ಜೆಪಿಸಿ ಸಭೆ


ಈ ಪ್ರಸ್ತಾವನೆಯಿಂದ ಒಕ್ಕೂಟ ವ್ಯವಸ್ಥೆಗೆ ತೀವ್ರ ಧಕ್ಕೆಯಾಗಲಿದೆ ಎಂದಿರುವ ಡಿಕೆ ಶಿವಕುಮಾರ್ , ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವವರ ಅನುಕೂಲಕ್ಕೆ ತಕ್ಕಂತೆ ಇದನ್ನು ಹೆಣೆಯಲಾಗುತ್ತಿದೆ. ಹೀಗಾಗಿ ಈ ಪ್ರಸ್ತಾವನೆಯನ್ನು ಕೆಪಿಸಿಸಿ ಅಧ್ಯಕ್ಷನಾಗಿ ಹಾಗೂ ಕರ್ನಾಟಕದ ಡಿಸಿಎಂ ಆಗಿ ಸಾರಾಸಗಟಾಗಿ ತಿರಸ್ಕರಿಸುತ್ತೇನೆ ಎಂದಿದ್ದಾರೆ.

ಬೆಂಗಳೂರು: ಒಂದು ದೇಶ, ಒಂದು ಚುನಾವಣೆ ಸಂಬಂಧ ಬೆಂಗಳೂರಿಗೆ ಬಂದಿರುವ JPC ಕಮಿಟಿ ವಿವಿಧ ಪಕ್ಷಗಳಿಂದ ಮಾಹಿತಿ ಸಂಗ್ರಹ ಮಾಡುತ್ತಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಜೆಪಿಸಿ ಕಮಿಟಿ ಅಧ್ಯಕ್ಷ ಪಿ.ಪಿ ಚೌಧರಿ,ಲೋಕಸಭೆ, ವಿಧಾನಸಭೆ ಚುನಾವಣೆ ಒಂದೇ ದಿನ ಒಟ್ಟಿಗೆ ನಡೆಸುವ ಪ್ರಕ್ರಿಯೆ ಇದಾಗಿದೆ. ಎಲ್ಲಾ ಪಕ್ಷಗಳ ಅಭಿಪ್ರಾಯ ಸಂಗ್ರಹ ಮಾಡಲಾಗ್ತಿದೆ ಎಂದು ತಿಳಿಸಿದರು.

1967-68ರಲ್ಲಿ ಕಾಂಗ್ರೆಸ್ ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆ ನಡೆಸಲಾಗಿತ್ತು. ಕಾಲದ ನಂತರ ಎಮರ್ಜೆನ್ಸಿ ಬಂದಾಗ ಈ ಪ್ರಕ್ರಿಯೆ ಬದಲಾಯ್ತು. ಚುನಾವಣಾ ಆಯೋಗ ಕೂಡ ಒಂದೇ ಸಂಧರ್ಭದಲ್ಲಿ ಚುನಾವಣೆ ನಡೆಸಲು ಸಮ್ಮತಿಸಿದೆ. ನೀತಿ ಆಯೋಗ ಕೂಡ ಇದನ್ನೇ ಬಯಸಿದೆ.ಸುಧೀರ್ಘ ಸಮಯದಿಂದ ಇದು ಜಾರಿಗೆ ಬಂದಿಲ್ಲ ಎಂದರು.

ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಕೂಡ ಇದನ್ನ ಚರ್ಚೆಗೆ ತಂದ್ರೂ ಮಾಡಲಾಗಲಿಲ್ಲ. ಪ್ರಧಾನಿ ಮೋದಿ ಅವರು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಕಮಿಟಿ ಮಾಡಿದ್ರು. ಕಮಿಟಿ ವರದಿಯನ್ನ ಈಗಾಗಲೇ ನೀಡಿದ್ದು. JPC ಕಮಿಟಿಗೆ ಅಧ್ಯಯನ ಮಾಡಲು ಸೂಚಿಸಿದ್ದಾರೆ.

ಮಾಂಟೆಕ್ ಸಿಂಗ್ ಅಹ್ಲುವಾಲಿಯ ಸೇರಿದಂತೆ ಅನೇಕರ ಜೊತೆ ಚರ್ಚೆಯಾಗಿದೆ. ಅನೇಕ ನ್ಯಾಯಾಧೀಶರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.ಜೊತೆಗೆ ಎಲ್ಲಾ ರಾಜ್ಯಗಳಿಂದ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಡಿಸಿಎಂ ಅವರು ಅವರ ಜೊತೆ ಕೆಲ ಸಚಿವರು ಆಗಮಿಸಿದ್ರು. ಅವರ ಅಭಿಪ್ರಾಯ ನೀಡಿದ್ದಾರೆ.ಚುನಾವಣೆ ಒಂದೇ ಸಂಧರ್ಭದಲ್ಲಿ ನಡೆಯುವುದರಿಂದ ಮ್ಯಾನ್ ಪವರ್ ಕಡಿಮೆ ಆಗಲಿದೆ. ಒಟ್ಟಾರೆ 7ಲಕ್ಷ ಕೋಟಿ ದೇಶಕ್ಕೆ ಉಳಿತಾಯವಾಗಲಿದೆ.

ಸರ್ಕಾರಿ ಶಾಲೆಗಳಲ್ಲಿ ಚುನಾವಣೆ ನಡೆಯಲಿದೆ. ಸರ್ಕಾರಿ ಅಧಿಕಾರಿಗಳನ್ನ ಬಳಸಿಕೊಳ್ಳುತ್ತೇವೆ. ಅನೇಕ ಸಂಧರ್ಭದಲ್ಲಿ ಚುನಾವಣೆ ನಡೆಯುವುದರಿಂದ ಶಾಲಾ ಮಕ್ಕಳಿಗೆ ಶಿಕ್ಷಣ ತಪ್ಪುತ್ತಿದೆ ಎಂದು ಹೇಳಿದರು.

ಈ ಮಧ್ಯೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಈ ಪ್ರಸ್ತಾವನೆಯಿಂದ ಒಕ್ಕೂಟ ವ್ಯವಸ್ಥೆಗೆ ತೀವ್ರ ಧಕ್ಕೆಯಾಗಲಿದೆ ಎಂದಿರುವ ಡಿಕೆ ಶಿವಕುಮಾರ್ , ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವವರ ಅನುಕೂಲಕ್ಕೆ ತಕ್ಕಂತೆ ಇದನ್ನು ಹೆಣೆಯಲಾಗುತ್ತಿದೆ. ಹೀಗಾಗಿ ಈ ಪ್ರಸ್ತಾವನೆಯನ್ನು ಕೆಪಿಸಿಸಿ ಅಧ್ಯಕ್ಷನಾಗಿ ಹಾಗೂ ಕರ್ನಾಟಕದ ಡಿಸಿಎಂ ಆಗಿ ಸಾರಾಸಗಟಾಗಿ ತಿರಸ್ಕರಿಸುತ್ತೇನೆ ಎಂದಿದ್ದಾರೆ.

#One NationOne Election #JPC #consultationmeeting #bengaluru#ಒಂದುದೇಶಒಂದುಚುನಾವಣೆ#ಜೆಪಿಸಿ#ಸಮಾಲೋಚನಾಸಭೆ #ಬೆಂಗಳೂರು

Leave a Reply

Your email address will not be published. Required fields are marked *