ನಗರದ ಡಾ. ಮನಮೋಹನ್ ಸಿಂಗ್ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಓಬಿಸಿ ರಾಷ್ಟ್ರೀಯ ಮಹಾಸಂಘದ 12ನೇ ಸಮ್ಮೇಳನದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಬೆಂಗಳೂರು: ದೇಶದಲ್ಲಿ ಮಹಿಳಾ ಮೀಸಲಾತಿ ಎನ್ನುವುದು ಎಲ್ಲರೂ ಸ್ವಾಗತಿಸುವ ನಿರ್ಧಾರವಾದರೂ, ಹಿಂದುಳಿದ ವರ್ಗಗಳ (ಓಬಿಸಿ) ಮಹಿಳೆಯರಿಗಾಗಿ ಪ್ರತ್ಯೇಕ ಮೀಸಲಾತಿ ಕಲ್ಪಿಸುವುದು ಅವಶ್ಯ ಎಂದು ಮಾಜಿ ಸಚಿವರು, ವಿಧಾನಪರಿಷತ್ ಸದಸ್ಯರಾದ ಡಾ. ಉಮಾಶ್ರೀ ಅಭಿಪ್ರಾಯಪಟ್ಟಿದ್ಧಾರೆ. ನಗರದ ಡಾ. ಮನಮೋಹನ್ ಸಿಂಗ್ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಓಬಿಸಿ ರಾಷ್ಟ್ರೀಯ ಮಹಾಸಂಘದ 12ನೇ ಸಮ್ಮೇಳನದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ವರ್ಗಗಳ (ಓಬಿಸಿ) ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ನೀಡಿಲ್ಲ. ಇದರಿಂದಾಗಿ ಮೀಸಲಾತಿಯ ಸೌಲಭ್ಯ ಕೇವಲ ಮೇಲ್ವರ್ಗದ ಅಥವಾ ಪ್ರಭಾವಿ ವರ್ಗದ ಮಹಿಳೆಯರಿಗೆ ಮಾತ್ರ ಸೀಮಿತವಾಗಬಹುದು ಎಂಬ ಆತಂಕವಿದೆ ಎಂದು ಹೇಳಿದರು. ಒಗ್ಗಟ್ಟಿನ ಹೋರಾಟ ಅತ್ಯಗತ್ಯ : ಮಹಿಳಾ ಮೀಸಲಾತಿಯಲ್ಲಿ ಪ್ರತ್ಯೇಕವಾಗಿ ಓಬಿಸಿ ಮಹಿಳೆಯರಿಗೆ ಮೀಸಲಾತಿ ಬಂದರೆ ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ನಮ್ಮ ಓಬಿಸಿ ಹೆಣ್ಣು ಮಕ್ಕಳಿಗೆ ಒಳ್ಳೆಯದಾಗುತ್ತದೆ. ಇಲ್ಲದೇ ಹೋದರೆ ಮೀಸಲಾತಿ ಲಾಭವನ್ನು ಬಲಾಢ್ಯ ಸಮುದಾಯದವರು ಪಡೆದುಕೊಳ್ಳಬಹುದು. ಅದಕ್ಕಾಗಿ ದೇಶಾದ್ಯಂತ ಒಗ್ಗಟ್ಟಿನ ಏಕಧ್ವನಿಯ ಹೋರಾಟ ಅಗತ್ಯವಿದೆ ಎಂದು ತಿಳಿಸಿದರು. ಇಂದು ದೇಶದೆಲ್ಲೆಡೆ ಅತಿ ಹೆಚ್ಚು ಸಂಖ್ಯೆಯಲ್ಲಿ ಇರುವವರು ಓಬಿಸಿಗಳು. ಆದರೆ, ಅವರಿಗೆ ಸರಿಯಾದ ಅವಕಾಶಗಳಾಗಲಿ; ಅಥವಾ ಸೌಲಭ್ಯಗಳಾಗಲಿ, ಮಾನ್ಯತೆ ಅಥವಾ ಆದ್ಯತೆಯಾಗಲಿ ಯಾವುದೇ ರಾಜ್ಯದಲ್ಲಿ ಯಾವುದೇ ಸರ್ಕಾರದಲ್ಲಿ, ಯಾವುದೇ ಪಕ್ಷದಲ್ಲಿ ಸಿಗದೇ ಇರುವುದು ಅತ್ಯಂತ ದುರ್ಲಭ. ಓಬಿಸಿಗಳು ಹಿಂದುಳಿಯಲು ಪ್ರಮುಖ ಕಾರಣ. ನೂರಾರು ಜಾತಿಗಳು; ಹಲವಾರು ಉಪಜಾತಿಗಳು ಇರುವುದೇ ನಮ್ಮೆಲ್ಲರ ದೌರ್ಭಾಗ್ಯ ಎಂದು ವಿಷಾದ ವ್ಯಕ್ತಪಡಿಸಿದರು. ಓಬಿಸಿಗಳಿಗೆ ಮಾನ್ಯತೆ; ಆದ್ಯತೆ ದೊರೆಯಲಿ: ದೇಶದಲ್ಲಿ ಓಬಿಸಿಗಳಿಗೆ ಮೀಸಲಾತಿ ಸೌಲಭ್ಯ ಮತ್ತಷ್ಟು ದೊರೆಯಬೇಕು. ಅದಕ್ಕಾಗಿ ದೇಶಾದ್ಯಂತ ಓಬಿಸಿಗಳು ಸಂಘಟಿತರಾಗಬೇಕು. ಯಾವುದೇ ಒಂದೇ ಒಂದು ಜಾತಿಯ ಹೆಸರಿನಲ್ಲಿ, ವರ್ಗದ ಹೆಸರಿನಲ್ಲಿ ಹೋರಾಟ ಸಾಧ್ಯವಿಲ್ಲ. ಎಲ್ಲ ಹಿಂದುಳಿದ ವರ್ಗಗಳು ನಮ್ಮ ಹಕ್ಕುಗಾಗಿ ಸಂಘಟಿತವಾಗಬೇಕು. ಅದು ಸಾಧ್ಯವಾದಾಗ ಮಾತ್ರ ಓಬಿಸಿಗಳಿಗೆ ಮಾನ್ಯತೆ, ಆದ್ಯತೆ ದೊರೆಯುತ್ತದೆ. ಮುಂದೆ ನಮ್ಮ ಮಕ್ಕಳ ಭವಿಷ್ಯಕ್ಕೂ ಅನುಕೂಲವಾಗುತ್ತದೆ ಎಂದು ಡಾ. ಉಮಾಶ್ರೀ ಹೇಳಿದರು. #Backward classes #Separate reservation #DrUmashree #ಹಿಂದುಳಿದವರ್ಗಗಳು#ಪ್ರತ್ಯೇಕಮೀಸಲಾತಿ#ಡಾಉಮಾಶ್ರೀ Share via: Facebook X (Twitter) LinkedIn More Post navigation ಬಿಡದಿ ಟೌನ್ಶಿಪ್ ಯೋಜನೆ ವಿರುದ್ಧ ಬಿಜೆಪಿ-ಜೆಡಿಎಸ್ ಒಂದಾಗಿ ಹೋರಾಟ: ಪ್ರತಿಪಕ್ಷ ನಾಯಕ ಆರ್.ಅಶೋಕ್! ಬಿಡದಿ ಟೌನ್ ಶಿಪ್ ವಿರೋಧಿಸಿ ಪಾದಯಾತ್ರೆ; ಬಿಜೆಪಿಯಿಂದ ನೈತಿಕ ಬೆಂಬಲ-ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ!