ಬಿಡದಿ ರೈತರ ಹೋರಾಟ



ಯೋಜನೆ ವಿರೋಧಿಸಿ ಕಳೆದ 500 ದಿನಗಳಿಂದ ಹೋರಾಟ ನಡೆಸುತ್ತಿರುವ ರೈತರು ತಾಳ್ಮೆ ಕಳೆದುಕೊಂಡಿದ್ದು, ಜೀವ ಕೊಟ್ಟೇವು ಆದ್ರೆ ಭೂಮಿ ಕೊಡಲ್ಲ ಎಂಬ ಹಠಕ್ಕೆ ಬಿದ್ದಿದ್ದಾರೆ. ಇದಕ್ಕೆ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಈ ಉಗ್ರ ಪ್ರತಿಭಟನೆಯೇ ಸಾಕ್ಷಿ.

ರಾಮನಗರ: ಬಿಡದಿ ಟೌನ್ ಶಿಪ್ ಜಟಾಪಟಿ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ.ಯೋಜನೆವಿರೋಧಿಸಿಕಳೆದ500 ದಿನಗಳಿಂದ ಹೋರಾಟ ನಡೆಸುತ್ತಿರುವ ರೈತರು ತಾಳ್ಮೆ ಕಳೆದುಕೊಂಡಿದ್ದು, ಜೀವ ಕೊಟ್ಟೇವು ಆದ್ರೆ ಭೂಮಿ ಕೊಡಲ್ಲ ಎಂಬ ಹಠಕ್ಕೆ ಬಿದ್ದಿದ್ದಾರೆ. ಇದಕ್ಕೆ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಈ ಉಗ್ರ ಪ್ರತಿಭಟನೆಯೇ ಸಾಕ್ಷಿ.

ಸರ್ವೇಮಾಡಲುಬಂದಿದ್ದಅಧಿಕಾರಿಗಳನ್ನಅಟ್ಟಾಡಿಸಿದ್ರು.ಪೊರಕೆ ಏಟುತಿಂದಅಧಿಕಾರಿಗಳುಬಿದ್ದಂಬೀಳಅಲ್ಲಿಂದಓಟಕಿತ್ತಿದ್ದಾರೆ. ಇದಕ್ಕೂಸುಮ್ಮನಿರದಮಹಿಳೆಯರುಬೈರಮಂಗಲದಲ್ಲಿಪೊರಕೆ, ವಿಷದಬಾಟಲಿಹಿಡಿದುಪ್ರತಿಭಟನೆನಡೆಸಿದ್ದು, ಮಾಗಡಿಶಾಸಕಹೆಚ್.ಸಿ. ಬಾಲಕೃಷ್ಣವಿರುದ್ಧಆಕ್ರೋಶವ್ಯಕ್ತಪಡಿಸಿದ್ದಾರೆ.

ಇಷ್ಟಕ್ಕೇಮುಗಿಯದ ಈ ಬಿಡದಿ ಬಡಿದಾಟ ಮದುವರೆದಿದ್ದು ಗಲಾಟೆ ಮಾಡಿದ ರೈತರ ಮೇಲೆ ಎಫ್ಐಆರ್ ದಾಖಲಿಸಿ ಸರ್ಕಾರ ಇನ್ನಷ್ಟು ಗೋಜಲಿಗೆ ಸಿಕ್ಕಂತಾಗಿದೆ. ಬಿಡದಿ ಠಾಣೆಯಲ್ಲಿ 11 ರೈತ ಮುಖಂಡರು ಹಾಗೂ ಇತರರ ವಿರುದ್ಧ ಎಫ್ ಐಆರ್ ದಾಖಲು ಮಾಡಿದ್ದಕ್ಕಾಗಿ ರೈತರು ಕೆರಳಿ ಕೆಂಡವಾಗಿದ್ದಾರೆ. ಅದರಂತೆ ಜೆಡಿಎಸ್ ನಿಯೋಗ ಸಹ ಕಾನೂನು ಅಡಿಯಲ್ಲಿ ರೈತರಿಗೆ ರಕ್ಷಣೆ ನೀಡಲು ಮುಂದಾಗಿದೆ.

