ಕಾಂಗ್ರೆಸ್ ನಲ್ಲಿ ಮೂರು ಬಣಗಳಿದ್ದು, ಎಲ್ಲಾ ಬಣಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ 11:11:11 ಸಚಿವ ಸ್ಥಾನಗಳ ಫಾರ್ಮುಲಾ ಅಂತಿಮಗೊಳಿಸುವತ್ತ ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ. ಬೆಂಗಳೂರು: ಡಿ.ಕೆ. ಶಿವಕುಮಾರ್ ಪಟ್ಟಾಭಿಷೇಕಕ್ಕೆ ಭಾರೀ ಸಿದ್ಧತೆ ನಡೆಯುತ್ತಿರುವಂತೆಯೇ ಸಚಿವ ಸಂಪುಟ ರಚನೆಗೆ ಕಾಂಗ್ರೆಸ್ ಹೈಕಮಾಂಡ್ ಭಾರೀ ಕಸರತ್ತು ನಡೆಸಿದೆ. ಕಾಂಗ್ರೆಸ್ ನಲ್ಲಿ ಮೂರು ಬಣಗಳಿದ್ದು, ಎಲ್ಲಾ ಬಣಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ 11:11:11 ಸಚಿವ ಸ್ಥಾನಗಳ ಫಾರ್ಮುಲಾ ಅಂತಿಮಗೊಳಿಸುವತ್ತ ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಒಟ್ಟು 34 ಸದಸ್ಯರ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿದಂತೆ ಸುಮಾರು 11 ಸ್ಥಾನಗಳನ್ನು ಹೈಕಮಾಂಡ್ ಆಯ್ಕೆಯ ನಾಯಕರಿಗೆ, 11 ಸ್ಥಾನಗಳನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರಿಗೆ ಹಾಗೂ 11 ಸ್ಥಾನಗಳನ್ನು ನೂತನ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ಆಪ್ತರಿಗೆ ನೀಡುವ ಕುರಿತು ಚರ್ಚೆ ನಡೆದಿದೆ. ಅಂತಿಮ ಹಂತದ ಮಾತುಕತೆಗಳ ಆಧಾರದಲ್ಲಿ ಈ ಸಂಖ್ಯೆಯಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗುವ ಸಾಧ್ಯತೆಯೂ ಇದೆ. ಹೊಸ ಸರ್ಕಾರವು ಚುರುಕಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಯುವ, ಸಕ್ರಿಯ ಹಾಗೂ ಉತ್ತಮ ಸಾಧನೆ ತೋರಿದ ಶಾಸಕರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. #Karnataka #cabinet formation #Congress #working hard #ಕರ್ನಾಟಕ #ಸಂಪುಟ ಕಸರತ್ತು#ಕಾಂಗ್ರೆಸ್ Share via: Facebook X (Twitter) LinkedIn More Post navigation ಇಂದು ನೂತನ ಸಿಎಂ ಆಯ್ಕೆ: CLP ಸಭೆಗೂ ಮುನ್ನಾ ರಾಜ್ಯಪಾಲರನ್ನು ಭೇಟಿಯಾದ DKS !ಜೂನ್ 3 ಕ್ಕೆ ಪದಗ್ರಹಣ? ನನ್ನ ರಾಜಕೀಯ ಪ್ರಯಾಣದಲ್ಲಿ ಗಾಂಧಿ ಕುಟುಂಬ ನಿರ್ಣಾಯಕ ಪಾತ್ರ- ಡಿಕೆ ಶಿವಕುಮಾರ್ !