ಕುರುಬರಹಳ್ಳಿಯ ಸರ್ವೇ ನಂಬರ್ 1 ರಲ್ಲಿರುವ 36 ಎಕರೆ ಸರ್ಕಾರಿ ಜಮೀನನ್ನೇ ಬೋಗಸ್ ದಾಖಲೆಗಳನ್ನು ಸೃಷ್ಟಿಸಿ, ತಮ್ಮ ಪತ್ನಿಯ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು. ಬೆಂಗಳೂರು: ಸಚಿವ ಹೆಚ್.ಸಿ. ಬಾಲಕೃಷ್ಣ ಸರ್ಕಾರಿ ಜಮೀನನ್ನು ಅಕ್ರಮವಾಗಿ ಪತ್ನಿ ಹೆಸರಿನಲ್ಲಿ ನೋಂದಾಯಿಸಿ ಭೂಗಳ್ಳತನ ಮಾಡಿದ್ದಾರೆ ಎಂದು ಮಾಜಿ ಶಾಸಕ ಎ. ಮಂಜುನಾಥ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬರಹಳ್ಳಿಯ ಸರ್ವೇ ನಂಬರ್ 1 ರಲ್ಲಿರುವ 36 ಎಕರೆ ಸರ್ಕಾರಿ ಜಮೀನನ್ನೇ ಬೋಗಸ್ ದಾಖಲೆಗಳನ್ನು ಸೃಷ್ಟಿಸಿ, ತಮ್ಮ ಪತ್ನಿಯ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು. ಯಾವನೋ ಬೇನಾಮಿ ಹೆಸರಲ್ಲಿ ಉಳುವೆ ಚೀಟಿ ಸೃಷ್ಟಿಸಿ, ೧೦ ಎಕರೆಯನ್ನು ತಮ್ಮ ಪತ್ನಿ ರಾಧಾ ಬಾಲಕೃಷ್ಣ ಅವರ ಹೆಸರಿಗೆ ಪರಭಾರೆ ಮಾಡಿಕೊಂಡಿದ್ದಾರೆ ಎಂದು ದೂರಿದರು. 26 ಎಕರೆ ಅವರ ಜೊತೆ ಇರೋ ವ್ಯಕ್ತಿ ನಟರಾಜ ನಾಯ್ಡು ಅನ್ನೋರ ಹೆಸರಿಗೆ ಮಾಡಿಸಿದ್ದಾರೆ. ಇದು ಸರ್ಕಾರಿ ಜಮೀನು. ದಾಖಲಾತಿ ಸೃಷ್ಟಿ ಮಾಡಿದ್ದಾರೆ. ಉಳುಮೆ ಚೀಟಿಯಿಂದ ಎಲ್ಲಾ ದಾಖಲಾತಿ ಸೃಷ್ಟಿ ಮಾಡಿದ್ದಾರೆ. ಸಚಿವ ಹೆಚ್.ಸಿ. ಬಾಲಕೃಷ್ಣ ಅವರ ಅಕ್ರಮದ ಮತ್ತೊಂದು ಮುಖಾಮುಖಿ ಇಲ್ಲಿದೆ! ಕುರುಬರಹಳ್ಳಿಯ ಸರ್ವೇ ನಂಬರ್ 1 ರಲ್ಲಿರುವ 36 ಎಕರೆ ಸರ್ಕಾರಿ ಜಮೀನನ್ನೇ ಬೋಗಸ್ ದಾಖಲೆಗಳನ್ನು ಸೃಷ್ಟಿಸಿ, ತಮ್ಮ ಪತ್ನಿಯ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ. ಯಾವನೋ ಬೇನಾಮಿ ಹೆಸರಲ್ಲಿ ಉಳುವೆ ಚೀಟಿ ಸೃಷ್ಟಿಸಿ, ೧೦ ಎಕರೆಯನ್ನು ತಮ್ಮ ಪತ್ನಿ ರಾಧಾ ಬಾಲಕೃಷ್ಣ ಅವರ… pic.twitter.com/yXi5M1mote— Janata Dal Secular (@JanataDal_S) October 2, 2026 50-60 ವರ್ಷಗಳಿಂದ ಉಳುಮೆ ಮಾಡುತ್ತಿರುವವರನ್ನು ಬೆದರಿಸಿ ಅವರನ್ನ ಹೊರಗೆ ಹಾಕಿದ್ದಾರೆ. ಸಿಎಂ ಪಾರದರ್ಶಕವಾಗಿ ಇದ್ದರೆ ಕೂಡಲೇ ಈ ಜಮೀನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹ ಮಾಡಿದರು. ಐಎಎಸ್ ಅಧಿಕಾರಿ ಜೊತೆ ಸೇರಿಕೊಂಡು, ಅಧಿಕಾರಿಗಳನ್ನು ಸೇರಿಸಿಕೊಂಡು ಈ ಅಕ್ರಮ ಮಾಡಿದ್ದಾರೆ. ರಾಜ್ಯಪಾಲರಿಗೆ ಸಮಯ ಕೇಳಿದ್ದೇವೆ. ಅವರು ಸಮಯ ಕೊಟ್ಟ ಮೇಲೆ ಬಾಲಕೃಷ್ಣ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳುತ್ತೇವೆ ಎಂದು ತಿಳಿಸಿದರು. ಕುಮಾರಸ್ವಾಮಿಗೆ ಗೆಣಸು ಕೆತ್ತುತ್ತಿದ್ಯಾ ಎಂದು ಕೇಳಿದ್ದೀಯಲ್ಲಾ ನೀನು ಬೋಗಸ್ ದಾಖಲೆ ಕೆತ್ತುತ್ತಿದ್ದಾ? ನೀನು ಇಂತ ಹಲ್ಕಾ ಕೆಲಸ ಮಾಡ್ತೀಯಾ ಅಂತಾ ಕುಮಾರಸ್ವಾಮಿ ನಿನ್ನನ್ನ ದೂರ ಇಟ್ಟರು ಎಂದು ವಾಗ್ದಾಳಿ ನಡೆಸಿದ್ದಾರೆ. #Minister H.C. Balakrishna #illegality #Grabbed 36 acres of land #a Manjunath #ಸಚಿವಹೆಚ್ ಸಿ ಬಾಲಕೃಷ್ಣ #iಅಕ್ರಮ #36 ಎಕರೆಭೂಮಿವಶ#ಎಮಂಜುನಾಥ Share via: Facebook X (Twitter) LinkedIn More Post navigation ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ: ಪರಿಶೀಲನೆಗೆ ಕೇಂದ್ರದ 3 ತಂಡ: ಜಿ. ಪರಮೇಶ್ವರ್! ನೈಸ್ ಅಕ್ರಮಗಳ ಬಗ್ಗೆ ಹೈಕೋರ್ಟ್ ಆದೇಶ ನೀಡಿದ್ದರೂ ಕಾಂಗ್ರೆಸ್ ಸರ್ಕಾರ ಕ್ರಮಕೈಗೊಳ್ಳದೆ ಯಾಕೆ ಸುಮ್ಮನಿದೆ ?ನಿಖಿಲ್ ಕುಮಾರಸ್ವಾಮಿ ಪ್ರಶ್ನೆ!