ಸಿರಿಗನ್ನಡ ವೇದಿಕೆ ವತಿಯಿಂದ ಬೆಂಗಳೂರಿನ  ನಾಗಪುರದ ನಿವೇದಿತಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ  ಕವಿಗೋಷ್ಠಿ ಮತ್ತುಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು:  ನಮ್ಮ ವ್ಯಕ್ತಿತ್ವ ರೂಪಿಸುವುದೇ ಸವಾಲುಗಳು. ಹಾಗಾಗಿ ಸದೃಢ ಮನಸ್ಸು, ಸಕಾರಾತ್ಮಕ ದೃಷ್ಟಿಕೋನ ಮತ್ತು ನಿರಂತರ ಪ್ರಯತ್ನ ಇದ್ದರೆ ಯಾವುದೇ ಸವಾಲನ್ನೂ ಗೆಲ್ಲಬಹುದು  ಎಂದು ಲೇಖಕಿ ಗೊರೂರು ಪಂಕಜ ಅಭಿಪ್ರಾಯಪಟ್ಟರು

         ಸಿರಿಗನ್ನಡ ವೇದಿಕೆ ವತಿಯಿಂದ ಬೆಂಗಳೂರಿನ  ನಾಗಪುರದ ನಿವೇದಿತಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ  ಕವಿಗೋಷ್ಠಿ ಮತ್ತುಅಭಿನಂದನಾಸಮಾರಂಭದಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

            ಮಾನವನ ಜೀವನವು ಹೂವುಗಳಿಂದ  ಅಲಂಕರಿಸಲ್ಪಟ್ಟಿಲ್ಲ; ಅದುಕಲ್ಲು-ಮುಳ್ಳುಗಳಹಾದಿ. ಪ್ರತಿಯೊಬ್ಬರ ಬದುಕಿನಲ್ಲಿಯೂ ಸವಾಲುಗಳು ಎದುರಾಗುತ್ತವೆ ಅದನ್ನು ಹೇಗೆ  ಎದುರಿಸುತ್ತೇವೆ ಎಂಬುದು ನಮ್ಮಯಶಸ್ಸನ್ನು ನಿರ್ಧರಿಸುತ್ತದೆ ಎಂದರು.

       ಬದುಕಿನ ಸವಾಲುಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಬಲಿಷ್ಠರನ್ನಾಗಿ ಮಾಡಲು ಬರುತ್ತವೆ. ಅದನ್ನು ಸಮರ್ಥವಾಗಿ ಎದುರಿಸಲು ಸದೃಢ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಳ್ಳುವುದು ಅಗತ್ಯವಿದೆ ಎಂದು ಪಂಕಜ ಹೇಳಿದರು.

 ಇದೇ ಸಂದರ್ಭದಲ್ಲಿ 93 ವರ್ಷದ ಹಿರಿಯರಾದ ಸರೋಜಮ್ಮಅವರನ್ನುಅಭಿನಂದಿಸಲಾಯಿತು. ಮುಖ್ಯಅತಿಥಿಯಾಗಿ ಕವಿಯತ್ರಿಪ್ರೀತಿಭರತ್, ಸಿ. ಎನ್. ಉಮೇಶ್,  ಮಂಜುನಾಥ್, ಪದ್ಮಮಂಜುನಾಥ್  ಭಾಗವಹಿಸಿದ್ದರು.

ಪುಟಾಣಿವಿಭಾಮತ್ತುವೈಶಾಖ  ಅವರಭರತನಾಟ್ಯ ನೋಡುಗರಗಮನಸೆಳೆಯಿತು.

ಎನ್. ಆರ್. ವೆಂಕಟರಂಗನ್, ಗೀತಾಮತ್ತುತಂಡ  ಗಾಯನಸುಧೆಹರಿಸಿದರು. 10 ಕ್ಕೂಹೆಚ್ಚುಮಂದಿತಮ್ಮಕವಿತೆಗಳನ್ನುವಾಚನಮಾಡಿದರು.

Leave a Reply

Your email address will not be published. Required fields are marked *