ಕನ್ನಡಿಗರ ಬೆವರಿನ ತೆರಿಗೆ ಹಣ ಹೇಗೆ “ಗುಂಡಿ” ಪಾಲಾಗುತ್ತಿದೆ ಅನ್ನೋದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿ! ಒಂದು ರಸ್ತೆಗುಂಡಿ ಮುಚ್ಚಲು ಬರೋಬ್ಬರಿ ₹1 ಲಕ್ಷ ಖರ್ಚು ಮಾಡಲಾಗುತ್ತಿದೆ ಎಂದರೆ, ಇದು ಅಭಿವೃದ್ಧಿಯೋ ಅಥವಾ ವ್ಯವಸ್ಥಿತ ಲೂಟಿಯೋ? ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರು: ಡಿಸಿಎಂ @DKShivakumar ಅವರೇ,ಬೆಂಗಳೂರಿನ ರಸ್ತೆಗುಂಡಿಗಳ ಮೇಲೆ ಡಾಂಬರು ಹಾಕುತ್ತಿದ್ದೀರೋ ಅಥವಾ 24 ಕ್ಯಾರೆಟ್ ಚಿನ್ನದ ಲೇಪನ ಮಾಡುತ್ತಿದ್ದೀರೋ? ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ. ಕನ್ನಡಿಗರ ಬೆವರಿನ ತೆರಿಗೆ ಹಣ ಹೇಗೆ “ಗುಂಡಿ” ಪಾಲಾಗುತ್ತಿದೆ ಅನ್ನೋದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿ! ಒಂದು ರಸ್ತೆಗುಂಡಿ ಮುಚ್ಚಲು ಬರೋಬ್ಬರಿ ₹1 ಲಕ್ಷ ಖರ್ಚು ಮಾಡಲಾಗುತ್ತಿದೆ ಎಂದರೆ, ಇದು ಅಭಿವೃದ್ಧಿಯೋ ಅಥವಾ ವ್ಯವಸ್ಥಿತ ಲೂಟಿಯೋ? ಎಂದು ಪ್ರಶ್ನಿಸಿದ್ದಾರೆ. ರಸ್ತೆಗಳ ಸ್ಥಿತಿ ನೋಡಿದರೆ ನರಕದಂತಿದೆ, ಆದರೆ ಬಿಲ್ ಮಾತ್ರ ಸ್ವರ್ಗದಷ್ಟಿದೆ. ಬೆಂಗಳೂರಿನ ರಸ್ತೆಗಳು ವಾಹನ ಸವಾರರಿಗೆ ಮೃತ್ಯುಕೂಪಗಳಾಗಿವೆ. ಆದರೆ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಮಾತ್ರ ಇದು ಹಣ ಲೂಟಿ ಮಾಡುವ “ಕಲ್ಪವೃಕ್ಷ”ವಾಗಿದೆ. ‘ಬ್ರ್ಯಾಂಡ್ ಬೆಂಗಳೂರು’ ಹೆಸರಿನಲ್ಲಿ ಜನರ ಕಣ್ಣಿಗೆ ಮಣ್ಣೆರಚಿ, ಹಗಲು ದರೋಡೆ ಮಾಡುತ್ತಿರುವ @INCKarnataka ಸರ್ಕಾರದ ಈ ಭ್ರಷ್ಟಾಚಾರಕ್ಕೆ ಜನ ದಿಟ್ಟ ಉತ್ತರ ನೀಡುವ ದಿನ ಬಹಳ ದೂರವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. #CongressFailsKarnataka #CongressLootsKarnataka #BJP #RASHOK # ಕರ್ನಾಟಕ ಕಾಂಗ್ರೆಸ್ ವಿಫಲ #ಕಾಂಗ್ರೆಸ್ ಲೂಟಿ #ಬಿಜೆಪಿ # ಆರ್ ಅಶೋಕ Share via: Facebook X (Twitter) LinkedIn More Post navigation ತಳವಾರ ಸಮುದಾಯದವರಿಗೆ ST ಜಾತಿ ಪ್ರಮಾಣ ಪತ್ರ ನೀಡಲು ಪ್ರಾಮಾಣಿಕ ಪ್ರಯತ್ನ- ಪ್ರಿಯಾಂಕ್ ಖರ್ಗೆ ಏರ್ ಶೋ ನಡೆಯುವ ಯಲಹಂಕ ವಾಯುನೆಲೆಯೂ ಅರಣ್ಯ ಭೂಮಿ: ಈಶ್ವರ ಖಂಡ್ರೆ!