ತಮಿಳುನಾಡಿನಲ್ಲಿ ಹೆಚ್ಚಿನ ಜನಪ್ರಿಯತೆ ಹೊಂದಿರುವ ರಾಹುಲ್ ಗಾಂಧಿ, ವಿಜಯ್ ಅವರೊಂದಿಗೆ ಪ್ರಚಾರಕ್ಕೆ ಹೋಗಿದ್ದರೆ ಅದು ದೊಡ್ಡ ಪರಿಣಾಮವನ್ನು ಬೀರುತ್ತದೆ. ತಮಿಳುನಾಡು ಚುನಾವಣೆಯಲ್ಲಿ ಜಯಗಳಿಸಬಹುದು ಮತ್ತು ಸುಮಾರು 180-190 ಸ್ಥಾನಗಳನ್ನು ಪಡೆಯಬಹುದು ಎಂದು ಅವರು ಸ್ಥಳೀಯ ನಾಯಕರು, ತಳಮಟ್ಟದ ಕಾರ್ಯಕರ್ತರು ಹೇಳಿದ್ದರು ಎಂದು ತಿಳಿಸಿದರು. ಚೆನ್ನೈ: ತಮಿಳುನಾಡಿನಲ್ಲಿ ವಿಜಯ್ ಜೊತೆಗೆ ರಾಹುಲ್ ಗಾಂಧಿ ಪ್ರಚಾರ ನಡೆಸಿದ್ದರೆ ಕ್ಲೀನ್ ಸ್ವೀಪ್ ಮಾಡಬಹುದಿತ್ತು ಎಂದು ತಮಿಳುನಾಡು ಎಐಸಿಸಿ ಉಸ್ತುವಾರಿ ಚೋಡಂಕರ್ ಮಂಗಳವಾರ ಹೇಳಿದ್ದಾರೆ. ಆದರೆ ಡಿಎಂಕೆ ಜೊತೆಗಿನ ಧೀರ್ಘ ಮೈತ್ರಿಯಿಂದಾಗಿ ಟಿವಿಕೆ ಪರವಾಗಿ ಹೋಗಲು ಕಾಂಗ್ರೆಸ್ ನಾಯಕರು ಇಚ್ಚಿಸಲಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. ತಮಿಳುನಾಡಿನಲ್ಲಿ ಹೆಚ್ಚಿನ ಜನಪ್ರಿಯತೆ ಹೊಂದಿರುವ ರಾಹುಲ್ ಗಾಂಧಿ, ವಿಜಯ್ ಅವರೊಂದಿಗೆ ಪ್ರಚಾರಕ್ಕೆ ಹೋಗಿದ್ದರೆ ಅದು ದೊಡ್ಡ ಪರಿಣಾಮವನ್ನು ಬೀರುತ್ತದೆ. ತಮಿಳುನಾಡು ಚುನಾವಣೆಯಲ್ಲಿ ಜಯಗಳಿಸಬಹುದು ಮತ್ತು ಸುಮಾರು 180-190 ಸ್ಥಾನಗಳನ್ನು ಪಡೆಯಬಹುದು ಎಂದು ಅವರು ಸ್ಥಳೀಯ ನಾಯಕರು, ತಳಮಟ್ಟದ ಕಾರ್ಯಕರ್ತರು ಹೇಳಿದ್ದರು ಎಂದು ತಿಳಿಸಿದರು. ಇಂಡಿಯಾ ಬ್ಲಾಕ್ ಮತ್ತು ಡಿಎಂಕೆ ದೀರ್ಘಕಾಲದ ಮಿತ್ರಪಕ್ಷವಾಗಿರುವುದರಿಂದ ಕಾಂಗ್ರೆಸ್ ನಾಯಕತ್ವವು ಡಿಎಂಕೆ ಮೈತ್ರಿಕೂಟದೊಂದಿಗೆ ಮುಂದುವರಿಯಲು ನಿರ್ಧರಿಸಿತು. ಟಿವಿಕೆ ಗಮನಾರ್ಹವಾಗಿ ಪರಿಣಾಮ ಬೀರಲಿದೆ ಎಂಬುದು ತಿಳಿದಿತ್ತು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಟಿವಿಕೆ ಗೆಲುವಿನ ಕುರಿತು ಮಾತನಾಡಿದ ಚೋಡಂಕರ್, ಯುವಕರು ಮತ್ತು ಮಹಿಳೆಯರು ಬದಲಾವಣೆಗಾಗಿ ನಿರ್ಣಾಯಕವಾಗಿ ಮತ ಚಲಾಯಿಸಿದ್ದರಿಂದ ರಾಜ್ಯಾದ್ಯಂತ ಹೊಸ ಪಕ್ಷದ ಪರ ಅಲೆ ಎದ್ದಿದ್ದು, ಇದು ಹಾಲಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲು ಕಾರಣವಾಯಿತು.ಪಕ್ಷದ ಅನೇಕ ಕಾರ್ಯಕರ್ತರು ಕೋಪಗೊಂಡಿದ್ದಾರೆ ಹೀಗಾಗಿ ಕೆಲವರು ಟಿವಿಕೆ ಸೇರಿದ್ದಾರೆ ಎಂದು ಅವರು ಹೇಳಿದರು. #Tamilnadu #pollresult #tvk #Vijay #congress #ತಮಿಳುನಾಡು #ಚುನಾವಣಾ ಫಲಿತಾಂಶ #ಟಿವಿಕೆ #ವಿಜಯ್ #ಕಾಂಗ್ರೆಸ್ Post navigation Tamilnadu: ಮ್ಯಾಜಿಕ್ ನಂಬರ್ ದಾಟಲು TVKಗೆ ಬೇಕು 10 ಶಾಸಕರ ಬೆಂಬಲ, ಸಿಗುತ್ತಾ ಡಿಎಂಕೆ ಮಿತ್ರಪಕ್ಷಗಳ ಬೆಂಬಲ? ತಮಿಳುನಾಡು: ಸರ್ಕಾರ ರಚನೆಗೆ tVK ಕಸರತ್ತು; ಡಿಎಂಕೆಗೆ ಕೈಕೊಟ್ಟ ಕಾಂಗ್ರೆಸ್!