ಬಿಕೆ ಹರಿಪ್ರಸಾದ್


ಕಾಂಗ್ರೆಸ್ ರ್‍ಯಾಲಿಯಿಂದಾಗಿ ಉಂಟಾದ ಭಾರಿ ಟ್ರಾಫಿಕ್ ಜಾಮ್ ಇದಕ್ಕೆ ಕಾರಣ ಎಂದು ಪೋಷಕರು ದೂಷಿಸಿದರು ಮತ್ತು ಪರೀಕ್ಷಾ ಕೇಂದ್ರದ ಬಳಿ ಸೂಕ್ತ ಸಂಚಾರ ನಿರ್ವಹಣೆ ಇಲ್ಲದಿರುವುದನ್ನು ಆರೋಪಿಸಿದ್ದಾರೆ. 

ಬಿಕೆ ಹರಿಪ್ರಸಾದ್

ಬೆಂಗಳೂರು: ಕಾಂಗ್ರೆಸ್ ಪಕ್ಷ ಭಾನುವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮಾವೇಶದಿಂದ ನೀಟ್ ಯುಜಿ ಮರು ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು ಎಂಬ ಆರೋಪ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಜಟಾಪಟಿಗೆ ಕಾರಣವಾಗಿದೆ.

ಸಮಾವೇಶದಿಂದ ವಿದ್ಯಾರ್ಥಿಗಳು ಸರ್ಕಾರಿ ರಾಮನಾರಾಯಣ್ ಚೆಲ್ಲಾರಾಮ್ ಕಾಲೇಜು ಕೇಂದ್ರಕ್ಕೆ ತಲುಪಲು ವಿಳಂಬವಾಗಿದ್ದರಿಂದ ನೀಟ್ ಯುಜಿ ಮರು ಪರೀಕ್ಷೆಗಾಗಿ ಮಧ್ಯಾಹ್ನ 1:30 ಕ್ಕೆ ಗೇಟ್‌ಗಳು ಮುಚ್ಚಲ್ಪಟ್ಟವು. ಕಟ್‌-ಆಫ್ ಸಮಯವಾದ ಮಧ್ಯಾಹ್ನ 1:30 ರ ಕೆಲವೇ ನಿಮಿಷಗಳ ನಂತರ ಬಂದ ನಾಲ್ವರು ಅಭ್ಯರ್ಥಿಗಳಿಗೆ ಪ್ರವೇಶ ನಿರಾಕರಿಸಲಾಯಿತು. ಇವರಲ್ಲಿ ಮೂವರು ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರದ ಗೇಟಿನ ಮುಂದೆ ನಿಂತು ತೆರೆಯುಂತೆ ಅಳುತ್ತಿದ್ದ ದೃಶ್ಯ ಕೆಲ ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. 

ಇನ್ನು ಕಾಂಗ್ರೆಸ್ ರ್‍ಯಾಲಿಯಿಂದಾಗಿ ಉಂಟಾದ ಭಾರಿ ಟ್ರಾಫಿಕ್ ಜಾಮ್ ಇದಕ್ಕೆ ಕಾರಣ ಎಂದು ಪೋಷಕರು ದೂಷಿಸಿದರು ಮತ್ತು ಪರೀಕ್ಷಾ ಕೇಂದ್ರದ ಬಳಿ ಸೂಕ್ತ ಸಂಚಾರ ನಿರ್ವಹಣೆ ಇಲ್ಲದಿರುವುದನ್ನು ಆರೋಪಿಸಿದ್ದಾರೆ. ಈ ವಿಚಾರ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿ ನಾಯಕರಾದ ಸಿ.ಟಿ. ರವಿ, ಸಂಸದ ತೇಜಸ್ವಿ ಸೂರ್ಯ ಮತ್ತಿತರರು  ಕಾಂಗ್ರೆಸ್ ವಿರುದ್ಧ ಮುಗಿಬಿದಿದ್ದು, ಟೀಕಾ ಪ್ರಹಾರ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಂಸದ  ತೇಜಸ್ವಿ ಸೂರ್ಯ, “ಕಾಂಗ್ರೆಸ್ ಪಕ್ಷವು ತನ್ನ ಸಮಾವೇಶಕ್ಕೆ ಬೇರೆ ಯಾವುದೇ ದಿನವನ್ನು ಆಯ್ಕೆ ಮಾಡಬಹುದಾಗಿತ್ತು. ಆದರೆ ಸಾವಿರಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುತ್ತಿದ್ದ ದಿನವನ್ನೇ ಆಯ್ಕೆ ಮಾಡಿಕೊಂಡಿದೆ. ಭಾರೀ ಟ್ರಾಫಿಕ್ ಜಾಮ್‌ನಿಂದ ಅನೇಕ ವಿದ್ಯಾರ್ಥಿಗಳು ತಪ್ಪಿಸಿಕೊಂಡರು ಎಂದು ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ತೇಜಸ್ವಿಯವರ ಆರೋಪ ಅರ್ಧಸತ್ಯ ಮತ್ತು ವ್ಯವಸ್ಥಿತ ಆಕ್ರೋಶ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನೂ ಈ ವಿಚಾರ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ ಸಮಾವೇಶದಿಂದ ವಿದ್ಯಾರ್ಥಿಗಳ ಪರೀಕ್ಷೆ ಬರೆಯಲು ತೊಂದರೆಯಾಗಿದ್ದಲ್ಲಿ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದರು. ಬಿಜೆಪಿ ಮೂರು ಬಾರಿ ನೀಟ್ ಪರೀಕ್ಷೆ ಮುಂದೂಡಿತ್ತು ಎಂದು ವಾಗ್ದಾಳಿ ನಡೆಸಿದರು.

#NEETUGEXAM #Bengalurutrafficjam #BJP #Congress #ನೀಟ್ ಯುಜಿ ಪರೀಕ್ಷೆ #ಬೆಂಗಳೂರುಟ್ರಾಫಿಕ್ ಜಾಮ್ #ಬಿಜೆಪಿ #ಕಾಂಗ್ರೆಸ್

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link