ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಭಟನೆ


ಭಾನುವಾರ ಲಾಲ್‌ಬಾಗ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ  ಸಾವಿರಾರು ಪರಿಸರ ಪ್ರೇಮಿಗಳು, ವಾಯುವಿಹಾರಿಗಳು, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಲಾಲ್‌ಬಾಗ್ ಉಳಿಸಿ ಎಂದು ಒತ್ತಾಯಿಸಿದರು. 

ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಹೋರಾಟ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಸುರಂಗ ರಸ್ತೆ ನಿರ್ಮಾಣ ಮತ್ತು ಉದ್ಯಾನವನಗಳ ಶೇ 5ರಷ್ಟು ಜಾಗ ಮಾರಾಟ ಮಾಡುವ ಸರ್ಕಾರದ ಕ್ರಮವನ್ನು ಖಂಡಿಸಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. 

ಭಾನುವಾರ ಲಾಲ್‌ಬಾಗ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ  ಸಾವಿರಾರು ಪರಿಸರ ಪ್ರೇಮಿಗಳು, ವಾಯುವಿಹಾರಿಗಳು, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಲಾಲ್‌ಬಾಗ್ ಉಳಿಸಿ ಎಂದು ಒತ್ತಾಯಿಸಿದರು. ಲಾಲ್‌ಬಾಗ್‌ನ ಹಸಿರು ಪ್ರದೇಶವನ್ನು ಯಾವುದೇ ಕಾರಣಕ್ಕೂ ಮೂಲಸೌಕರ್ಯ ಕಾಮಗಾರಿಗಳಿಗೆ ಬಳಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಗರದ ಪ್ರಮುಖ ಹಸಿರು ತಾಣವಾಗಿರುವ ಲಾಲ್‌ಬಾಗ್‌ ಕೇವಲ ಉದ್ಯಾನವಲ್ಲ; ಬೆಂಗಳೂರಿನ ಪರಿಸರ ಸಮತೋಲನ ಕಾಪಾಡುವ ಪ್ರಮುಖ ಪ್ರದೇಶವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ಕೈಗಳಲ್ಲಿ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಕೆಂಪೇಗೌಡ ಗೋಪುರ ಬಳಿ ಬಂಡೆಗಳನ್ನು ಅಪ್ಪಿಕೊಂಡು, ನಟ ರಾಜ್‌ ಕುಮಾರ್ ಅವರ ಗಂಧದ ಗುಡಿ ಸಿನಿಮಾ ಗೀತೆ ಹಾಡಿದ ಸಂಸದ ತೇಜಸ್ವಿ ಸೂರ್ಯ,ಇದು ಟ್ರೈಲರ್ ಅಷ್ಟೇ, ಪಿಕ್ಚರ್ ಬಾಕಿ ಇದೆ  ಎಂದರು. ಮುಂದಿನ ದಿನಗಳಲ್ಲಿ ಪ್ರತಿ ಭಾನುವಾರ ಬೆಂಗಳೂರು ಪಾರ್ಕ್‌ಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜಾಥಾದ ನೇತೃತ್ವ ವಹಿಸಿದ್ದ 91 ವರ್ಷದ ಹಿರಿಯರಾದ ಯಲ್ಲಪ್ಪ ರೆಡ್ಡಿ ಅವರಿಂದ ಹಿಡಿದು, ಆರು ತಿಂಗಳ ಹಸುಗೂಸುಗಳವರೆಗೆ ತನ್ನ ಹಸಿರನ್ನು ಮತ್ತು ಉದ್ಯಾನವನಗಳನ್ನು ಉಳಿಸಿಕೊಳ್ಳಲು ಇಡೀ ಬೆಂಗಳೂರೇ ಒಟ್ಟಾಗಿ ನಿಂತಿತು. ಎಂಥಾ ಸುಂದರ ನಗರ, ಎಂಥಾ ಅದ್ಭುತ ಜನತೆ ” ಎಂದರು.

#Bengaluru #Save Lalbagh #Massive Protest #Tejasvi Surya #ಬೆಂಗಳೂರು#ಲಾಲ್ ಬಾಗ್ ಉಳಿಸಿ# ಬೃಹತ್ ಪ್ರತಿಭಟನೆ #ತೇಜಸ್ವಿ ಸೂರ್ಯ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link