ಅಂಚಿಪುರದಿಂದ ಹೊಸೂರು ಗ್ರಾಮದವರೆಗೆ 10 ಗ್ರಾಮಗಳಲ್ಲಿ ಪಾದಯಾತ್ರೆ ನಡೆಯಲಿದೆ. ಸರ್ಕಾರವನ್ನ ಎಚ್ಚರಿಸಲು ಈ ಹೋರಾಟ ಮಾಡಲಾಗ್ತಿದೆ. ರೈತರಿಗೆ ಧೈರ್ಯ ತುಂಬಲು ಹೋರಾಟ ಮಾಡಲಾಗ್ತಿದೆ. ಒಟ್ಟು 11 KM ಪಾದಯಾತ್ರೆ ಮಾಡ್ತೇವೆ ಎಂದು ತಿಳಿಸಿದರು. ಮಾಜಿ ಶಾಸಕ ಎ.ಮಂಜು ಬೆಂಗಳೂರು: ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಣ ಜಟಾಪಟಿ ಮುಂದುವರೆದಿದ್ದು, ಇದೇ ಭಾನುವಾರ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಾದಯಾತ್ರೆಯನ್ನು ಆಯೋಜಿಸಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿಂದು ವಿವರ ನೀಡಿದ ಮಾಜಿ ಶಾಸಕ ಎ.ಮಂಜು, ಭೂಸ್ವಾಧೀನ ಆಗಿರುವ ಗ್ರಾಮಗಳ ಮೂಲಕ ಬೆಳಗ್ಗೆ 9 ರಿಂದ ಹೋರಾಟ ಪ್ರಾರಂಭ ಆಗಲಿದೆ. ದೇವೇಗೌಡರು, ಕುಮಾರಸ್ವಾಮಿ ರವರ ಮಾರ್ಗದರ್ಶನದಲ್ಲಿ ಹೋರಾಟ ನಡೆಯಲಿದೆ. ಅಂಚಿಪುರದಿಂದ ಹೊಸೂರು ಗ್ರಾಮದವರೆಗೆ 10 ಗ್ರಾಮಗಳಲ್ಲಿ ಪಾದಯಾತ್ರೆ ನಡೆಯಲಿದೆ. ಸರ್ಕಾರವನ್ನ ಎಚ್ಚರಿಸಲು ಈ ಹೋರಾಟ ಮಾಡಲಾಗ್ತಿದೆ. ರೈತರಿಗೆ ಧೈರ್ಯ ತುಂಬಲು ಹೋರಾಟ ಮಾಡಲಾಗ್ತಿದೆ. ಒಟ್ಟು 11 KM ಪಾದಯಾತ್ರೆ ಮಾಡ್ತೇವೆ ಎಂದು ತಿಳಿಸಿದರು. ಯಾಕೆ ಕೇವಲ 3 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ. ಇದರ ಮೂಲ ಉದ್ದೇಶ ಏನು ? ಎಂದು ಪ್ರಶ್ನಿಸಿದ ಅವರು,ಜಿಲ್ಲಾಧಿಕಾರಿ ವಿರುದ್ಧ ಮಾತನಾಡಬಾರದಂತೆ, ಸ್ಟೇ ತಂದಿದ್ದಾರೆ ? ಅವರ ವಿರುದ್ಧ ಯಾರು ಮಾತನಾಡಬಾರದೆಂದು ಸ್ಟೇ ತಂದಿದ್ದಾರೆ.ಬೇನಾಮಿ ಆಸ್ತಿ ಯಾರದ್ದೇ ಇದ್ರೂ ತನಿಖೆ ಮಾಡಲಿ. ಕುಮಾರಸ್ವಾಮಿ ರವರದ್ದು, ಎ.ಮಂಜುದು ಎಷ್ಟಿದೆ ಎಂದು ತನಿಖೆ ಮಾಡಲಿ ಎಂದರು. ಬಿಡದಿಯಲ್ಲಿ ಬೇನಾಮಿ ಆಸ್ತಿ ವಿಚಾರವಾಗಿ ಪೋಸ್ಟರ್ ಅಂಟಿಸುತ್ತಾರೆ. ಇವರ ತಾತನಂತೆ ನಾವು ನೂರಾರು ಪೋಸ್ಟರ್ ಅಂಟಿಸಬಹುದು.ನಮ್ಮ ಬಳಿಯೂ ಇವರ ವಿಚಾರಗಳಿವೆ. ನಾವು ಟೌನ್ ಶಿಪ್ ಮಾಡಬೇಡಿ ಎನ್ನಲ್ಲ. ಆದರೆ ಇವರ ಪ್ಲ್ಯಾನ್ ಸರಿಯಿಲ್ಲ ? ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮಹಿಳೆಯರು ಯೋಜನೆ ಬೇಡ ಎಂದಿದ್ರು.ಹಾಗಾಗಿ ನಾನು ಯೋಜನೆ ಮಾಡಲ್ಲ ಎಂದು ಕೈಬಿಟ್ಟಿದ್ದಾರೆ.ಅದು ಸಹ ದಾಖಲೆಯಲ್ಲಿದೆ.ವಿಧಾನಸೌಧದಲ್ಲಿಯೇ ಹೇಳಿದ್ದಾರೆ, ದಾಖಲೆ ತೆಗೆಸಲಿ ಎಂದು ಸವಾಲು ಹಾಕಿದರು. ಶಾಸಕ ಹೆಚ್.ಸಿ. ಬಾಲಕೃಷ್ಣ ವಿರುದ್ಧ ವಾಗ್ದಾಳಿ: ಬಾಲಕೃಷ್ಣ ಈಗ ಉದ್ದ ನಾಲಿಗೆ ಹರಿಬಿಡ್ತಾರೆ ? ಆಗ ಶಾಸಕರಾಗಿದ್ದಾಗ ಯಾಕೆ ಯೋಜನೆ ಬಗ್ಗೆ ಧ್ವನಿ ಎತ್ತಲಿಲ್ಲ. ನಾನು ಶಾಸಕನಾಗಿದ್ದಾಗ ಎಷ್ಟು ಬಾರಿ ಧ್ವನಿ ಎತ್ತಿದ್ದೇನೆ ದಾಖಲೆ ಕೊಡ್ತೇನೆ ಮಾಗಡಿಯಲ್ಲಿ ಮಾಡಿದ್ರೆ ರೈತ ವಿರೋಧಿ ಯೋಜನೆ ? ಬಿಡದಿಯಲ್ಲಿ ಮಾಡಿದ್ರೆ ರೈತಪರ ಯೋಜನೆ ? ನಿನ್ನ ಯೋಗ್ಯತೆಗೆ 80 % ಒಪ್ಪಿದ್ದಾರೆ ಅಂತಾ ಹೇಳ್ತೀಯ.ಯಾವ ಬಾಯಲ್ಲಿ ಹೇಳ್ತೀಯ ನೀನು, ಸಾಬೀತು ಮಾಡು, ನಾನು ಇವತ್ತೇ ರಾಜಕೀಯದಿಂದ ನಿವೃತ್ತಿಯಾಗ್ತೇನೆ ಎಂದು ವಾಗ್ದಾಳಿ ನಡೆಸಿದರು. ಟೌನ್ ಶಿಪ್ ಯೋಜನೆಗೆ ಮಾಸ್ಟರ್ ಪ್ಲ್ಯಾನ್ ಇಲ್ಲ ? ಇವರ ಯೋಗ್ಯತೆಗೆ ಬಂದು ಹೇಳಲಿ.ಈಗ 26 ಕೋಟಿಗೆ ಟೆಂಡರ್ ಕರೆದಿದ್ದಾರೆ ನಾನು ಅವತ್ತಿನ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದೇನೆ.ಭೂಸ್ವಾಧೀನ ಮಾಡದ ಕಾರಣ ಯಾವುದೇ ಪರಿಹಾರ ಕೊಡಲು ಬರುವುದಿಲ್ಲ ಎಂದು ಅವತ್ತಿನ ಸಚಿವರಾದ ಪರಮೇಶ್ವರ್ ಉತ್ತರ ಕೊಟ್ಟಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದರು. Bidadi Township Project: ವಿನಯ್ ಗೌಡ ಎಂಬ ಬೇನಾಮಿ ಹೆಸರಿನಲ್ಲಿ ಕುಮಾರಸ್ವಾಮಿ ಕುಟುಂಬ 35 ಎಕರೆ ಜಮೀನು ಪಡೆದಿದೆ- ಎಂ.ಲಕ್ಷ್ಮಣ್ ಆರೋಪ ಬಾಲಕೃಷ್ಣ ಮರಕೋತಿ ಆಟ ಆಡ್ತಾನೆಂದು ಮಹಿಳೆಯರು ಹೇಳ್ತಿದ್ದಾರೆ.5 ವರ್ಷಕ್ಕೊಂದು ಪಾರ್ಟಿ ಬದಲಾವಣೆ ಮಾಡ್ತಾನೆ. ಬಿಜೆಪಿಯಲ್ಲಿದ್ದು, ನಂತರ ಕುಮಾರಣ್ಣನ ಹಿಡಿದುಕೊಂಡು ಜೆಡಿಎಸ್ ಗೆ ಬಂದೆ. ಇಲ್ಲಿ ಎಲ್ಲವನ್ನೂ ಮಾಡಿಕೊಂಡು 10 ಕೋಟಿ ಪಡೆದು ಬೆನ್ನಿಗೆ ಚೂರಿ ಹಾಕಿದೆ. ಈಗ ಕಾಂಗ್ರೆಸ್ ನಲ್ಲಿದ್ದೀಯ, ಏನು ಆಗಿಲ್ಲ ಎಂದು ವಿಲವಿಲ ಎನ್ನುತ್ತಿದ್ದೀಯ .ಕಾಂಗ್ರೆಸ್ ನಲ್ಲಿ ಸೀನಿಯರ್ ಇಲ್ಲ. ಅಣ್ಣ ಪಾಪ ಬಟ್ಟೆ ಹರಿದುಕೊಳ್ತಿದ್ದಾರೆ ದೇವೇಗೌಡರನ್ನ, ಕುಮಾರಸ್ವಾಮಿ ರನ್ನ ಬೈದ್ರೆ ಮಂತ್ರಿಯಾಗ್ತೇನೆಂಬ ಭ್ರಮೆ ಬೇಡ. ಶಿವಕುಮಾರ್ ಸಾಮಾನ್ಯ ಅಲ್ಲ.ನಿನ್ನಂತಹ ನೂರಾರು ಬಾಲಕೃಷ್ಣರನ್ನ ನೋಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. #Bidaditownship #PROJECT #JDS #PROTEST#ಬಿಡದಿಟೌನ್ ಶಿಪ್ #ಪ್ರಾಜೆಕ್ಟ್ #ಜೆಡಿಎಸ್ #ಪ್ರತಿಭಟನೆ Share via: Facebook X (Twitter) LinkedIn More Post navigation ಮೈಸೂರು: ಕಾಲೇಜು ಕ್ಯಾಂಪಸ್ನಲ್ಲೇ ಹೃದಯಾಘಾತದಿಂದ 17 ವರ್ಷದ ವಿದ್ಯಾರ್ಥಿ ಸಾವು! ಕಾಂತಾರ ನಟಿ ರುಕ್ಮಿಣಿ ವಸಂತ್ ಪೋಟೋ, ವಿಡಿಯೋ ವೈರಲ್ ಕೇಸ್, ಮೂವರು ಆರೋಪಿಗಳ ಬಂಧನ