ಇವೆಲ್ಲಾದರಮಧ್ಯೆಒತ್ತಡದಲ್ಲಿಸಿಲುಕಿರುವಜಿಲ್ಲಾಡಳಿತ, ಕಾನೂನುಸುವ್ಯವಸ್ಥೆಗೆಯಾವುದೇಧಕ್ಕೆಯಾಗದಂತೆಕ್ರಮವಹಿಸುತ್ತಿದೆ. ಯಾವುದೇ ಕಾರಣಕ್ಕೆ ಶಾಂತಿಗೆ ಭಂಗ ತರಬಾರದು,ಕಾನೂನು ಸುವ್ಯವಸ್ಥೆಹದಗೆಡಬಾರದು ಎಂದು ಎಸ್ಪಿಶ್ರೀನಿವಾಸ್ ಗೌಡ ರೈತರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಮಧ್ಯೆ ಮಾತನಾಡಿದ ಶಾಸಕ ಹೆಚ್ ಸಿ ಬಾಲಕೃಷ್ಣ ಮಾತನಾಡಿ, ಕುಮಾರಸ್ವಾಮಿ ಅವರ ಕೃಪಾಪೋಷಿತ ನಾಟಕಮಂಡಳಿಯವರೇ ಈ ಎಲ್ಲಾ ಘಟನೆಗೆ ಕಾರಣ. ದೇವೇಗೌಡರು ಅವತ್ತೇ ಈಯೋಜನೆ ನಿಲ್ಲಿಸಿ ಅಂತ ನಾನುರೈತರ ಪರವಾಗಿದ್ದೇನೆ ಎಂದು ಬುದ್ದಿಹೇಳಬೇಕಿತ್ತು. ನಾವುಹೇಳುದ್ರೆಕುಮಾರಸ್ವಾಮಿಏನೋ ಮಾಡ್ತಾನೆಬಿಡಿಅಂತಹೇಳಿಈಗಡಿ.ಕೆಶಿವಕುಮಾರ್ಮೇಲೆಗೂಬೆಕೂರಿಸಲುಹೊರಟಿದ್ದಾರೆಎಂದುಕಿಡಿಕಾರಿದ್ದಾರೆ.‌

ಇತ್ತ ದೊಡ್ಡೇಗೌಡರು ಕೂಡಾ ಹೋರಾಟದ ಅಖಾಡಕ್ಕೆ ಧುಮುಕ್ಕಿದ್ದು, ಯೋಜನೆಯನ್ನು ಕೂಡಲೇ ಕೈಬಿಡಬೇಕು, ಇಲ್ಲವಾದರೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಸತ್ಯಾಗ್ರಹ ನಡೆಸುವುದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. 

ಒಟ್ಟಾರೆಬಿಡದಿಟೌನ್ಶಿಪ್ಯೋಜನೆಬಡಿದಾಟದಿನೇದಿನೇತೀವ್ರಗೊಳ್ಳುತ್ತಿದ್ದು, ಸಿಎಂ ಡಿಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಬೆಂಬಲಿಗರ ಪ್ರತಿಷ್ಠೆಯ ಕಾದಾಟವಾಗಿ ಮಾರ್ಪಟ್ಟಿದ್ದು, ಇವರ ಕೈಯಲ್ಲಿ ಸಿಲುಕಿ ರೈತರು ಹೈರಣಾಗಿದ್ದು, ಬೀದಿಗೆ ಬಿದ್ದಿದ್ದಾರೆ. ಮುಂದೆ ಇದು ಇನ್ನಾವ ರೂಪ ತಾಳುತ್ತದೆಯೋ ಕಾದು ನೋಡಬೇಕಾಗಿದೆ. 

#Bidaditownshipproject #congress #jds #farmers #ಬಿಡದಿ ಟೌನ್ ಶಿಪ್ ಯೋಜನೆ #ಕಾಂಗ್ರೆಸ್#ಜೆಡಿಎಸ್ #ರೈತರು

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link