ದೇಶಾದ್ಯಂತ ಸುಮಾರು 845ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಈ ಚಿತ್ರವು, ಆರಂಭಿಕ ಹಂತದಲ್ಲಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ತನ್ನ ಪ್ರಭಾವವನ್ನು ಬೀರಲು ಪ್ರಯತ್ನಿಸುತ್ತಿದೆ. ಸಾಕಷ್ಟುವಿವಾದ, ಸೌಂಡು ಮಾಡಿಕೊಂಡೇ ಬಿಡುಗಡೆಯಾಗಿರುವ ಜೋಗಿ ಪ್ರೇಮ್ ನಿರ್ದೇಶನ ಹಾಗೂ ಧ್ರುವ ಸರ್ಜಾ ಅಭಿನಯದ ಮಹತ್ವಕಾಂಕ್ಷೆಯ ಕೆಡಿ ದಿ ಡೆವಿಲ್ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನದ ಬಾಕ್ಸ್ ಆಫೀಸ್ ವರದಿಗಳು ಸ್ಯಾಂಡಲ್‌ವುಡ್ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಸ್ಯಾಕ್‌ನಿಲ್ಕ್ ವರದಿಗಳ ಪ್ರಕಾರ ಈ ಸಿನಿಮಾವು ಮೊದಲ ದಿನ ಭಾರತೀಯ ಮಾರುಕಟ್ಟೆಯಲ್ಲಿ ಸರಿಸುಮಾರು 3.50 ಕೋಟಿ ರೂಪಾಯಿ ನಿವ್ವಳ ಗಳಿಕೆಯನ್ನು ದಾಖಲಿಸಿದೆ. ಚಿತ್ರದ ಒಟ್ಟಾರೆ ಗ್ರಾಸ್ ಗಳಿಕೆಯು 4.10 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿದೆ ಎಂದು ಅಂದಾಜಿಸಲಾಗಿದೆ. ದೇಶಾದ್ಯಂತ ಸುಮಾರು 845ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಈ ಚಿತ್ರವು, ಆರಂಭಿಕ ಹಂತದಲ್ಲಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ತನ್ನ ಪ್ರಭಾವವನ್ನು ಬೀರಲು ಪ್ರಯತ್ನಿಸುತ್ತಿದೆ. ತಮ್ಮದೇ ಆದ ಮಂಡ್ಯ ಶೈಲಿಯ ಸಂಭಾಷಣೆ ಹಾಗೂ ಭಾವನಾತ್ಮಕ ಸನ್ನಿವೇಶ, ಅದ್ದೂರಿ ಸೆಟ್ ಗಳಿಗೆ ಹೆಸರುವಾಸಿಯಾಗಿರುವ ಜೋಗಿ ಪ್ರೇಮ್, ಈ ಚಿತ್ರದಲ್ಲಿ ಅವರು 1980ರ ದಶಕದ ಬೆಂಗಳೂರನ್ನು ತೆರೆಯ ಮೇಲೆ ಮರುಸೃಷ್ಟಿಸಿದ್ದಾರೆ. ಧ್ರುವ ಸರ್ಜಾ ಅವರು ಕಾಳಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿನಯ ಮತ್ತು ರೆಟ್ರೋ ಶೈಲಿಯ ಗೆಟಪ್ ಅಭಿಮಾನಿಗಳಿಗೆ ಹೊಸ ಲೋಕವನ್ನು ಪರಿಚಯಿಸಿದೆ. ಚಿತ್ರವು ಕೇವಲ ಆ್ಯಕ್ಷನ್ ದೃಶ್ಯಗಳಿಗಷ್ಟೇ ಸೀಮಿತವಾಗದೆ, ಭಾವನಾತ್ಮಕ ಅಂಶಗಳು ಮತ್ತು ಸೋದರ ಸಂಬಂಧದ ಎಳೆಗಳನ್ನು ಒಳಗೊಂಡಿದೆ. ಸಂಜಯ್ ದತ್ ಅವರಂತಹ ಸ್ಟಾರ್ ಕಲಾವಿದರ ಉಪಸ್ಥಿತಿಯು ಚಿತ್ರಕ್ಕೆ ಪ್ಯಾನ್ ಇಂಡಿಯಾ ಮಟ್ಟದ ಆಕರ್ಷಣೆಯನ್ನು ನೀಡಿದ್ದು, ಪರಭಾಷೆಯ ಪ್ರೇಕ್ಷಕರ ಗಮನವನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ವಿಶೇಷ ಪಾತ್ರವು ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ಅವರ ಪ್ರವೇಶವು ಪ್ರೇಕ್ಷಕರಲ್ಲಿ ಹುಮ್ಮಸ್ಸನ್ನು ಹೆಚ್ಚಿಸಿದೆ. ಹಿರಿಯ ನಟ ರವಿಚಂದ್ರನ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ ಮತ್ತು ಪಿ ರವಿಶಂಕರ್ ಮುಂತಾದ ಅನುಭವಿ ಕಲಾವಿದರು ತಮ್ಮ ಪಾತ್ರಗಳಲ್ಲಿ ಜೀವ ತುಂಬಿದ್ದಾರೆ. ಈ ಎಲ್ಲ ಕಲಾವಿದರ ಸಮಾಗಮವು ಚಿತ್ರಕ್ಕೆ ದೊಡ್ಡ ಮಟ್ಟದ ಬಲವನ್ನು ನೀಡಿದೆ. ಇಷ್ಟು ದೊಡ್ಡ ತಾರಾಗಣದ ನಡುವೆಯೂ ಧ್ರುವ ಸರ್ಜಾ ಅವರು ತಮ್ಮ ಶಕ್ತಿಯುತ ಅಭಿನಯದ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಟಿ ರೀಷ್ಮಾ ನಾಣಯ್ಯ ಅವರ ಪಾತ್ರ ಕೂಡ ಚಿತ್ರಕ್ಕೆ ಪೂರಕವಾಗಿ ಮೂಡಿಬಂದಿದೆ. ವಿಲಿಯಂ ಡೇವಿಡ್ ಅವರ ಕ್ಯಾಮೆರಾ ಕೈಚಳಕ ಮತ್ತು ಅರ್ಜುನ್ ಜನ್ಯ ಅವರ ಸಂಗೀತವು ಚಿತ್ರದ ಆಕರ್ಷಣೆಯನ್ನು ಹೆಚ್ಚಿಸಿದೆ. ನಿರ್ದೇಶಕರು ಆ ಕಾಲಘಟ್ಟವನ್ನು ಪ್ರತಿಬಿಂಬಿಸಲು ಬಳಸಿದ ವೇಷಭೂಷಣಗಳು, ವಾಹನಗಳು ಮತ್ತು ಸೆಟ್‌ಗಳು ಅತ್ಯಂತ ನೈಜವಾಗಿ ಮೂಡಿಬಂದಿವೆ. ಬಾಕ್ಸ್ ಆಫೀಸ್ ಗಳಿಕೆಯು ಮೊದಲ ದಿನದ ಮಟ್ಟಿಗೆ ಸಕಾರಾತ್ಮಕವಾಗಿದ್ದು, ಪ್ರೇಕ್ಷಕರ ಒಲವು ಚಿತ್ರಮಂದಿರಗಳತ್ತ ಹರಿದು ಬರುತ್ತಿದೆ. ಮುಂದಿನ ಮೂರು ದಿನಗಳ ಸುದೀರ್ಘ ರಜೆ ಇರುವುದರಿಂದ ಚಿತ್ರದ ಗಳಿಕೆಯು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. #Sandalwood #KD The Devil #Boxofficecollection #prem #Dhruva Sarja #Sanjay Dutt #ಸ್ಯಾಂಡಲ್ ವುಡ್ #ಕೆಡಿ ದೆವಿಲ್ # ಬಾಕ್ಸ್ ಆಫೀಸ್ ಕಲೆಕ್ಷನ್ # ಪ್ರೇಮ್ # ಧ್ರುವ ಸರ್ಜಾ # ಸಂಜಯ್ ದತ್ Post navigation ಬೆಂಗಳೂರಿನ ಹೃದಯ ಭಾಗದಲ್ಲಿ ಡಾ. ರಾಜ್ ಸ್ಮಾರಕಕ್ಕೆ 2.5 ಎಕರೆ ಸರ್ಕಾರಿ ಜಾಗ! ಪ್ರಶ್ನಿಸಿದ ನಟ ಚೇತನ್ ಅಹಿಂಸಾ! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಹೊಸ ಜಾಮೀನು ಅರ್ಜಿ ವಿಚಾರಣೆ, ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ!