ವಾಷಿಂಗ್ಟನ್ನ ಷರತ್ತುಗಳನ್ನು ಪೂರೈಸುವವರೆಗೆ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವುದಾಗಲಿ, ಅಮೆರಿಕದೊಂದಿಗೆ ಹಿಂದಿನ ಮಾತುಕತೆ ಚೌಕಟ್ಟಿಗೆ ಮರಳುವುದಾಗಲಿ ಸಾಧ್ಯವಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಟೆಹ್ರಾನ್/ವಾಷಿಂಗ್ಟನ್: ಅಮೆರಿಕಾ ತನ್ನ ಷರತ್ತುಗಳನ್ನು ಒಪ್ಪದ ಹೊರತು ಜಗತ್ತಿನ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮರು ತೆರೆಯುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದ್ದು, ಇದರ ಬೆನ್ನ್ಲೇ ಇರಾನ್ ಮೇಲಿನ ನೌಕಾ ದಿಗ್ಬಂಧನವನ್ನು ಮತ್ತಷ್ಟು ಬಿಗಿಗೊಳಿಸಿರುವ ಅಮೆರಿಕಾ ಜಲಸಂಧಿಯ ಬಳಿ ಸಂಚರಿಸುತ್ತಿದ್ದ 109 ವಾಣಿಜ್ಯ ಹಡಗುಗಳ ಮಾರ್ಗವನ್ನು ಬದಲಾಯಿಸಿದೆ. ವಾಷಿಂಗ್ಟನ್ನ ಷರತ್ತುಗಳನ್ನು ಪೂರೈಸುವವರೆಗೆ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವುದಾಗಲಿ, ಅಮೆರಿಕದೊಂದಿಗೆ ಹಿಂದಿನ ಮಾತುಕತೆ ಚೌಕಟ್ಟಿಗೆ ಮರಳುವುದಾಗಲಿ ಸಾಧ್ಯವಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್ ಈ ಹೇಳಿಕೆ ನೀಡಿದ್ದಾರೆ. ಮಧ್ಯವರ್ತಿಗಳ ಮೂಲಕ ಅಮೆರಿಕಕ್ಕೆ ಇರಾನ್ ತನ್ನ ಬೇಡಿಕೆಗಳನ್ನು ತಿಳಿಸಿದೆ. ಆ ಷರತ್ತುಗಳನ್ನು ಈಡೇರಿಸುವವರೆಗೆ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಘಾಲಿಬಾಫ್ ಹೇಳಿದ್ದಾರೆ. ನಮ್ಮ ಸಂದೇಶಗಳು ಮತ್ತು ಷರತ್ತುಗಳನ್ನು ಮಧ್ಯವರ್ತಿಗಳ ಮೂಲಕ ಮತ್ತೊಂದು ದೇಶಕ್ಕೆ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಷರತ್ತುಗಳು ಈಡೇರುವವರೆಗೆ, ಇರಾನ್ ಜನರ ಅವಿಭಾಜ್ಯ ಹಕ್ಕುಗಳನ್ನು ಗುರುತಿಸುವವರೆಗೆ ಮತ್ತು ಅಮೆರಿಕ ತನ್ನ ಬದ್ಧತೆಗಳನ್ನು ಈಡೇರಿಸುವವರೆಗೆ ಹಿಂದಿನ ಮಾತುಕತೆ ಚೌಕಟ್ಟಿಗೆ ಮರಳುವ ಅಥವಾ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಸಾಧ್ಯತೆ ಇಲ್ಲ ಎಂದು ತಿಳಿಸಿದ್ದಾರೆ. Share via: Facebook X (Twitter) LinkedIn More Post navigation Nepal floods| ಮೃತರಸಂಖ್ಯೆ 162ಕ್ಕೆಏರಿಕೆ; 133 ಮಂದಿ ಭಾರತೀಯರು ಕಣ್ಮರೆ, ಸಹಾಯವಾಣಿ ತೆರೆದ ಕರ್ನಾಟಕ ಸರ್ಕಾರ!Video