ವಾಟಾಳ್ ನಾಗರಾಜ್


ಹಲಗೆವಡರಹಳ್ಳಿ ಮತ್ತು ಕೇತಗಾನಹಳ್ಳಿ ಭೂ ಹಗರಣದಲ್ಲಿ ಭಾಗಿ ಆರೋಪ ಹಿನ್ನೆಲೆಯಲ್ಲಿ ಈ ಪೋಸ್ಟರ್ ಅಂಟಿಸಲಾಗಿದ್ದು,  ಜೈಲಿಗೆ ಹೋಗಲು ಸಿದ್ದರಾಗಿ ಎಂದು ಪೋಸ್ಟರ್ ನಲ್ಲಿ ಹೇಳಲಾಗಿದೆ.

ರಾಮನಗರ: ಬಿಡದಿ ಟೌನ್ ಶಿಪ್ ನಿರ್ಮಾಣ ವಿಚಾರದಲ್ಲಿ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ವಾರ್ ಶುರುವಾಗಿದೆ. 

ಬಿಡದಿ ಬೈರಮಂಗಲ ಸುತ್ತಮುತ್ತ ಮತ್ತೆ ಪೋಸ್ಟರ್ ಗಳು ಕಾಣಿಸಿಕೊಂಡಿವೆ.  ಡಿಕೆ ಎಚ್ಡಿಕೆ ಸವಾಲು ಪ್ರತಿ ಸವಾಲು, ಕಾರ್ಯಕರ್ತರಿಂದ ಪೋಸ್ಟರ್ ವಾರ್ ನಡೆಯುತ್ತಿದೆ. ಕುಮಾರಸ್ವಾಮಿ,  ನಿಖಿಲ್ ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ಹಾಕಲಾಗಿದೆ. 

ಹಲಗೆವಡರಹಳ್ಳಿ ಮತ್ತು ಕೇತಗಾನಹಳ್ಳಿ ಭೂ ಹಗರಣದಲ್ಲಿ ಭಾಗಿ ಆರೋಪ ಹಿನ್ನೆಲೆಯಲ್ಲಿ ಈ ಪೋಸ್ಟರ್ ಅಂಟಿಸಲಾಗಿದ್ದು,  ಜೈಲಿಗೆ ಹೋಗಲು ಸಿದ್ದರಾಗಿ ಎಂದು ಪೋಸ್ಟರ್ ನಲ್ಲಿ ಹೇಳಲಾಗಿದೆ.   ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿರುವ ಆರೋಪ ಕೇಳಿಬಂದಿದೆ. 

ಜೈಲಿಗೆ ಹೋಗುವ ಬಗ್ಗೆ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ, ಅದೇ ಹೇಳಿಕೆ ಆಧರಿಸಿ‌ ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ಅಂಟಿಸಲಾಗುತ್ತಿದೆ. 

ಈ ಮಧ್ಯೆ ಬಿಡದಿ ಟೌನ್ ಶಿಪ್ ವಿಚಾರದಲ್ಲಿ  ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಕಿಡಿಕಾರಿದ್ದಾರೆ. ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ವಿಚಾರ ಇಡೀ ದೇಶದಲ್ಲಿ ದೊಡ್ಡ ಸುದ್ದಿಯಾಗಿದೆ ಬಿಡದಿ ಉಪನಗರ ಮಾಡಿ ಎಂದು ರಾಮನಗರ ಜನ ಅಥವಾ ರೈತರು ಕೇಳಿದ್ರಾ..? ಎಂದು ಪ್ರಶ್ನಿಸಿದರು.

ಉಪನಗರ ನಿರ್ಮಾಣ ಮಾಡಿದ್ರೆ ಯಾರಿಗೂ ಉಪಕಾರ ಮಾಡೋದಿಲ್ಲ ಈ ವಿಚಾರವನ್ನ ನೀವಿಬ್ಬರು ಆತ್ಮಶುದ್ದಿ ಮಾಡಿಕೊಳ್ಳಬೇಕಿದೆ

ಕುಮಾರಸ್ವಾಮಿ ಕಾಲದಲ್ಲಿ ಮಾಡಿದ್ರೆ ನೀವ್ಯಾಕೆ ಮುಂದುವರೆಸಬೇಕಿತ್ತು..? ಕರ್ನಾಟಕದ ಕೋಲಾರದಿಂದ ಹಿಡಿದು ಬೆಳಗಾವಿವರೆಗೆ ಕೇಳೋರೆ ದಿಕ್ಕಿಲ್ಲ.ಈ ಬಿಡದಿಯಲ್ಲಿ ಮಾತ್ರ ರೈತರ ಜಮೀನು ಹಿಟ್ಟುಕೊಂಡು ಏನ್‌ ನಾಟಕ ಮಾಡ್ತಿದ್ದೀರಿ..? ಎಂದು ವಾಗ್ದಾಳಿ ನಡೆಸಿದ್ದಾರೆ.

ಜಮೀನು ಎಲ್ಲೆಲ್ಲಿ ಖರೀದಿ ಮಾಡಿದ್ರಿ ಇಷ್ಟು ಬೇಗ ಎಲ್ಲೂ ದುಡ್ಡು ಕೊಟ್ಟಿಲ್ಲ ರೈತರಿಗೆ ಪರಿಹಾರದ ಹಣ ಕೊಡೋ ನಿರ್ಧಾರ ಎಲ್ಲಿ ಕೂತು ಮಾಡಿದ್ದೀರಿ..? ಡಿ.ಕೆ ಶಿವಕುಮಾರ್‌, ಕುಮಾರಸ್ವಾಮಿ ಈ ರಾಜ್ಯದ ಪಾಳೆಗಾರರಾ..? ಎಂದು ಟೀಕಾ ಪ್ರಹಾರ ನಡೆಸಿದರು.

#Bidaditownship #HDkumaraswasmy #posterwar #congress#ಬಿಡದಿಟೌನ್ ಶಿಪ್ ವಿವಾದ#ಹೆಚ್ ಡಿ ಕುಮಾರಸ್ವಾಮಿ #ಪೋಸ್ಟರ್ ವಾರ್ #ಕಾಂಗ್ರೆಸ್

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link