80% ರೈತರು ಭೂಮಿ ನೀಡಲು ಒಪ್ಪಿಗೆ ನೀಡಿಲ್ಲ ಎಂಬ ಕುಮಾರಸ್ವಾಮಿ ಅವರ ಮಾತು ಅಪ್ಪಟ ಸುಳ್ಳು. ನಮ್ಮ ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ಅನಿತಾ ಕುಮಾರಸ್ವಾಮಿ ಅವರು ಪತ್ರ ಬರೆದು, “35 ಎಕರೆ ಜಮೀನು ಅನಿತಾ ಕುಮಾರಸ್ವಾಮಿ ಅವರಾದ ನನ್ನ ಹೆಸರಿನಲ್ಲಿ ಖಾತೆ ಪಹಣಿ ಪಡೆದಿದ್ದಾರೆ ಎಂದು ಆರೋಪಿಸಿದರು. ಎಂ. ಲಕ್ಷ್ಮಣ್ ಬೆಂಗಳೂರು: ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಣ ಜಟಾಪಟಿ ಮುಂದುವರೆದಿದೆ. ಕೆಪಿಸಿಸಿಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್, ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದಾಗ 23-09-2006ರಲ್ಲಿ ಬೆಂಗಳೂರಿನ ಜನಸಂಖ್ಯೆ ಪ್ರಮಾಣ ಕಡಿಮೆ ಮಾಡಲು ಬೆಂಗಳೂರಿನ ಸುತ್ತಮುತ್ತ ಐದು ಕಡೆ 60,700 ಎಕರೆಯಲ್ಲಿ ಟೌನ್ ಶಿಪ್ ಮಾಡಲು ತೀರ್ಮಾನ ಮಾಡುತ್ತಾರೆ. ನಂದಗುಡಿ, ಕಸಬಾ, ಬಿಡದಿ, ಸೋಲೂರು, ಸಾತನೂರಿನಲ್ಲಿ ಮಾಡಲು ಮುಂದಾಗುತ್ತದೆ. ಈ ಪೈಕಿ ಮುಂಚೂಣಿಯಲ್ಲಿರುವುದು ಬಿಡದಿಯಲ್ಲಿರುವ 9,484 ಎಕರೆಯಲ್ಲಿ ಟೌನ್ ಶಿಪ್ ಮಾಡಲು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದರು. 7,481 ಎಕರೆ ಜಮೀನನ್ನು ನಮ್ಮ ಸರ್ಕಾರ 27-05-2026ರಂದು ಮತ್ತೊಮ್ಮೆ ಅಧಿಸೂಚನೆ ಹೊರಡಿಸಿದೆ. ಈ ಯೋಜನೆಯಲ್ಲಿ 7ನೇ ಬಾರಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗುತ್ತಿದೆ. ಈ ಯೋಜನೆಯಲ್ಲಿ ಜಮೀನು ಪಡೆದು ನಿವೇಷನ ಮಾಡಿ ಅದನ್ನು ಬೇರೆಯವರಿಗೆ ಹಂಚುವ ಉದ್ದೇಶವಿಲ್ಲ. ಕೈಗಾರಿಕಾ ಕಾರಿಡಾರ್ ಮಾಡುವ 7481 ಎಕರೆ ಜತೆಗೆ ರೆಸಿಡೆನ್ಷಿಯಲ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಭೂಮಿಯನ್ನು ವಶಪಡಿಸಿಕೊಂಡು ನೀಡುವುದಷ್ಟೇ ನಮ್ಮ ಕೆಲಸ. ಉಳಿದ ಟೌನ್ ಶಿಪ್ ಅನ್ನು ಅವರೇ ನಿರ್ಮಾಣ ಮಾಡಿಕೊಳ್ಳುತ್ತಾರೆ ಎಂದರು. 