ಮಾಜಿ ಪ್ರಧಾನಿಯ ಮಗ 2006ರಲ್ಲಿ ಅವಕಾಶವಾದಿ ಸ್ಮಾರಕ ಪಾಲಿಟಿಕ್ಸ್ ಶುರು ಮಾಡಿ ಕನ್ನಡ ಚಿತ್ರರಂಗದ ಅಭಿಮಾನಿಗಳ ನಡುವೆ ಅದಕ್ಕೆ ಸಂಬಂಧಪಟ್ಟ ಫ್ಯಾನ್ಸ್ ವಾರ್ಸ್ ಪ್ರೇರೇಪಿಸಿದವರಾ? ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಅವರ ಸಮಾಧಿ ವಿಚಾರವಾಗಿ ಕೊಂಕು ಮಾತನಾಡಿ ವಿವಾದಕ್ಕೆ ಸಿಲುಕಿರುವ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ವಿರುದ್ಧ ಕನ್ನಡ ಅಭಿಮಾನಿಗಳು ಮುಗಿಬಿದಿದ್ದಾರೆ. ಈ ಮಧ್ಯೆ ಅಣ್ಣಾವ್ರ ಅವರು ಹೆಸರು ಹೇಳಲು ಚೇತನ್ ಯೋಗ್ಯರಲ್ಲ ಅಂತಾ ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಚೇತನ್, ಪ್ರಜಾಪ್ರಭುತ್ವದಲ್ಲಿ ಯಾರು ಮಾತನಾಡಲು ಯೋಗ್ಯ ಎಂದು ಪ್ರಶ್ನಿಸಿದ್ದಾರೆ. ಮಾಜಿ ಪ್ರಧಾನಿಯ ಮಗ 2006ರಲ್ಲಿ ಅವಕಾಶವಾದಿ ಸ್ಮಾರಕ ಪಾಲಿಟಿಕ್ಸ್ ಶುರು ಮಾಡಿ ಕನ್ನಡ ಚಿತ್ರರಂಗದ ಅಭಿಮಾನಿಗಳ ನಡುವೆ ಅದಕ್ಕೆ ಸಂಬಂಧಪಟ್ಟ ಫ್ಯಾನ್ಸ್ ವಾರ್ಸ್ ಪ್ರೇರೇಪಿಸಿದವರಾ? ಎಂದು ಪ್ರಶ್ನಿಸಿದ್ದಾರೆ. ಅಥವಾ ಅವರ ಮಗ ಮೂರು ಬಾರಿ ಸೋತವರು, ಸ್ವಜನಪಕ್ಷಪಾತ ಹೊರತುಪಡಿಸಿ ಮತ್ತೇನು ಸಾಧನೆ ಇಲ್ಲದವರಾ? ಪ್ರಜಾಪ್ರಭುತ್ವದಲ್ಲಿ ನಾವು ಎಲ್ಲರೂ ಮಾತನಾಡಲು ಯೋಗ್ಯರೆ. ಆದರೆ ಯಾರ ಮಾತಿಗೆ ನಿಜವಾದ ತೂಕ ಇದೆ ಅನ್ನುವುದನ್ನು ಜನರೇ ತೀರ್ಮಾನಿಸುತ್ತಾರೆ ಎಂದಿದ್ದಾರೆ. #Karnataka #sandalwood #drRajkumarmemorial #nikhilkumaraswamy #Chetanahimsa #ಕರ್ನಾಟಕ#ಸ್ಯಾಂಡಲ್ ವುಡ್ #ಡಾರಾಜ್ ಕುಮಾರ್ ಸ್ಮಾರಕ #ನಿಖಿಲ್ ಕುಮಾರಸ್ವಾಮಿ #ಚೇತನ್ ಅಹಿಂಸಾ Post navigation ತಳವಾರ ಸಮುದಾಯದವರಿಗೆ ST ಜಾತಿ ಪ್ರಮಾಣ ಪತ್ರ ನೀಡಲು ಪ್ರಾಮಾಣಿಕ ಪ್ರಯತ್ನ- ಪ್ರಿಯಾಂಕ್ ಖರ್ಗೆ