ಹೆಚ್ , ಸಿ. ಬಾಲಕೃಷ್ಣ, ಹೆಚ್ ಡಿ ಕುಮಾರಸ್ವಾಮಿ ಸಾಂದರ್ಭಿಕ ಚಿತ್ರ


ಅಸಹ್ಯ, ಥೂ, ಇವೆಲ್ಲಾ ಚಿಲ್ಲರೆ ಸ್ಟೇಟ್ಮೆಂಟ್. ಕುಮಾರಸ್ವಾಮಿ ಕೇಂದ್ರ ಮಂತ್ರಿ ಅನ್ನೋದನ್ನು ಮರೆತು ಇಂಥ ಚಿಲ್ಲರೆ ರಾಜಕಾರಣ ಮಾಡ್ತಿದ್ದಾರೆ ಎಂದು ಮಾಗಡಿ ಶಾಸಕ ಹೆಚ್. ಸಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ಬಿಡದಿ  ಟೌನ್  ಶಿಪ್  ವಿವಾದ  ದಿನದಿಂದ  ದಿನಕ್ಕೆ  ತಾರಕಕ್ಕೇರುತ್ತಿದೆ. ಕೇಂದ್ರ  ಸಚಿವ  ಎಚ್ಡಿ  ಕುಮಾರಸ್ವಾಮಿವಿರುದ್ಧಮಾಗಡಿಶಾಸಕಹೆಚ್. ಸಿ. ಬಾಲಕೃಷ್ಣ  ಕಿಡಿಕಾರಿದ್ದಾರೆ.   

ಬಸವೇಶ್ವರ  ನಗರದ  ತಮ್ಮ  ನಿವಾಸದಲ್ಲಿಂದು  ಯೋಜನೆ  ಬೆಂಬಲಿಸುವ  ಶಾಸಕರಿಗೆ  ನಿವೇಶನ  ನೀಡುವ  ಭರವಸೆನೀಡಲಾಗಿದೆಎಂಬಕುಮಾರಸ್ವಾಮಿಹೇಳಿಕೆ  ಕುರಿತ  ಸುದ್ದಿಗಾರರ  ಪ್ರಶ್ನೆಯಿಂದ  ಕೆರಳಿದ  ಬಾಲಕೃಷ್ಣ,  ಅವ್ರರಿಗೆಮಾನ,  ಮಾರ್ಯಾದೆ  ಇದ್ದರೆ  ಹೇಳಬೇಕು. ಕೇಂದ್ರದ  ಮಂತ್ರಿಯಾಗಿ  ಇಂತಹ  ಕ್ಷುಲಕ್ಕ  ಹೇಳಿಕೆ  ನೀಡುವುದನ್ನು ಕೈಬಿಡಬೇಕು ಎಂದರು.


ಯಾರೀ,  ಸೈಟ್ಕೊಡ್ತಿದ್ದಾರೆ.  ಅಸಹ್ಯ  ಆಗಲ್ವಾ  ಇಂತಹ  ಸ್ಟೇಟ್  ಮೆಂಟ್  ನೀಡುವುದಕ್ಕೆ. ನಿಖಿಲ್  ಕುಮಾರಸ್ವಾಮಿ  ತರಹ  ಹೇಳಿಕೆನೀಡುತ್ತಿದ್ದಾರೆ. ಇದೆಲ್ಲಾ  ಚಿಲ್ಲರೆ  ರಾಜಕಾರಣ.  ಹೇಳಿಕೆಗೆ  ಆಧಾರ  ತೋರಿಸಿದರೆ  ರಾಜಕೀಯದಿಂದ  ನಿವೃತ್ತಿಹೊಂದುತ್ತೇವೆ,  ಇಲ್ಲವಾದರೆಅವರೇರಾಜಕಾರಣದಿಂದನಿವೃತ್ತಿ  ಹೊಂದುತ್ತಾರಾಎಂದುಸವಾಲುಹಾಕಿದರು.

ಅಸಹ್ಯ, ಥೂ, ಇವೆಲ್ಲಾ ಚಿಲ್ಲರೆ ಸ್ಟೇಟ್ಮೆಂಟ್. ಕುಮಾರಸ್ವಾಮಿ ಕೇಂದ್ರಮಂತ್ರಿ ಅನ್ನೋದನ್ನು ಮರೆತು ಇಂಥ ಚಿಲ್ಲರೆ ರಾಜಕಾರಣ ಮಾಡ್ತಿದ್ದಾರೆ. ರಾಮನಗರದ ಚಾಮುಂಡೇಶ್ವರಿ ದೇವಾಲಯದ ಮುಂದೆ ಪ್ರಮಾಣ ಮಾಡಿ ಅಂದ್ರೂಕೇಳುತ್ತಿಲ್ಲ. ಸರ್ಕಾರಿ ಭೂಮಿ ಕಬಳಿಸಿದ್ದಾರೆ ಎಂಬ ಅವರ ಆರೋಪದಲ್ಲಿ ಹುರುಳಿಲ್ಲ. ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ. ಕೇಂದ್ರ ಮಂತ್ರಿಯಾಗಿ ಇಂತಹ ಕ್ಷುಲಕ್ಕ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಅಭಿವೃದ್ಧಿ ಮಾಡ್ತಿಲ್ಲ, ಅವರ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ ಎಂಬಕುಮಾರಸ್ವಾಮಿ ಆರೋಪ ಕುರಿತುಪ್ರ ತಿಕ್ರಿಯಿಸಿದ ಬಾಲಕೃಷ್ಣ ಈ ಕುರಿತು ಸಿಬಿಐ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.

#Bidaditownship #Row #HDKumaraswamy #HC Balakrishna #ಬಿಡದಿಟೌನ್ ಶಿಪ್ #ವಿವಾದ#ಹೆಚ್ ಡಿಕುಮಾರಸ್ವಾಮಿ #ಹೆಚ್ ಸಿಬಾಲಕೃಷ್ಣ


Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link