ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಬೆಲೆಯಲ್ಲಿಯೂ 20 ಶೇಕಡಾ ಇಳಿಕೆ ಕಂಡುಬಂದಿದೆ. 750 ಮಿ.ಲೀ ಬಾಟಲಿಯ ಬ್ಲಾಕ್ ಲೇಬಲ್ (43 ಶೇಕಡಾ ಆಲ್ಕೊಹಾಲ್ v/v) ಮತ್ತು ಚಿವಾಸ್ ರೀಗಲ್ (40 ಶೇಕಡಾ ಆಲ್ಕೊಹಾಲ್ v/v) ದರವು 5190 ರೂಪಾಯಿಗಳಿಂದ 4100 ರೂಪಾಯಿಗೆ ಇಳಿಕೆಯಾಗಿದೆ. ಬೆಂಗಳೂರು: ಕರ್ನಾಟಕದಲ್ಲಿ ಮೈಲ್ಡ್ ಮತ್ತು ಲಾಗರ್ ಬಿಯರ್ಗಳ ಬೆಲೆಗಳು ಮೇ 11ರಿಂದ ಜಾರಿಗೆ ಬರುವಂತೆ 20-25 ಶೇಕಡಾ ಇಳಿಕೆಯಾಗಿದೆ. ಅಬಕಾರಿ ಇಲಾಖೆ ಬಿಯರ್ ಮತ್ತು ಸ್ಪಿರಿಟ್ಸ್ಗಳಿಗೆ ‘ಆಲ್ಕೊಹಾಲ್ ಇನ್ ಬೇವರೇಜ್’ (AiB) ನೀತಿಯಡಿ ಹೊಸ ದರಪಟ್ಟಿಯನ್ನು ಬಿಡುಗಡೆ ಮಾಡಿದ್ದು, 5 ಶೇಕಡಾ ಆಲ್ಕೊಹಾಲ್ v/v(volume/volume) ಹೊಂದಿರುವ ಬಿಯರ್ಗಳ ಗರಿಷ್ಠ ಚಿಲ್ಲರೆ ಬೆಲೆ (MRP) 20 ರಿಂದ 25 ಶೇಕಡಾ ಕಡಿಮೆಯಾಗಿದೆ. ಹೊಸ ದರಪಟ್ಟಿಯ ಪ್ರಕಾರ, 5 ಶೇಕಡಾ ಆಲ್ಕೊಹಾಲ್ v/v ಹೊಂದಿರುವ ಜನಪ್ರಿಯ ಮೈಲ್ಡ್ ಬಿಯರ್ ಬ್ರ್ಯಾಂಡ್ಗಳಾದ ಕಿಂಗ್ಫಿಷರ್ ಪ್ರೀಮಿಯಂ, ಕಿಂಗ್ಫಿಷರ್ ಅಲ್ಟ್ರಾ, ಬಡ್ವೈಸರ್, ಯುಬಿ ಎಕ್ಸ್ಪೋರ್ಟ್, ಹೈನಿಕನ್ ಮುಂತಾದ 650 ಮಿ.ಲೀ ಬಾಟಲಿಗಳ ಗರಿಷ್ಠ ಚಿಲ್ಲರೆ ದರದಲ್ಲಿ ಕ್ರಮವಾಗಿ 75 ರೂ (KF Premium, Ultra), 70 ರೂ (Heineken), 25 ರೂ (UB Export) ಮತ್ತು 20 ರೂ. (Budweiser Premium) ಇಳಿಕೆಯಾಗಿದೆ. ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಬೆಲೆಯಲ್ಲಿಯೂ 20 ಶೇಕಡಾ ಇಳಿಕೆ ಕಂಡುಬಂದಿದೆ. 750 ಮಿ.ಲೀ ಬಾಟಲಿಯ ಬ್ಲಾಕ್ ಲೇಬಲ್ (43 ಶೇಕಡಾ ಆಲ್ಕೊಹಾಲ್ v/v) ಮತ್ತು ಚಿವಾಸ್ ರೀಗಲ್ (40 ಶೇಕಡಾ ಆಲ್ಕೊಹಾಲ್ v/v) ದರವು 5190 ರೂಪಾಯಿಗಳಿಂದ 4100 ರೂಪಾಯಿಗೆ ಇಳಿಕೆಯಾಗಿದೆ. ರಾಜ್ಯ ಸರ್ಕಾರವು ಮೇ 8ರಂದು ಹೊಸ ತೆರಿಗೆ ನೀತಿಗೆ ಸಂಬಂಧಿಸಿದ ಅಂತಿಮ ಅಧಿಸೂಚನೆಯನ್ನು ಹೊರಡಿಸಿ, ‘ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕ) (2ನೇ ತಿದ್ದುಪಡಿ) ನಿಯಮಗಳು, 2026’ ನ್ನು ಪ್ರಕಟಿಸಿತ್ತು. ಇದು ಮೇ 11ರಿಂದ ಜಾರಿಗೆ ಬಂದಿದೆ. ಎಐಬಿ ತೆರಿಗೆ ನೀತಿಯನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯ ಕರ್ನಾಟಕವಾಗಿದೆ. AiB ಎಂದರೆ “ಬ್ರಾಂಡಿ, ವಿಸ್ಕಿ, ಜಿನ್, ರಮ್, ಬಿಯರ್, ವೈನ್, ಫ್ರೂಟ್ ವೈನ್, ಫೋರ್ಟಿಫೈಡ್ ವೈನ್ ಮುಂತಾದ ಮದ್ಯಗಳಲ್ಲಿ ಪ್ರತಿ ಲೀಟರ್ಗೆ ಇರುವ ಆಲ್ಕೊಹಾಲ್ ಪ್ರಮಾಣ/ಪರಿಮಾಣ ಎಂದು ಅರ್ಥ. ಇದಲ್ಲದೆ, ಕರ್ನಾಟಕದಲ್ಲಿ ಎಂಆರ್ ಪಿ ಆಧಾರದಲ್ಲಿ ಮದ್ಯ ಮಾರಾಟವಾಗುವ ಅಬಕಾರಿ ಸ್ಲ್ಯಾಬ್ಗಳ ಸಂಖ್ಯೆಯನ್ನು ಸರ್ಕಾರವು 16ರಿಂದ 8ಕ್ಕೆ ಇಳಿಸಿದೆ. #Karnataka #Beerswhiskeys #Pricedropped #ಕರ್ನಾಟಕ #ಬಿಯರ್ ವಿಸ್ಕಿ #ಬೆಲೆ ಇಳಿಕೆ Post navigation ಪ್ರಧಾನಿ ಮೋದಿ ವಾರ್ನಿಂಗ್ ಬೆನ್ನಲ್ಲೇ, ಪೆಟ್ರೋಲ್- ಡೀಸೆಲ್ ದರ ದುಬಾರಿ: ಲೀಟರ್ಗೆ ರೂ. 3 ಏರಿಕೆ, 4 ವರ್ಷಗಳ ಬಳಿಕ ಇಂಧನ ದರ ಪರಿಷ್ಕರಣೆ..! ಮುಂದಿನ 3 ದಿನ ಗುಡುಗು ಸಹಿತ ಭಾರೀ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಿಸಿದ IMD !