ಬಾಗಲಕೋಟೆ ಜಿಲ್ಲೆಯ ಮೂರು ತಾಲೂಕುಗಳ ವ್ಯಾಪ್ತಿಯ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (PHC) ಒಬ್ಬರೇ ವೈದ್ಯಾಧಿಕಾರಿ ಎಂಬ ಸುದ್ದಿ ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರವನ್ನು ಎಷ್ಟು ಹದಗೆಡಿಸಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ಬೆಂಗಳೂರು: ಜನರ ಜೀವ ಕಾಯಬೇಕಾದ ರಾಜ್ಯದ ಆರೋಗ್ಯ ಕ್ಷೇತ್ರ ಸಂಪೂರ್ಣವಾಗಿ ಪಾರ್ಶ್ವವಾಯು ಪೀಡಿತವಾಗಿದೆ! ಬಾಗಲಕೋಟೆ ಜಿಲ್ಲೆಯ ಮೂರು ತಾಲೂಕುಗಳ ವ್ಯಾಪ್ತಿಯ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (PHC) ಒಬ್ಬರೇ ವೈದ್ಯಾಧಿಕಾರಿ ಎಂಬ ಸುದ್ದಿ ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರವನ್ನು ಎಷ್ಟು ಹದಗೆಡಿಸಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಲಾಗಿದ್ದು, 4 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒಬ್ಬರೇ ವೈದ್ಯಾಧಿಕಾರಿ! ಇದು ಯಾವ ಸೀಮೆ ಆಡಳಿತ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಪ್ರಶ್ನಿಸಿದ್ದಾರೆ. ತೋಗುಣಸಿ PHC ಗೆ ವೈದ್ಯಾಧಿಕಾರಿಯಾಗಿರುವ ಡಾ. ಲಕ್ಷ್ಮಣ ಸನೆಲಿ ಅವರಿಗೆ ಪಟ್ಟದಕಲ್ಲು, ಗಿರಿಪಾಗರ ಮತ್ತು ಗಲಗಲಿ PHCಗಳ ಆಡಳಿತಾತ್ಮಕ ಉಸ್ತುವಾರಿಯನ್ನೂ ನೀಡಲಾಗಿದೆ. ತೋಗುಣಸಿಯಿಂದ ಪಟ್ಟದಕಲ್ಲು 25 ಕಿ.ಮೀ, ಗಿರಿಸಾಗರ 54 ಕಿ.ಮೀ, ಗಲಗಲಿ 72 ಕಿ.ಮೀ ದೂರದಲ್ಲಿದೆ! ಪ್ರತಿ PHC ವ್ಯಾಪ್ತಿಯಲ್ಲಿ 25,000 ದಿಂದ 30,000 ದಷ್ಟು ಬಡ ಜನರಿದ್ದಾರೆ ಎಂದು ತಿಳಿಸಿದ್ದಾರೆ. ಒಬ್ಬ ವೈದ್ಯರು ವಾರಕ್ಕೆ 1-2 ದಿನ ಮಾತ್ರ ಭೇಟಿ ನೀಡಿದರೆ, ಉಳಿದ ದಿನಗಳಲ್ಲಿ ಬಡ ರೋಗಿಗಳ ಗತಿಯೇನು? ನರ್ಸ್‌ಗಳು ಮತ್ತು ಆಶಾ ಕಾರ್ಯಕರ್ತೆಯರೇ ರೋಗ ತಪಾಸಣೆ ನಡೆಸಿ ಔಷಧ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಗಲಕೋಟೆ ಜಿಲ್ಲೆಯ 48 PHCಗಳಲ್ಲಿ ಕೇವಲ 16 ಮಂದಿ ಮಾತ್ರ ಖಾಯಂ ವೈದ್ಯರಿದ್ದಾರೆ! ಪ್ರತಿಯೊಬ್ಬರಿಗೂ ತಲಾ 4 PHCಗಳ ಉಸ್ತುವಾರಿ ವಹಿಸಿ ಸರ್ಕಾರ ಕೈ ತೊಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ವೈದ್ಯರಿಲ್ಲ, ಕನಿಷ್ಠ ಮೂಲಸೌಕರ್ಯಗಳಿಲ್ಲ, ಆಸ್ಪತ್ರೆಗಳಲ್ಲಿ ತುರ್ತು ಔಷಧಗಳಿಲ್ಲ. ಮುಖ್ಯಮಂತ್ರಿಗಳೇ, ನಮ್ಮದು ಬಡವರ ಸರ್ಕಾರ ಎಂದು ಬೊಗಳೆ ಭಾಷಣ ಬಿಗಿಯುವ ಬದಲು ಗ್ರಾಮೀಣ ಭಾಗದ ಬಡ ರೋಗಿಗಳಿಗೆ ಕನಿಷ್ಠ ವೈದ್ಯರನ್ನಾದರೂ ನೇಮಕ ಮಾಡುವ ಸೌಜನ್ಯ ತೋರಿ! ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಈ ಜವಾಬ್ದಾರಿರಹಿತ ಸರ್ಕಾರಕ್ಕೆ ಹಾಗೂ ಆರೋಗ್ಯ ಸಚಿವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. #Bengaluru #Primary health centers #Rashok#cmdkshivakumar #ಬೆಂಗಳೂರು #ಪ್ರಾಥಮಿಕ ಆರೋಗ್ಯಕೇಂದ್ರ#ಆರ್ ಅಶೋಕ್#ಸಿಎಂಡಿಕೆ ಶಿವಕುಮಾರ್ Share via: Facebook X (Twitter) LinkedIn More Post navigation ಬೆಂಗಳೂರು ಕಸ ನಿರ್ವಹಣೆ: ಹೊಸ ನಿಯಮಗಳ ಮುಖ್ಯ ವಿವರಗಳು ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್!ಬೆಳಂಬೆಳಿಗ್ಗೆ ಮನೆ ಮೇಲೆ ದಾಳಿ