ಕಾವೇರಿ ಪ್ರತಿಭಟನೆ


ಮುಖ್ಯಮಂತ್ರಿ ವಿಜಯ್ ನಡೆ ಖಂಡಿಸಿ, ಅವರ ನಟನೆಯ ಜನನಾಯಗನ್ ಚಲನಚಿತ್ರ ಪ್ರದರ್ಶನಗೊಳ್ಳುತ್ತಿರುವ ಮಂಡ್ಯ ನಗರದ ಗುರುಶ್ರೀ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಚಿತ್ರದ ಪೋಸ್ಟರ್ ಹರಿದು ಸಿನಿಮಾ ಸ್ಥಗಿತಕ್ಕೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನವು ಸ್ಥಗಿತಗೊಳಿಸಲಾಗಿದೆ.

ಮಂಡ್ಯ: ತಮಿಳುನಾಡಿಗೆ ನಿತ್ಯ 3500 ಕ್ಯೂಸೆಕ್ ನೀರನ್ನು 15 ದಿನಗಳ ಕಾಲ ಬಿಡಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶದ ವಿರುದ್ಧ ಗುರುವಾರವೂ ಮಂಡ್ಯದಲ್ಲಿ ಬೃಹತ್ ಪ್ರತಿಭಟನೆಗಳು ಮುಂದುವರೆದಿದೆ.

ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಕರುನಾಡ ವಿಜಯಸೇನೆ ಸಂಘಟನೆಯ ನೂರಾರು ಮಂದಿ ಕಾರ್ಯಕರ್ತರು ಸಮಿತಿಯ ವಿರುದ್ಧ ಘೋಷಣೆ ಕೂಗಿ, ಸಮಿತಿಯು ತಮಿಳುನಾಡಿನ ಕೈಗೊಂಬೆಯಂತೆ ವರ್ತಿಸಬಾರದು ಜೊತೆಗೆ ರಾಜ್ಯ ಸರ್ಕಾರ ರೈತರಿಗೆ ವಂಚಿಸಿ ಯಾವುದೇ ಕಾರಣಕ್ಕೂ ನೀರುಬಿಡಬಾರದೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮೇಕೆದಾಟು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ಯೋಜನೆಗೆ ಅನುಮತಿ ಕೊಡಬಾರದೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ವಿಜಯ್ ನಡೆ ಖಂಡಿಸಿ, ಅವರ ನಟನೆಯ ಜನನಾಯಗನ್ ಚಲನಚಿತ್ರ ಪ್ರದರ್ಶನಗೊಳ್ಳುತ್ತಿರುವ ಮಂಡ್ಯ ನಗರದ ಗುರುಶ್ರೀ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಚಿತ್ರದ ಪೋಸ್ಟರ್ ಹರಿದು ಸಿನಿಮಾ ಸ್ಥಗಿತಕ್ಕೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನವು ಸ್ಥಗಿತಗೊಳಿಸಲಾಗಿದೆ.

ಇದಲ್ಲದೇ ಜಿಲ್ಲೆಯ ಮದ್ದೂರಿನಲ್ಲಿ ತಾಲ್ಲೂಕು ರೈತ ಸಂಘ ಮತ್ತು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರೆ, ಶ್ರೀರಂಗಪಟ್ಟಣದಲ್ಲಿ ರೈತ ಸಂಘಟನೆಯ ಹಲವು ಬಣಗಳು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಂದೆಡೆ ಪಾಂಡವಪುರ ತಾಲ್ಲೂಕಿನಲ್ಲಿ ಬೀದರ್- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ತಡೆದು ನೀರು ಬಿಡುವಂತೆ ಸೂಚಿಸಿರುವ ಸಮಿತಿ ವಿರುದ್ಧ ಘೋಷಣೆ ಕೂಗಿದರು.

#MandyaProtest #CauveryWaterDispute #TamilNaduCM Vijay’s JanaNayaganMovie #ಮಂಡ್ಯ#ಕಾವೇರಿನದಿವಿವಾದ#ತಮಿಳುನಾಡುಸಿಎಂವಿಜಯ್ ಅಭಿನಯದ ಸಿನಿಮಾ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link