ಕನಕಪುರ ತಾಲೂಕಿನ ಮುತ್ತತ್ತಿ ಬಳಿ ಭೀಕರ ದುರ್ಘಟನೆ ನಡೆದಿದೆ. ಕಾವೇರಿ ನದಿಯಲ್ಲಿ ಈಜಲು ಹೋಗಿ ಐವರು ಮೃತಪಟ್ಟಿದ್ದಾರೆ. ಮೃತಪಟ್ಟವರು ಬೆಂಗಳೂರು: ಕನಕಪುರ ತಾಲೂಕಿನ ಮುತ್ತತ್ತಿ ಬಳಿ ಭೀಕರ ದುರ್ಘಟನೆ ನಡೆದಿದೆ. ಕಾವೇರಿ ನದಿಯಲ್ಲಿ ಈಜಲು ಹೋಗಿ ಐವರು ಮೃತಪಟ್ಟಿದ್ದಾರೆ. ಮೃತರನ್ನು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಜೆ.ಬ್ಯಾಡರಹಳ್ಳಿ ಗ್ರಾಮದ ಶ್ವೇತಾ (38) ಚೈತ್ರಾ (20) ಆಣಿಗೆರೆ ಗ್ರಾಮದ ಪ್ರಿಯಾಂಕ (28), ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕದಲೂರು ಗ್ರಾಮದ ವಿಜಯಮ್ಮ (52) ಬೆಂಗಳೂರು ಶ್ಯಾಮಣ್ಣನಗರ ಮೂಲದ ಕಾರು ಚಾಲಕ ಮಹೇಶ್ (38) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಬುಧವಾರ ಬೆಳಿಗ್ಗೆ ಬಾಡಿಗೆ ಕಾರಿನಲ್ಲಿ ಕನಕಪುರ ತಾಲೂಕಿ ಕಬ್ಬಾಳು ಗ್ರಾಮದಲ್ಲಿ ಸಂಬಂಧಿಕರ ಬೀಗರ ಊಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಊಟ ಮುಗಿಸಿ ವಾಪಸ್ ಬರುವಾಗ ಮುತ್ತತ್ತಿಯ ಅಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲು ಬಂದಿದ್ದರು.ಮುತ್ತತ್ತಿಯಲ್ಲಿ ನೀರಿನಲ್ಲಿ ಈಜುತ್ತಾ ಆಡುವ ವೇಳೆ ಈ ದುರ್ಘಟನೆ ನಡೆದಿದೆ. ಒಬ್ಬರನ್ನ ಒಬ್ಬರು ರಕ್ಷಿಸಲು ಹೋಗಿ ಈ ದುರಂತ ಸಂಭವಿಸಿದೆ. ಸಾವು ಘಟನೆ ನಡೆಯುವ ಕೆಲವೇ ನಿಮಿಷಗಳ ಮೊದಲು ಶ್ವೇತಾ, ಪ್ರಿಯಾಂಕ, ಚೈತ್ರಾ ಹಾಗೂ ವಿಜಿಯಮ್ಮ ಅವರು ಕಾವೇರಿ ನದಿಯಲ್ಲಿ ಈಜಾಡಿದ್ದಾರೆ. ಅವರು ನದಿಯಲ್ಲಿ ಈಜುತ್ತಾ ಮೋಜು ಮಸ್ತಿ ಮಾಡ್ತಿರೋದು ಮೊಬೈಲ್ ನಲ್ಲಿ ಸೆರೆಯಾಗಿದೆ. ದುರಾದೃಷ್ಟ ವಶಾತ್ ಇದಾಗ ಕೆಲವೇ ನಿಮಿಷಗಲ್ಲಿ ಐದು ಜನರು ಸಾವಿಗೀಡಾಗಿದ್ದಾರೆ. #Karnataka #Cauvery river #Five people drown #ಕರ್ನಾಟಕ#ಕಾವೇರಿ ನದಿ#ಐವರು ಸಾವು Share via: Facebook X (Twitter) LinkedIn More Post navigation ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ಭಾಮೈದನ ಮನೆ ಮೇಲೆ ED ದಾಳಿ! Bidadi township: ಮತ್ತೆ ಪೋಸ್ಟರ್ ವಾರ್! ಡಿ.ಕೆ ಶಿವಕುಮಾರ್, HDK ಈ ರಾಜ್ಯದ ಪಾಳೆಗಾರರಾ..? ವಾಟಾಳ್ ನಾಗರಾಜ್ ಕಿಡಿ