ಪವಿತ್ರಾ ಗೌಡ


ತಮ್ಮ ಬ್ಯಾರಕ್‌ ಬದಲಾವಣೆ ಮಾಡುವಂತೆ ಕೋರಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಗೆ ಅಸ್ತು ಎಂದಿದ್ದ ಕೋರ್ಟ್‌, ಬ್ಯಾರಕ್ ಬದಲಾಯಿಸುವಂತೆ ಸೂಚನೆ ನೀಡಿತ್ತು. 

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅವರ ಗೆಳತಿ, ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರು ನೈಜಿರಿಯನ್ ಪ್ರಜೆಗಳ ಕಿರುಕುಳ ಹೆಚ್ಚಾಗಿದ್ದು, ಕೋರ್ಟ್ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ತಮ್ಮ ಬ್ಯಾರಕ್‌ ಬದಲಾವಣೆ ಮಾಡುವಂತೆ ಕೋರಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಗೆ ಅಸ್ತು ಎಂದಿದ್ದ ಕೋರ್ಟ್‌, ಬ್ಯಾರಕ್ ಬದಲಾಯಿಸುವಂತೆ ಸೂಚನೆ ನೀಡಿತ್ತು. ಆದರೆ ಇದುವರೆಗೂ ಬೇರೆ ಬ್ಯಾರಕ್ ಗೆ ಶಿಫ್ಟ್ ಮಾಡಿ ವರದಿ ಸಲ್ಲಿಸದ‌ ಜೈಲಾಧಿಕಾರಿಗಳ ವಿರುದ್ಧ ಕೋರ್ಟ್ ಗರಂ ಆಗಿದೆ. ಇಂದೇ ವರದಿ ಸಲ್ಲಿಸುವಂತೆ ಜೈಲಾಧಿಕಾರಿಗಳಿಗೆ ಕೋರ್ಟ್ ಡೆಡ್ ಲೈನ್ ನೀಡಿದೆ.

ಸೆಪ್ಟೆಂಬರ್ 7ರಂದು ಬೇರೆ ಬ್ಯಾರಕ್ ಗೆ ಶಿಫ್ಟ್ ಮಾಡುವಂತೆ ಕೋರ್ಟ್ ಆದೇಶ ನೀಡಿತ್ತು. ಆದರೆ ಆದೇಶ ಬಂದು ಒಂದು ತಿಂಗಳು ಕಳೆದರೂ ಬೇರೆ ಬ್ಯಾರಕ್ ಗೆ ಶಿಫ್ಟ್ ಮಾಡಿಲ್ಲ ಎಂದು ಪವಿತ್ರಾ ಗೌಡ ಮತ್ತೆ ಅರ್ಜಿ ಸಲ್ಲಿಸಿದ್ದರು.

ನೈಜಿರಿಯನ್ ಕಾಟಕ್ಕೆ ಬೇಸತ್ತು ಜಡ್ಜ್ ಮುಂದೆ ಪವಿತ್ರಾ ಗೌಡ ಕಣ್ಣೀರು ಸಹ ಹಾಕಿದ್ದರು. ಆಗ ಸೆ.26ರೊಳಗೆ ವರದಿ ನೀಡುವಂತೆ ಜೈಲಾಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿತ್ತು. ಆದರೂ ಜೈಲಾಧಿಕಾರಿಗಳು ವರದಿ ನೀಡಿರಲಿಲ್ಲ. ಹೀಗಾಗಿ ಅಕ್ಟೋಬರ್ 5ರಂದು ಮಾಫಿ ಸಾಕ್ಷಿ ಪ್ರಕ್ರಿಯೆ ಆರಂಭಕ್ಕೂ ಮುನ್ನ ಪವಿತ್ರಾ ಗೌಡ ಪರ ವಕೀಲರು ಈ ವಿಚಾರನ್ನು ಮತ್ತೆ ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ. ಜೈಲಾಧಿಕಾರಿಗಳು ಇನ್ನೂ ವರದಿ ನೀಡದ್ದಕ್ಕೆ ನ್ಯಾಯಾಧೀಶರು ಗರಂ ಆಗಿದ್ದು, ಇಂದು ತಪ್ಪದೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

ಪವಿತ್ರಾ ಗೌಡ ಅವರನ್ನ 32 ಆರೋಪಿಗಳಿದ್ದ ಬ್ಯಾರಕ್ ಗೆ ಶಿಫ್ಟ್ ಮಾಡಲಾಗಿದ್ದು, ಅಲ್ಲಿ ನೈಜಿರಿಯಾ ಆರೋಪಿಗಳ ಕಿರುಕುಳದ ಬಗ್ಗೆ ಕೋರ್ಟ್ ಗಮನಕ್ಕೆ ತಂದಿದ್ದರು.

#Renukaswamy murdercase #Pavithra Gowda #barrack shift #still pending #ರೇಣುಕಾಸ್ವಾಮಿಕೊಲೆ ಪ್ರಕರಣ#ಪವಿತ್ರಗೌಡ #ಬ್ಯಾರಕ್ ಸ್ಥಳಾಂತರ # ಇನ್ನೂ ಮುಗಿದಿಲ್ಲ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link