ಬಂಧಿತ ಆರೋಪಿ ಆಯುಷಿ ಹಾಗೂ ಹತ್ಯೆಯಾದ ಆಕೆಯ ಪೋಷಕರು


ಜೈಪುರ ನ್ಯಾಯಾಲಯದಲ್ಲಿ ಗುಮಾಸ್ತರಾಗಿದ್ದ ನೀರಜ್ ಶರ್ಮಾ, ಕೋರ್ಟ್ ಮಾಸ್ಟರ್ ಆಗಿದ್ದ ತನ್ನ ಪತಿ ವಿಜಯ್ ಶರ್ಮಾ ಅವರ ಮರಣದ ನಂತರ ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆದಿದ್ದರು.

ಬಂಧಿತ ಆರೋಪಿ ಆಯುಷಿ

ಜೈಪುರ: ಜೈಪುರದ ಕಾನೂನು ವಿದ್ಯಾರ್ಥಿನಿಯೊಬ್ಬರು ತನ್ನ ತಾಯಿಯನ್ನು ಕೊಂದ ಆರೋಪದ ಮೇಲೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.ಕಳೆದ ವರ್ಷ ಆಕೆ ತನ್ನ ತಂದೆಯನ್ನೂ ಕೊಂದಿರಬಹುದು ಎಂದು ಆಕೆಯ ಚಿಕ್ಕಪ್ಪ ಆರೋಪಿಸಿದ್ದಾರೆ.

ಜೈಪುರ ನ್ಯಾಯಾಲಯದಲ್ಲಿ ಗುಮಾಸ್ತರಾಗಿದ್ದ ನೀರಜ್ ಶರ್ಮಾ, ಕೋರ್ಟ್ ಮಾಸ್ಟರ್ ಆಗಿದ್ದ ತನ್ನ ಪತಿ ವಿಜಯ್ ಶರ್ಮಾ ಅವರ ಮರಣದ ನಂತರ ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆದಿದ್ದರು. ವಿಜಯ್ ಶರ್ಮಾ ಕಳೆದ ವರ್ಷ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದರು.

ಜುಲೈ 3 ರಂದು ಜೈಪುರದಲ್ಲಿ ನೀರಜ್ ಶರ್ಮಾ ಅವರಿಗೆ ಕಾರು ಡಿಕ್ಕಿ ಹೊಡೆದಿತ್ತು. ತಾಯಿಯನ್ನೇ ಕೊಲ್ಲಲು ಸಂಚು ರೂಪಿಸಿದ ಆರೋಪದ ಮೇಲೆ ಪೊಲೀಸರು ಆಕೆಯ ಮಗಳು ಆಯುಷಿಯನ್ನು ಬಂಧಿಸಿದ್ದಾರೆ.ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿನಿ ಆಯುಷಿ, ತನ್ನ ಸೋದರಸಂಬಂಧಿ ಬಲರಾಮ್ ಸಹಾಯದಿಂದ 7 ಲಕ್ಷ ರೂ.ಗೆ ಸುಫಾರಿ ಹಂತಕರನ್ನು ನೇಮಿಸಿಕೊಂಡಿದ್ದಳು ಎಂದು ಆರೋಪಿಸಲಾಗಿದೆ. ತಾಯಿಯನ್ನು ಕೊಂದು ರಸ್ತೆ ಅಪಘಾತದಂತೆ ಬಿಂಬಿಸುವುದು ಆಕೆಯ ಯೋಜನೆಯಾಗಿತ್ತು. ಆಯುಷಿ ತನ್ನ ತಾಯಿಯನ್ನು ಕೊಂದು ಸರ್ಕಾರಿ ಕೆಲಸ ಪಡೆಯಲು ಬಯಸಿದ್ದಳು ಅಲ್ಲದೇ ಕುಟುಂಬದ ಆಸ್ತಿಯ ಮೇಲೆ ಕಣ್ಣು ಹಾಕಿದ್ದಳು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆಯುಷಿ ಆಕೆಯ ತಂದೆಯನ್ನೂ ಕೊಂದಿದ್ದಾಳೆ ಎಂದು ಆಕೆಯ ತಾಯಿಯ ಸಹೋದರ ರಾಕೇಶ್ ಶರ್ಮಾ ಆರೋಪಿಸಿದ್ದಾರೆ. ಬ್ರೇನ್ ಸ್ಟೋಕ್ ಆದ ನಂತರ ಆಯುಷಿ ಹಾಗೂ ಆಕೆಯ ಸಂಬಂಧಿ ಬಲರಾಮ್ ಅಪರಿಚಿತ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದರು.ಪದೇ ಪದೇ ಕೇಳಿದ್ದರೂ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿ ಹೇಳುತ್ತಿದ್ದಳು. ಬಳಿಕ ಕುಟುಂಬಸ್ಥರು ವಿಜಯ್ ಶರ್ಮಾ ಅವರನ್ನು ಮನೆಗೆ ಕರೆತಂದಾಗ ಅವರ ಅನೇಕ ಆಂಗಾಂಗಗಳು ವಿಫಲವಾಗಿರುವುದಾಗಿ ವೈದ್ಯರು ಹೇಳಿದರು. ತನ್ನ ತಂದೆಗೆ ಆಹಾರ ನೀಡಲಾಗುತ್ತಿದ್ದ ಟ್ಯೂಬ್ ನ್ನು ಆಯುಷಿ ತೆಗೆದು ಸಾವಿಗೆ ಕಾರಣಳಾಗಿದ್ದಾಳೆ ಎಂದು ರಾಕೇಶ್ ಶರ್ಮಾ ಆರೋಪಿಸಿದ್ದಾರೆ. ಪೊಲೀಸರು ಈ ಕುರಿತು ಇದೀಗ ವಿಚಾರಣೆ ನಡೆಸುತ್ತಿದ್ದಾರೆ.

#jaipura #Mother’s Murder #Law Student #Custody #ಜೈಪುರ#ತಾಯಿಯಕೊಲೆ#ಕಾನೂನು ವಿದ್ಯಾರ್ಥಿನಿ#ಪೊಲೀಸ್ ವಶಕ್ಕೆ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link