ವಿರಾಟ್ ಕೊಹ್ಲಿ


ವಿಶ್ವಕಪ್ ಗೆಲ್ಲುವುದೇ ಅಂತಿಮ ಗುರಿ ಮತ್ತು ಅದಕ್ಕಾಗಿ ಏನೇ ಮಾಡಬೇಕಾದರೂ ಮಾಡಲು ಸಿದ್ಧನಿದ್ದೇನೆ.  2027ರ ಏಕದಿನ ವಿಶ್ವಕಪ್ ನನ್ನ ಕೊನೆಯ ಏಕದಿನವಾಗಲಿದೆ ಎಂದು ವಿರಾಟ್ ಕೊಹ್ಲಿ ಅವರು ಜಿಯೋಸ್ಟಾರ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮುಂಬೈ: ಈಗಾಗಲೇ ಟೆಸ್ಟ್ ಹಾಗೂ ಟಿ20 ಮಾದರಿಯಿಂದ ನಿವೃತ್ತಿಯಾಗಿರುವ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಶನಿವಾರ ಅಭಿಮಾನಿಗಳಿಗೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ. 

ಹೌದು, ಮುಂದಿನ ವರ್ಷ ಏಕದಿನ ಕ್ರಿಕೆಟ್ ನಿಂದಲೂ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.

ಮುಂದಿನ ವರ್ಷ ನಡೆಯಲಿರುವ 50 ಓವರ್‌ಗಳ ವಿಶ್ವಕಪ್ ನಲ್ಲಿ ಭಾರತದ ಪರವಾಗಿ ನಾನು ಆಡಲಿರುವ ಕೊನೆಯ ವಿಶ್ವಕಪ್ ಆಗಿರಲಿದೆ ಮತ್ತು ಆ ವಿಶ್ವಕಪ್ ಗೆಲ್ಲಲು ಸರ್ವಶಕ್ತಿಯನ್ನು ಹಾಕಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ವಿಶ್ವಕಪ್ ಗೆಲ್ಲುವುದೇ ಅಂತಿಮ ಗುರಿ ಮತ್ತು ಅದಕ್ಕಾಗಿ ಏನೇ ಮಾಡಬೇಕಾದರೂ ಮಾಡಲು ಸಿದ್ಧನಿದ್ದೇನೆ.  2027ರ ಏಕದಿನ ವಿಶ್ವಕಪ್ ನನ್ನ ಕೊನೆಯ ಏಕದಿನವಾಗಲಿದೆ ಎಂದು ವಿರಾಟ್ ಕೊಹ್ಲಿ ಅವರು ಜಿಯೋಸ್ಟಾರ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಏಕದಿನ ಪಂದ್ಯಗಳಲ್ಲಿ (ODI) 54 ಶತಕಗಳೊಂದಿಗೆ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರನಾಗಿರುವ ವಿರಾಟ್ ಕೊಹ್ಲಿ, ಈಗಾಗಲೇ ಟಿ20 ಅಂತಾರಾಷ್ಟ್ರೀಯ ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದು, ಪ್ರಸ್ತುತ ಭಾರತದ ಪರವಾಗಿ ಕೇವಲ 50 ಓವರ್‌ಗಳ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ.

ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 14,941 ರನ್ ಗಳಿಸಿರುವ(ಸಚಿನ್ ತೆಂಡೂಲ್ಕರ್ ಅವರ 18,426 ರನ್‌ಗಳ ನಂತರ ಎರಡನೇ ಸ್ಥಾನದಲ್ಲಿದ್ದಾರೆ) 37 ವರ್ಷದ ವಿರಾಟ್ ಕೊಹ್ಲಿ, 2011ರಲ್ಲಿ ತವರಿನಲ್ಲಿ ನಡೆದ ವಿಶ್ವಕಪ್ ಗೆದ್ದಿದ್ದರು; ಆದರೆ 2023ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಅನುಭವಿಸಿದ್ದರು.

ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ 2027ರ ವಿಶ್ವಕಪ್ ವಿರಾಟ್ ಕೊಹ್ಲಿ ಅವರ ಐದನೇ ಏಕದಿನ ವಿಶ್ವಕಪ್ ಆಗಿರಲಿದೆ.

#Teamindia #2027 World Cup #Virat Kohli #retire #ಟೀಂ ಇಂಡಿಯಾ#2027ವಿಶ್ವಕಪ್ #ವಿರಾಟ್ ಕೊಹ್ಲಿ#ನಿವೃತ್ತಿ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link