80% ರೈತರು ಭೂಮಿ ನೀಡಲು ಒಪ್ಪಿಗೆ ನೀಡಿಲ್ಲ ಎಂಬ ಕುಮಾರಸ್ವಾಮಿ ಅವರ ಮಾತು ಅಪ್ಪಟ ಸುಳ್ಳು. ನಮ್ಮ ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ಅನಿತಾ ಕುಮಾರಸ್ವಾಮಿ ಅವರು ಪತ್ರ ಬರೆದು, “35 ಎಕರೆ ಜಮೀನು ಅನಿತಾ ಕುಮಾರಸ್ವಾಮಿ ಅವರಾದ ನನ್ನ ಹೆಸರಿನಲ್ಲಿ ಖಾತೆ ಪಹಣಿ ಮಾಡಿಸಲಾಗಿದ್ದು, ಕೆಲವು ಕಾರಣಾಂತರಗಳಿಂದ ವಿನಯ್ ಗೌಡ ಎಂ.ಜಿ ಅವಿಗೆ ಎಸ್ಪಿಎ ಮೂಲಕ ಜಮೀನು ನೀಡಿರುತ್ತೇನೆ. ಈಗ ಆ ಜಮೀನನ್ನು ಸಂಪೂರ್ಣವಾಗಿ ನನ್ನ ಹೆಸರಿಗೆ ಪಡೆದುಕೊಂಡಿದ್ದು, ಹೀಗಾಗಿ ಈ ಜಮೀನು ಭೂಸ್ವಾಧೀನವಾದಲ್ಲಿ ಇದಕ್ಕೆ ಸಂಬಂಧಿಸಿದ ದಾಖಲಾತಿ, ನೋಟೀಸ್ ಗಳನ್ನು, ಹಣವನ್ನು ನನ್ನ ವಿಳಾಸಕ್ಕೆ ನೀಡಬೇಕೆಂದು ಮನವಿ ಮಾಡುತ್ತೇನೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ. ವಿನಯ್ ಗೌಡ ಎಂಬುವವರ ಬೇನಾಮಿ ಹೆಸರಿನಲ್ಲಿ ಈ ಜಮೀನನ್ನು ಪಡೆಯಲಾಗಿದೆ. ಈಗ ಬಿಎಂಆರ್ ಡಿಎ ಮೂಲಕ ಪ್ರತಿ ಎಕರೆಗೆ 2.14 ಕೋಟಿ ಪರಿಹಾರ ಘೋಷಿಸಲಾಗಿದೆ. ಹಣ ಪಡೆದು ಜಮೀನು ನೀಡಬಹುದು ಅಥವಾ 40:60 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಭೂಮಿ ಪಡೆಯಬಹುದು. ಈ 40:60 ಅನುಪಾತದ ಭೂಮಿ ಪ್ರಸ್ತಾವನೆ ಕುಮಾರಸ್ವಾಮಿ ಅವರದ್ದು. ಈಗ ನಮ್ಮ ಕಾಂಗ್ರೆಸ್ ಸರ್ಕಾರ 50:50 ಅನುಪಾತದಲ್ಲಿ ಅಭಿವೃದ್ಧಿ ಪಡಿಸಿದ ಭೂಮಿ ನೀಡಲು ತೀರ್ಮಾನಿಸಲಾಗಿದೆ. ಮೂಲಸೌಕರ್ಯ ಬಳಕೆ ನಂತರ ಉಳಿಯುವ ಜಾಗದಲ್ಲಿ ರೈತರಿಗೆ 9,600 ಚ.ಅಡಿಯಷ್ಟು ಭೂಮಿಯನ್ನು ನೀಡಲಾಗುತ್ತಿದೆ. ಅದನ್ನು ರೈತರು ಯಾರಿಗೆ ಬೇಕಾದರೂ ಮಾರಾಟ ಮಾಡಿಕೊಳ್ಳಬಹುದು. ಕುಮಾರಸ್ವಾಮಿ ಅವರು 8 ಸಾವಿರ ಚ.ಅಡಿಗಳನ್ನು ಪರಿಹಾರವಾಗಿ ನೀಡಲು ನಿರ್ಧರಿಸಿದ್ದರು. ನಮ್ಮ ಸರ್ಕಾರ 1,600 ಚ.ಅಡಿಗಳಷ್ಟು ಜಮೀನು ಹೆಚ್ಚು ನೀಡುತ್ತಿದೆ ಎಂದು ಮಾಹಿತಿ ನೀಡಿದರು. ಅಶೋಕ್ ಅವರು ನಾಲಾಯಕ್ ವಿರೋಧ ಪಕ್ಷದ ನಾಯಕರು. ಬಾಯಿಗೆ ಬಂದಂತೆ ಸುಳ್ಳು ಹೇಳುತ್ತಾರೆ. ಇಂತಹ ಸುಳ್ಳು ಹೇಳುವ ವ್ಯಕ್ತಿ ಪ್ರಪಂಚದಲ್ಲೇ ಯಾರು ಇಲ್ಲವೇನೋ. ಸುಳ್ಳು ಹೇಳುವುದರಲ್ಲಿ ಪಿಹೆಚ್ಡಿ ಮಾಡಿಕೊಂಡಿದ್ದಾರೆ. ಕಸದ ಬಗ್ಗೆ ಮಾತನಾಡಿ 39 ಸಾವಿರ ಕೋಟಿ ಹಗರಣ ಎಂದು ಆರೋಪ ಮಾಡಿದರು, ದಾಖಲೆ ಮಾತ್ರ ಬಿಡುಗಡೆ ಮಾಡಲಿಲ್ಲ. ಸುಳ್ಳು ಹೇಳುವುದರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಈ ಬಿಡದಿ ಟೌನ್ ಶಿಪ್ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ರಾಜಕೀಯವಾಗಿ ಒಳಿಸಿಕೊಳ್ಳುವ ಪ್ರಯತ್ನ ಮಾಡಬಹುದು. ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಯೋಜನೆ ಮಾಡಲಾಗುತ್ತಿದೆ. ಈ ಯೋಜನೆಯಿಂದ ಮುಂದೆ ಜನರಿಗೆ ಅನ್ಯಾಯವಾಗುತ್ತದೆ ಎಂದು ಅನಿಸಿದರೆ ಅದಕ್ಕೆ ದಾಖಲೆ ಬಿಡುಗಡೆ ಮಾಡಿ. ಈ ಯೋಜನೆ ವಿರುದ್ಧ ಧರಣಿ ಮಾಡುತ್ತಿರುವ ಜನರಲ್ಲಿ ಕೆಲವು ನೈಜ್ಯ ರೈತರೂ ಇರಬಹುದು. ಈ ಹೋರಾಟಕ್ಕೆ ಕರೆತಂದಿದ್ದವರು ಯಾರು? ರಾಜಕೀಯವಾಗಿ ಸಂಪೂರ್ಣವಾಗಿ ಕಳೆದು ಹೋಗುತ್ತೇವೆ ಎಂಬ ಉದ್ದೇಶದಿಂದ, ಜೆಡಿಎಸ್ ಕಾರ್ಯಕರ್ತರನ್ನು ಕರೆತಂದು ಹಸಿರು ಶಾಲು ಹಾಕಿ ಹೋರಾಟ ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು. ಈ ಯೋಜನೆ ನಿಮ್ಮ ಕೂಸು, ನಮ್ಮದಲ್ಲ. ಈ ಕೂಸು ಹುಟ್ಟಿದ್ದು ನಿಮ್ಮ ಆಡಳಿತ ಅವಧಿಯಲ್ಲಿ, ಇದು ಬೆಳೆದಿದ್ದು ಬಿಜೆಪಿ ಆಡಳಿತದಲ್ಲಿ. ಈ ಅವಧಿಯಲ್ಲಿ ಬೆಂಗಳೂರು ಹಾಗೂ ಟೌನ್ ಶಿಪ್ ಯೋಜನೆಗೆ ಉಸ್ತುವಾರಿ ಸಚಿವರಾಗಿದ್ದವರು ಆರ್.ಅಶೋಕ್ ಅವರು. 2006ರಿಂದ ಅವರು ಇದ ಜವಾಬ್ದಾರಿ ಭಾಗವಾಗಿದ್ದರು, ಕಂದಾಯ ಸಚಿವರೂ ಆಗಿದ್ದರು. ಅವರ ಜಾಗವು ಈ ಭಾಗದಲ್ಲಿದೆ. ಅವರು ಅವರ ಪಾಡಿಗೆ ಹೋರಾಟ ಮಾಡುತ್ತಾರೆ, ಇವರು ಇವರ ಪಾಡಿಗೆ ಹೋರಾಟ ಮಾಡುತ್ತಾರೆ. ಇದು ದುರಂತ. ಇದೆಲ್ಲದಕ್ಕೂ ರಾಜ್ಯ ಸರ್ಕಾರ ಅಂತ್ಯವಾಡುತ್ತದೆ ಎಂದು ಭಾವಿಸಿದ್ದೇನೆ ಎಂದು ತಿಳಿಸಿದರು. #Bidaditownship #Congress #Lakshman slams #JDS #ಬಿಡದಿಟೌನ್ ಶಿಪ್ #ಕಾಂಗ್ರೆಸ್#ಲಕ್ಷ್ಮಣ್ #ಜೆಡಿಎಸ್ Share via: Facebook X (Twitter) LinkedIn More Post navigation ಸಿಎಂ ಡಿಕೆ ಶಿವಕುಮಾರ್ ಆಪ್ತ , ಕಾಂಗ್ರೆಸ್ ಶಾಸಕ, ಇಕ್ಬಾಲ್ ಹುಸೇನ್ ಗೆ ಹೃದಯಾಘಾತ! ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಸೇರಿ ಇತರ 17 ಆರೋಪಿಗಳಿಗೆ ಹೈಕೋರ್ಟ್ ನೋಟಿಸ್ !