗ್ಯೂ, ಸ್ಥಳೀಯ ನಾಯಕರನ್ನು ಒಗ್ಗೂಡಿಸಿ ವಿಜಯೇಂದ್ರ ಸಾಗುತ್ತಿರುವುದು ಪಕ್ಷದ ಆಂತರಿಕ ವಲಯದಲ್ಲಿ ಗಮನ ಸೆಳೆದಿದೆ.

ಬೆಂಗಳೂರು-ಮೈಸೂರು ಮುಡಾ ಪಾದಯಾತ್ರೆಯ ನಂತರ ಉತ್ತರ ಕರ್ನಾಟಕದಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಈ ಬೃಹತ್ ಹೋರಾಟವು, ಅವರ ನಾಯಕತ್ವಕ್ಕೆ ಹೊಸ ಚೈತನ್ಯ ತಂದಿದೆ.

#Ballaricalo #BYVijayendra #Conversationcommonpeople #Socialsecurity #ಬಲ್ಲಾರಿ ಚಲೋ #ಬಿವೈವಿಜಯೇಂದ್ರ #ಜನಸಾಮಾನ್ಯರ ಜೊತೆ ಸಂವಾದ #ಸಾಮಾಜಿಕ ಭದ್ರತಾ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link