ಮೀರಾಬಾನು ಚಾನು


ಮೀರಾಬಾಯಿ ಚಾನು ಒಟ್ಟು 198 ಕೆ.ಜಿ. ಭಾರ ಎತ್ತಿದರು. ಸ್ನ್ಯಾಚ್‌ನಲ್ಲಿ 88 ಕೆ.ಜಿ. ಹಾಗೂ ಕ್ಲೀನ್‌ ಆ್ಯಂಡ್‌ ಜರ್ಕ್‌ನಲ್ಲಿ 111 ಕೆ.ಜಿ. ಭಾರ ಎತ್ತಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ನಾಗೋಯಾ: ಭಾರತದ ಪ್ರಮುಖ ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ಬುಧವಾರ ನಡೆದ ಏಷ್ಯನ್ ಗೇಮ್ಸ್‌ನ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ, ಭಾರತದ ತಾರೆ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರು ಬುಧವಾರ (ಸೆ.23) ಬೆಳ್ಳಿ ಪದಕ ಗೆದ್ದಿದ್ದಾರೆ.

ಮೀರಾಬಾಯಿ ಚಾನು ಒಟ್ಟು 198 ಕೆ.ಜಿ. ಭಾರ ಎತ್ತಿದರು. ಸ್ನ್ಯಾಚ್‌ನಲ್ಲಿ 88 ಕೆ.ಜಿ. ಹಾಗೂ ಕ್ಲೀನ್‌ ಆ್ಯಂಡ್‌ ಜರ್ಕ್‌ನಲ್ಲಿ 111 ಕೆ.ಜಿ. ಭಾರ ಎತ್ತಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಇದರೊಂದಿಗೆ 1998ರಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದ ಬಳಿಕ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಲಭಿಸಿದ ಮೊದಲ ಪದಕ ಇದಾಗಿದೆ.

ಉತ್ತರ ಕೊರಿಯಾದ ಎರಡು ಬಾರಿಯ ವಿಶ್ವ ಚಾಂಪಿಯನ್ ರಿ ಸಾಂಗ್ ಗುಮ್, ಒಟ್ಟು 215 ಕೆಜಿ (94 ಕೆಜಿ + 121 ಕೆಜಿ) ಭಾರ ಎತ್ತುವ ಮೂಲಕ ನಿರೀಕ್ಷೆಯಂತೆಯೇ ದಾಖಲೆಯ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದರು ಮತ್ತು ಏಷ್ಯನ್ ಗೇಮ್ಸ್ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧನೆ ಮಾಡಿದರು.

#AsianGames2026 #MirabaiChanu #wins silver #ಏಷ್ಯನ್ ಗೇಮ್ಸ್ 2026 #ಮೀರಾಬಾನುಚಾನು#ಬೆಳ್ಳಿಪದಕ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link