ವರ ಪೂಜೆ, ಪುನಸ್ಕಾರ, ಹೋಮ-ಹವನ ಇವೆಲ್ಲಾ ಭಕ್ತಿಯ ಮಾರ್ಗಗಳು. ಅದೇ ರೀತಿ ಮಂತ್ರ ಪಠಣೆಯೂ ಒಂದು. ಪರಮಾತ್ಮನನ್ನು ಮೆಚ್ಚಿಸಲು ಎಷ್ಟೋ ಮಾರ್ಗಗಳಲ್ಲಿ ಒಂದೇ ಒಂದು ಶಕ್ತಿಯುತ ಮಂತ್ರ ಪಠಣೆ ನಮ್ಮ ಇಡೀ ಜೀವನವನ್ನೇ ಬದಲಿಸಿಬಿಡುತ್ತದೆ. ಭಕ್ತಿ-ಭಕ್ತ ಎರಡು ಸಣ್ಣ ಪದಗಳೇ ಆದರೆ ಅದರಲ್ಲಿರೋ ಅರ್ಥ ಊಹೆಗೂ ದೊರೆಯದ ಅದ್ಭುತ ಶಕ್ತಿ. ದೇವರು ಇದ್ದಾನೆ ಎಂಬ ಸತ್ಯಕ್ಕೆ ಸಾಕ್ಷಿಯೇ ಭಕ್ತಿ. ದೇವರ ಪೂಜೆ, ಪುನಸ್ಕಾರ, ಹೋಮ-ಹವನ ಇವೆಲ್ಲಾ ಭಕ್ತಿಯ ಮಾರ್ಗಗಳು. ಅದೇ ರೀತಿ ಮಂತ್ರ ಪಠಣೆಯೂ ಒಂದು. ಪರಮಾತ್ಮನನ್ನು ಮೆಚ್ಚಿಸಲು ಎಷ್ಟೋ ಮಾರ್ಗಗಳಲ್ಲಿ ಒಂದೇ ಒಂದು ಶಕ್ತಿಯುತ ಮಂತ್ರ ಪಠಣೆ ನಮ್ಮ ಇಡೀ ಜೀವನವನ್ನೇ ಬದಲಿಸಿಬಿಡುತ್ತದೆ. ಬರೀ 7 ಮಂತ್ರ ನಿಮ್ಮ ಜೀವನವನ್ನು ಬದಲಿಸುತ್ತೆ ಎಂದರೆ ನೀವು ನಂಬಲೇಬೇಕು. ಯಾಕೆಂದರೆ ಆ ಮಂತ್ರದಲ್ಲಿರುವ ಅರ್ಥ, ಶಕ್ತಿ, ಮಾರ್ಗ ಅಂತಹದ್ದು. ಎಲ್ಲಾ ಕೆಲಸಗಳಿಗೂ ಅಡೆ-ತಡೆ, ಕಷ್ಟಗಳ ಮೇಲೆ ಕಷ್ಟಗಳು, ಬದುಕಲ್ಲಿ ನೆಮ್ಮದಿಯೇ ಇಲ್ಲ ಅಂತ ಚಿಂತಿಸುತ್ತಾ ಮನಸ್ಸಲ್ಲಿ ನೋವು ಪಡುತ್ತಿರುವವರು ಈ 7 ಮಂತ್ರಗಳ ಕಡೆ ಗಮನಕೊಟ್ಟು ನೋಡಿ. ನಿಮ್ಮ ಜೀವನದಲ್ಲಿ ಯಾವುದೆಲ್ಲಾ ಕಳೆದುಕೊಂಡಿದ್ದೀರೋ ಅವೆಲ್ಲಾ ಸಿಗುತ್ತಾ ಹೋಗುತ್ತದೆ. ಜೀವನವನ್ನು ಬದಲಿಸೋ ಆ 7 ಪವರ್ ಫುಲ್ ಮಂತ್ರಗಳು ಯಾವುವು ಅಂತ ನೋಡೋಣ. ಉತ್ತಮ ಬದುಕು ನೀಡುವ ಶಕ್ತಿಶಾಲಿ ಮಂತ್ರಗಳು 1. ಓಂ ನಮಃ ಶಿವಾಯ ಜಗತ್ತಿನ ಸೃಷ್ಟಿ, ರಕ್ಷಣಕರ್ತ ಶಿವ. ಮಹಾದೇವನ ಆಜ್ಞೆ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲುಗಾಡಲ್ಲ. ಪ್ರತಿಯೊಬ್ಬರನ್ನು ಕಾಪಾಡುವ ರುದ್ರನ ಈ ಒಂದು ಮಂತ್ರ ಪಠಿಸುತ್ತಿದ್ದರೆ ಎಂತಹದ್ದೇ ಕಷ್ಟವಿದ್ದರೂ ಕರ್ಪೂರದಂತೆ ಕರಗಿ ಹೋಗುತ್ತದೆ. ಓಂಕಾರದಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಶಿವ ಎನ್ನುವ ಅದ್ಭುತ ಪದದಲ್ಲಿ ಶುಭ, ಮಂಗಳಕರ, ಪಾಸಿಟಿವ್ ಎನರ್ಜಿ ಅಡಗಿದೆ. 