ವಿಜಯ್

ಟ್ರೇಂಡ್ ಹೀಗೆ ಮುಂದುವರೆದರೆ ಟಿವಿಕೆ ಅಧಿಕಾರಕ್ಕೇರುವುದು ಖಚಿತವಾಗಿದ್ದು, ಎಂಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಅವರ ನಂತರ ಮುಖ್ಯಮಂತ್ರಿ ಗಾದಿಗೆ ಏರಿದ ನಟ ಎನಿಸಿಕೊಳ್ಳುವ ಅವಕಾಶ ವಿಜಯ್ ಅವರಿಗೆ ಇದೆ. ಮೂರು ಬಾರಿ ತಮಿಳುನಾಡಿನ ಮುಖ್ಯಮಂತ್ರಕಿಯಾಗಿದ್ದ ಎಂಜಿಆರ್ ಅವರು ರಾಜಕೀಯ ಪ್ರವೇಶಕ್ಕೂ ಮುನ್ನಾ ನಟನಾಗಿ ಅಪಾರ ಜನಪ್ರಿಯತೆ ಹೊಂದಿದ್ದರು.

ನಟ ವಿಜಯ್

ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಪಂಚರಾಜ್ಯ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ಮತ ಎಣಿಕೆ ಕಾರ್ಯ ನಿರ್ಣಾಯಕ ಘಟ್ಟ ತಲುಪಿದೆ. ತಮಿಳುನಾಡಿನಲ್ಲಿ ನಟ ವಿಜಯ್ ಅವರ ಹೊಸ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ)  ಹೆಚ್ಚಿನ ಸ್ಥಾನಗಳಲ್ಲಿ  ಮುನ್ನಡೆ ಕಾಯ್ದುಕೊಂಡಿದೆ. ಈ ಮೂಲಕ  ಎರಡು ವರ್ಷಗಳ  ಹಿಂದಷ್ಟೇ ಸ್ಥಾಪನೆಗೊಂಡ ಟಿವಿಕೆ ತಮಿಳುನಾಡು ರಾಜಕೀಯದಲ್ಲಿ ಬಲವಾಗಿ ಗಮನ ಸೆಳೆದಿದೆ. 

ಟ್ರೇಂಡ್ ಹೀಗೆ ಮುಂದುವರೆದರೆ ಟಿವಿಕೆ ಅಧಿಕಾರಕ್ಕೇರುವುದು ಖಚಿತವಾಗಿದ್ದು, ಎಂಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಅವರ ನಂತರ ಮುಖ್ಯಮಂತ್ರಿ ಗಾದಿಗೆ ಏರಿದ ನಟ ಎನಿಸಿಕೊಳ್ಳುವ ಅವಕಾಶ ವಿಜಯ್ ಅವರಿಗೆ ಇದೆ. ಮೂರು ಬಾರಿ ತಮಿಳುನಾಡಿನ ಮುಖ್ಯಮಂತ್ರಕಿಯಾಗಿದ್ದ ಎಂಜಿಆರ್ ಅವರು ರಾಜಕೀಯ ಪ್ರವೇಶಕ್ಕೂ ಮುನ್ನಾ ನಟನಾಗಿ ಅಪಾರ ಜನಪ್ರಿಯತೆ ಹೊಂದಿದ್ದರು.

ಬಂಗಾಳದಲ್ಲಿ ಬಿಜೆಪಿ ಅಲೆ, ದೀದಿಗೆ ಮುಖಭಂಗ

ಇನ್ನೂ ಪಶ್ಚಿಮ ಬಂಗಾಳದಲ್ಲಿ ಆರಂಭಿಕ ಪ್ರವೃತ್ತಿಗಳ ಪ್ರಕಾರ, ಬಿಜೆಪಿ ಈಗಾಗಲೇ ಮ್ಯಾಜಿಕ್ ನಂಬರ್ ದಾಟಿದ್ದು,180 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಮತ್ತೊಂದೆಡೆ ಮಮತಾ ಬ್ಯಾನರ್ಜಿ ಅವರ ಪಕ್ಷವು 108 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 1 ಸ್ಥಾನದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.

ಅಸ್ಸಾಂ ನಲ್ಲಿ ಬಿಜೆಪಿ ಮುನ್ನಡೆ: ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಈ ಬಾರಿಯೂ ಜನರು ಬಿಜೆಪಿಗೆ ಮನ್ನಣೆ ಹಾಕಿದ್ದಾರೆ. ಬಿಜೆಪಿ 95, ಕಾಂಗ್ರೆಸ್ 29 ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕೇರಳ ವಿಧಾನಸಭಾ ಚುನಾವಣೆಯಲ್ಲಿ  ಆಡಳಿತಾರೂಢ ಎಲ್ ಡಿಎಫ್ ಗೆ ಭಾರೀ ಮುಖ ಭಂಗವಾಗಿದ್ದು, ಸದ್ಯದ ಪ್ರಕಾರ ಯುಡಿಎಫ್ 85 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಬಹುಮತದ ಸಂಖ್ಯೆ ಪಡೆದಿದೆ. ಪಿಣರಾಯಿ ವಿಜಯನ್ ನೇತೃತ್ವದ ಎಡಪಕ್ಷ ಕೇವಲ 41 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

#Tamilnadu #Kerala #Assam #Assemblypolls #ತಮಿಳುನಾಡು #ಕೇರಳ# ಅಸ್ಸಾಂ #ವಿಧಾನಸಭಾ ಚುನಾವಣೆ

Leave a Reply

Your email address will not be published. Required fields are marked *