ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ


ಅಕ್ರಮ ಎಸಗಿರುವ ನೈಸ್ ಕಂಪನಿ ಮಾಲೀಕರಿಗೆ ಸರ್ಕಾರ ಶೂ ಪಾಲಿಶ್ ಮಾಡುತ್ತಿದೆಯೇ? 2018ರ  ವರದಿಯಲ್ಲಿ ಸ್ಪಷ್ಟವಾಗಿ ಲೂಟಿಯಾಗಿದೆ ಎಂದು ಹೇಳಿದ್ದರೂ, ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಏನು ಕ್ರಮ ಕೈಗೊಂಡಿದೆ? 136 ಸೀಟುಗಳನ್ನು ಕೊಟ್ಟ ಜನರಿಗೆ ಸರ್ಕಾರ ನೀಡುತ್ತಿರುವ ಉತ್ತರ ಇದೇನಾ? ಎಂದು ಪ್ರಶ್ನಿಸಿದ್ದಾರೆ. 

ಬೆಂಗಳೂರು: ನೈಸ್‌ ಹಗರಣ, ಬಿಡದಿ ಟೌನ್‌ ಶಿಪ್‌ ಎರಡೂ ಒಂದೇ ನಾಣ್ಯದ 2 ಮುಖಗಳು. ಈ ಎರಡು ಯೋಜನೆಯಲ್ಲೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಪಾತ್ರವಿದೆ ಎಂದು ಕೇಂದ್ರ ಭಾರಿ ಉದ್ದಿಮೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಶನಿವಾರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿ, ಮಾತನಾಡಿದ ಅವರು, ರೈತರನ್ನು ವಂಚಿಸಿರುವ ನೈಸ್‌ ಯೋಜನೆಯ ಅಕ್ರಮಗಳ ವಿರುದ್ಧ ದೇವೇಗೌಡರು ಏಕಾಂಕಿಯಾಗಿ ಹೋರಾಡಿದ್ದರು.  ಅಕ್ರಮ ಎಸಗಿರುವ ನೈಸ್ ಕಂಪನಿ ಮಾಲೀಕರಿಗೆ ಸರ್ಕಾರ ಶೂ ಪಾಲಿಶ್ ಮಾಡುತ್ತಿದೆಯೇ? 2018ರ  ವರದಿಯಲ್ಲಿ ಸ್ಪಷ್ಟವಾಗಿ ಲೂಟಿಯಾಗಿದೆ ಎಂದು ಹೇಳಿದ್ದರೂ, ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಏನು ಕ್ರಮ ಕೈಗೊಂಡಿದೆ? 136 ಸೀಟುಗಳನ್ನು ಕೊಟ್ಟ ಜನರಿಗೆ ಸರ್ಕಾರ ನೀಡುತ್ತಿರುವ ಉತ್ತರ ಇದೇನಾ? ಎಂದು ಪ್ರಶ್ನಿಸಿದ್ದಾರೆ. 

ಸಾವಿರಾರು ರೈತರನ್ನು ಬೀದಿಗೆ ತಳ್ಳಿ, 20,000 ಎಕರೆ ಭೂಮಿಯನ್ನು ಕಬಳಿಸಿ, ಅಕ್ರಮವಾಗಿ ಟೋಲ್ ವಸೂಲಿ ಮಾಡುತ್ತಿರುವವರ ಪರವಾಗಿ ಸರ್ಕಾರ ನಿಂತಿರುವುದು ಖಂಡನೀಯ. ರೈತರ ಭೂಮಿಗೆ ಸೂಕ್ತ ಪರಿಹಾರ ನೀಡಲು ಯಾವುದೇ ಕಾಲಮಿತಿ ಇಲ್ಲವೇ? ರೈತರ ಹಿತ ಕಾಯುವ ಬದಲು ಲೂಟಿಕೋರರ ಪರ ನಿಂತಿರುವ ಈ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

#Nice scam #BidadiTownShip scheme #cmdkshivakumar #HDKumaraswamy #ನೈಸ್ ಹಗರಣ #ಬಿಡದಿಟೌನ್ ಶಿಪ್ #ಸಿಎಂ ಡಿಕೆ ಶಿವಕುಮಾರ್#ಎಚ್ ಡಿ ಕುಮಾರಸ್ವಾಮಿ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link