ಅಕ್ರಮ ಸಂಪಾದನೆ, ಬೇನಾಮಿ ಹೆಸರಿನಲ್ಲಿರುವ ಆಸ್ತಿಗಳ ದಾಖಲೆ, ಜಮೀನು, ಬಾರ್ ಅಂಡ್ ರೆಸ್ಟೋರೆಂಟ್ ಮುಂತಾದವುಗಳ ದಾಖಲೆ ವಶಕ್ಕೆ ಪಡೆಯಲಾಗಿದೆ ಎಂದು ದಾಳಿ ತಂಡದಿಂದ ಮಾಹಿತಿ ಸಿಕ್ಕಿದೆ. ವೈ.ಮಂಜುನಾಥ್ ಬೆಳಗಾವಿ: ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತರಾಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಭಾಮೈದ ವೈ. ಮಂಜುನಾಥ್ ಮನೆ ಹಾಗೂ ಅವರ ಆಪ್ತರ ಮನೆಗಳ ಮೇಲೆ ಬುಧವಾರ ಮುಂಜಾನೆಯಿಂದಲೇ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮವಾಗಿ ವಿದೇಶಕ್ಕೆ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಬೆಳಗಾವಿಯ ಹನುಮಾನ್ ನಗರದ ಮನೆ, ಜಿಲ್ಲೆಯ ಅಥಣಿ ತಾಲ್ಲೂಕಿನ ಐನಾಪುರ ಗ್ರಾಮದಲ್ಲಿರುವ ಮಂಜುನಾಥ್ ಸ್ನೇಹಿತರ ಮನೆ. ಬೆಂಗಳೂರಿನಲ್ಲಿರುವ ಮಂಜುನಾಥ್ ಗೆ ಸೇರಿದ ಅಪಾರ್ಟ್ ಮೆಂಟ್, ಮೈಸೂರು, ಅರಸೀಕೆರಯಲ್ಲಿರುವ ಅವರ ಆಪ್ತರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ಅಕ್ರಮ ಸಂಪಾದನೆ, ಬೇನಾಮಿ ಹೆಸರಿನಲ್ಲಿರುವ ಆಸ್ತಿಗಳ ದಾಖಲೆ, ಜಮೀನು, ಬಾರ್ ಅಂಡ್ ರೆಸ್ಟೋರೆಂಟ್ ಮುಂತಾದವುಗಳ ದಾಖಲೆ ವಶಕ್ಕೆ ಪಡೆಯಲಾಗಿದೆ ಎಂದು ದಾಳಿ ತಂಡದಿಂದ ಮಾಹಿತಿ ಸಿಕ್ಕಿದೆ. #Belagavi #EDRaid #Satish jarkiholi #Relatives #ಬೆಳಗಾವಿ #ಇಡಿದಾಳಿ#ಸತೀಶ್ ಜಾರಕಿಹೊಳಿ #ಸಂಬಂಧಿಕರು Share via: Facebook X (Twitter) LinkedIn More Post navigation ಅಸಹ್ಯ, ಥೂ, ಕುಮಾರಸ್ವಾಮಿ ಚಿಲ್ಲರೆ ರಾಜಕಾರಣ ಮಾಡಬಾರದು- ಶಾಸಕ ಹೆಚ್. ಸಿ. ಬಾಲಕೃಷ್ಣ ಕಿಡಿ!