2. ಓಂ ಗಂ ಗಣಪತೆಯೇ ನಮಃ ಪ್ರಥಮಪೂಜಿತ ವಿನಾಯಕನ ಸ್ಮರಣೆ ಇಲ್ಲದೆ ಯಾವ ಕಾರ್ಯಗಳೂ ಸಂಪೂರ್ಣಗೊಳ್ಳುವುದಿಲ್ಲ. ನೆಮ್ಮದಿ ಜೀವನ, ಯಶಸ್ಸನ ಹಾದಿಯಲ್ಲಿ ಅಡೆತಡೆಗಳಿಗೆ ಜಾಗಕೊಡದಂತೆ ಎಚ್ಚರವಹಿಸಲು ಗಣೇಶನ ಕೃಪೆ ಇರಬೇಕು. ಯಾವುದೇ ಒಂದು ಕೆಲಸ ಶುರು ಮಾಡುವ ಮುನ್ನ ಗಣಪನ ಈ ಶಕ್ತಿಶಾಲಿ ಮಂತ್ರ ಪಠಿಸಿ ಎಲ್ಲಾ ಶುಭಮಯವಾಗಿರುತ್ತದೆ. 3. ಓಂ ನಮೋ ಭಗವತೇ ವಾಸುದೇವಾಯ ನಮಃ ಇದೊಂದು ಮಂತ್ರ ಎಷ್ಟೋ ಅತಂತ್ರಗಳನ್ನು ದೂರು ಮಾಡುವ ರಾಮಬಾಣ. ವಿಷ್ಣುವಿನ ಈ 12 ಅಕ್ಷರಗಳ ಮಂತ್ರದಲ್ಲಿ ಜೀವನವನ್ನೇ ಗೆಲ್ಲುವ ಸಕಾರಾತ್ಮಕ ಶಕ್ತಿ ಇದೆ. ಭಕ್ತಿಯಿಂದ ಶುದ್ಧ ಮನಸ್ಸಲ್ಲಿ ವಿಷ್ಣುವನ್ನು ನೆನೆದು ಈ ಭವ್ಯ ಮಂತ್ರ ಪಠಿಸಿದರೆ ಸಾಕು ಮನಸ್ಸಿಗೆ ನೆಮ್ಮದಿ, ಬದುಕಿಗೆ ರಕ್ಷಣೆ ದೊರೆಯುತ್ತದೆ. 4. ಓಂ ಭೂರ್ ಭುವಸ್ವಹ ತತ್ಸವಿತುರ್ ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಾ ಪ್ರಚೋದಯಾತ್ ಗಾಯತ್ರಿ ಮಂತ್ರ ಹಿಂದೂ ಧರ್ಮದಲ್ಲಿ ಅತ್ಯಂತ ಶಕ್ತಿಶಾಲಿ ಮಂತ್ರವಾಗಿದೆ. ಇದೊಂದು ಮಂತ್ರದಿಂದ ಲಕ್ಷಾಂತರ ಮಂತ್ರಗಳು ಉದಯಿಸಿದೆ. ಮನುಷ್ಯನ ಏಳಿಗೆ, ಅಭಿವೃದ್ಧಿಗೆ ಇದೊಂದು ಮಂತ್ರ ಅತ್ಯದ್ಭುತವಾಗಿ ಪರಿಣಾಮ ಬೀರುತ್ತದೆ. 24 ಉಚ್ಛಾರಂಶಗಳಲ್ಲಿ ಇರುವ ಗಾಯತ್ರಿ ಮಂತ್ರವನ್ನು ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಪಠಿಸುವುದರಿಂದ ಮನಸ್ಸಿನಲ್ಲಿರುವ ಗೊಂದಲಗಳಿಗೆ ತೆರೆಬಿದ್ದು, ಮುಂದಿನ ದಾರಿ ಸುಗಮವಾಗುತ್ತದೆ. ಹಾಗೇ, ನೈತಿಕ ಬಲ, ಆಲೋಚನೆಗಳಿಗೆ ಶಕ್ತಿಯನ್ನು ತುಂಬುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಅಥವಾ ಸೂರ್ಯೋದಯಕ್ಕೂ ಮುನ್ನ ಗಾಯತ್ರಿ ಮಂತ್ರ ಪಠಿಸಿದರೆ ಅತ್ಯುತ್ತಮ ಲಾಭಗಳು ಪಡೆಯಬಹುದು. 5. ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಊರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್ ಇದು ಪರಶಿವನ ಅತ್ಯಂತ ಶಕ್ತಿಶಾಲಿ ಮಂತ್ರದಲ್ಲಿ ಒಂದು. ಈ ಮಂತ್ರ ಪಠಣೆಯಿಂದ ದೇಹಾರೋಗ್ಯ, ಆಯುಷ್ಯವೃದ್ಧಿ ಹಾಗೂ ಆಧ್ಯಾತ್ಮಿಕ ಯೋಚನೆಗಳು ಹೆಚ್ಚಾಗುತ್ತದೆ. ಜೀವಭಯ, ಅನಾರೋಗ್ಯ, ಆಲೋಚನೆಗಳಿಂದ ಮುಕ್ತಿ ನೀಡುವ ಈ ಶಿವಮಂತ್ರದಿಂದ ಉತ್ತಮ ಜೀವನ ರೂಪುಗೊಳ್ಳುತ್ತದೆ. ಪ್ರತಿದಿನ ಒಂದು ಬಾರಿಯಾದರೂ ಪಠಿಸಿದರೆ ಆರೋಗ್ಯಭಾಗ್ಯ ಲಭಿಸುತ್ತದೆ. 6. ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೇ ಜಗನ್ಮಾತೆ ದುರ್ಗಾದೇವಿಯ ಶಕ್ತಿಶಾಲಿ ಮಂತ್ರ ಇದು. ಪ್ರತಿದಿನ ಈ ಮಹಾಮಂತ್ರ ಪಠಿಸುವುದರಿಂದ ಚಾಮುಂಡಿ ತಾಯಿ, ಮಹಾಸರಸ್ವತಿ, ಮಹಾಲಕ್ಷ್ಮೀಯ ಕೃಪೆ, ರಕ್ಷಣೆ ದೊರೆಯುತ್ತದೆ. ಪ್ರಗತಿಯಲ್ಲಿ ಕೆಟ್ಟದೃಷ್ಠಿ, ನಕಾರಾತ್ಮಕ ಶಕ್ತಿಗಳಿಂದ ಕಂಗೆಟ್ಟಿದ್ದಾಗ ದುರ್ಗಾದೇವಿಯನ್ನು ಮನಸ್ಸಲ್ಲಿ ನೆನೆದು ಈ ಒಂದು ಮಂತ್ರ ಪಠಿಸಿದಾಗ ಎಲ್ಲಾ ದುಷ್ಟನಿವಾರಣೆ ಆಗೋದು ಖಚಿತ. 7. ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ ಜೀವನದಲ್ಲಿ ಪ್ರತಿಯೊಬ್ಬರಿಗೂ ಲಕ್ಷ್ಮೀದೇವಿಯ ಅನುಗ್ರಹಬೇಕೇಬೇಕು. ಸಂಪತ್ತು, ಸಮೃದ್ಧಿ, ಇಷ್ಟಾರ್ಥಸಿದ್ಧಿಗೆ ಮಹಾಲಕ್ಷ್ಮೀಗೆ ಪ್ರಿಯವಾದ ಈ ಬೀಜಮಂತ್ರವನ್ನು ಪಠಿಸಿದರೆ ಸಾಕು. ಹಣಕಾಸು ಸಮಸ್ಯೆಗಳು, ಸಾಲಬಾಧೆಯಿಂದ ಮುಕ್ತಿ ಪಡೆಯಲು ಸಿರಿದೇವತೆ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವುದು ತುಂಬಾ ಮುಖ್ಯ. ಪ್ರತಿದಿನ ಸಾಧ್ಯವಾಗದಿದ್ದರೂ ಪ್ರತಿ ಶುಕ್ರವಾರ ಮಹಾಲಕ್ಷ್ಮೀ ಬೀಜಮಂತ್ರ ಪಠಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಪ್ರತಿನಿತ್ಯ ಮಂತ್ರ ಪಠಣೆ ನಮ್ಮ ಜೀವನವನ್ನು ಸದ್ಮಾರ್ಗದಲ್ಲಿ ಕೊಂಡೊಯ್ಯುತ್ತದೆ. ಕೋಟ್ಯಂತರ ದೇವಾನುದೇವತೆಗಳ ಅನುಗ್ರಹವನ್ನು ಶ್ರದ್ಧೆ, ಭಕ್ತಿಯಿಂದ ಮಹಾಮಂತ್ರಗಳು ಪಠಿಸುವ ಮೂಲಕ ಪಡೆಯಬಹುದು. #Ganesha #Mantras #Amazing Benefits #ಗಣೇಶ #ಮಂತ್ರಗಳು #ಪ್ರಯೋಜನಗಳು Share via: Facebook X (Twitter) LinkedIn More Post navigation ದಿನ ಭವಿಷ್ಯ ಮೇ 26, 2026: ಈ ರಾಶಿಯವರೆಗೆ ಇಂದು ಉತ್ತಮ ದಿನ!