ಪ್ರಜ್ವಲ್ ದೇವರಾಜ್, ಮೇಘನಾರಾಜ್ ಸಾಂದರ್ಭಿಕ ಚಿತ್ರ

ಪ್ರಜ್ವಲ್ ದೇವರಾಜ್ ನನ್ನ ಬಾಲ್ಯದ ಗೆಳೆಯ. ಆತನನ್ನು ನಾಲ್ಕೈದು ವರ್ಷದವಳಾಗಿದ್ದಾಗಿನಿಂದಲೇ ನೋಡುತ್ತಾ ಬಂದಿದ್ದೇನೆ. ಅವರು ಸಭ್ಯ ವ್ಯಕ್ತಿ. ಯಾವುದೇ ವಿವಾದಕ್ಕೆ ಅವರು ತಲೆ ಹಾಕಿದ್ದಿಲ್ಲ. ಅನಗತ್ಯವಾಗಿ ಕಿರಿಕ್ ಮಾಡಿಲ್ಲ. ಪ್ರತಿಬಾರಿ ಯಾರಿಗಾದರೂ ಅವರಿಂದ ಸಹಾಯ ಆಗಬೇಕಿದ್ದರೆ ಅವರು ಮುಂದೆ ಬರುವ ವ್ಯಕ್ತಿ ಎಂದಿದ್ದಾರೆ.

ನಟಿ ಮೇಘನಾ ರಾಜ್ ಅವರು ಪ್ರಜ್ವಲ್ ದೇವರಾಜ್ ಬೆಂಬಲಕ್ಕೆ ನಿಂತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಮಾತನಾಡಿದ್ದಾರೆ.

ಪ್ರಜ್ವಲ್ ದೇವರಾಜ್ ನನ್ನ ಬಾಲ್ಯದ ಗೆಳೆಯ. ಆತನನ್ನು ನಾಲ್ಕೈದು ವರ್ಷದವಳಾಗಿದ್ದಾಗಿನಿಂದಲೇ ನೋಡುತ್ತಾ ಬಂದಿದ್ದೇನೆ. ಅವರು ಸಭ್ಯ ವ್ಯಕ್ತಿ. ಯಾವುದೇ ವಿವಾದಕ್ಕೆ ಅವರು ತಲೆ ಹಾಕಿದ್ದಿಲ್ಲ. ಅನಗತ್ಯವಾಗಿ ಕಿರಿಕ್ ಮಾಡಿಲ್ಲ. ಪ್ರತಿಬಾರಿ ಯಾರಿಗಾದರೂ ಅವರಿಂದ ಸಹಾಯ ಆಗಬೇಕಿದ್ದರೆ ಅವರು ಮುಂದೆ ಬರುವ ವ್ಯಕ್ತಿ ಎಂದಿದ್ದಾರೆ.

ಪ್ರಜ್ವಲ್ ದೇವರಾಜ್ ವೈಯಕ್ತಿಕವಾಗಿ ಮಾತ್ರವಲ್ಲ, ವೃತ್ತಿಪರವಾಗಿ ಕೂಡಾ ಬಹಳ ಚೆನ್ನಾಗಿ ಗೊತ್ತಿದೆ. ಅವರ ಜೊತೆಗೆ ಎರಡು ಸಿನಿಮಾ ಮಾಡಿದ್ದೇನೆ. ಆ ಎರಡು ಸಿನಿಮಾದಲ್ಲೂ ಅವರ ಬದ್ಧತೆ, ಶಿಸ್ತನ್ನು ನೋಡಿದ್ದೇನೆ. ಪ್ರತಿಬಾರಿ ಅವರು ಮಾತನಾಡಬೇಕಾದರೆ ಪ್ರೀತಿಯಿಂದ, ವೃತ್ತಿಪರವಾಗಿ ಮಾತನಾಡಿದ್ದಾರೆ. ಅವರು ಸಿನಿ ಕುಟುಂಬದಿಂದ ಬಂದವರು. ಸಿನಿಮಾ ರಂಗದ ಎಲ್ಲ ಕಷ್ಟಗಳನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ಅವರು ಕೂಡಾ ಒಬ್ಬ ನಿರ್ಮಾಪಕರು. ಅಂತಹ ವ್ಯಕ್ತಿ ಬಗ್ಗೆ ಕೆಲವು ಮಾತುಗಳು ಕೇಳಿದಾಗ ಬಹಳ ಬೇಸರ ಆಗುತ್ತದೆ ಎಂದು ಮೇಘನಾ ರಾಜ್ ಹೇಳಿದ್ದಾರೆ.

#Sandalwood #Karavali movie controversy #Prajwal Devaraj #MeghanaRaj #ಸ್ಯಾಂಡಲ್ ವುಡ್ #ಕರಾವಳಿಸಿನಿಮಾವಿವಾದ#ಪ್ರಜ್ವಲ್ ದೇವರಾಜ್ #ಮೇಘನಾರಾಜ್

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link