ಒಟ್ಟು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 118 ಸದಸ್ಯರ ಬೆಂಬಲ ಬೇಕಾಗಿದೆ. ಆದರೆ ಟಿವಿಕೆ ಬಳಿ ಇದೀಗ 108 ಸ್ಥಾನಗಳು ಮಾತ್ರ ಇದ್ದು ಸರ್ಕಾರ ರಚನೆಗೆ ಇನ್ನೂ 10 ಸ್ಥಾನಗಳ ಅಗತ್ಯತೆ ಇದೆ. ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ್ದು, ಒಟ್ಟು 108 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಆದರೂ ಅತಂತ್ರ ಫಲಿತಾಂಶ ಹೊರಬಿದಿದ್ದು, ಸರ್ಕಾರ ರಚನೆಗೆ ಟಿವಿಕೆಗೆ ಇನ್ನೂ 10 ಶಾಸಕರ ಅಗತ್ಯವಿದೆ. ಒಟ್ಟು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 118 ಸದಸ್ಯರ ಬೆಂಬಲ ಬೇಕಾಗಿದೆ. ಆದರೆ ಟಿವಿಕೆ ಬಳಿ ಇದೀಗ 108 ಸ್ಥಾನಗಳು ಮಾತ್ರ ಇದ್ದು ಸರ್ಕಾರ ರಚನೆಗೆ ಇನ್ನೂ 10 ಸ್ಥಾನಗಳ ಅಗತ್ಯತೆ ಇದೆ. ಈಗಾಗಲೇ ಸ್ವತಃ ನಟ ವಿಜಯ್ ಸಾರ್ವಜನಿಕ ವೇದಿಕೆಗಳಲ್ಲಿ ಸ್ಪಷ್ಟಪಡಿಸಿರುವಂತೆ ತಾವು ಡಿಎಂಕೆಗೆ ನೇರ ಎದುರಾಳಿ ಎಂದು ಘೋಷಿಸಿಕೊಂಡಿದ್ದಾರೆ. ಅಲ್ಲದೆ ಡಿಎಂಕೆ ಮುಖ್ಯಸ್ಥ ಸ್ಟಾಲಿನ್, ಅವರ ಪುತ್ರ ಉದಯನಿಧಿ ಸ್ಟಾಲಿನ್ ಸೇರಿದಂತೆ ಡಿಎಂಕೆ ನಾಯಕರುಗಳನ್ನು ಅವಕಾಶ ಸಿಕ್ಕಾಗಲೆಲ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗಾಗಿ ಡಿಎಂಕೆ ಪಕ್ಷದ ಸಿದ್ಧಾಂತ ಮತ್ತು ನಟ ವಿಜಯ್ ರ ಸಿದ್ಧಾಂತಕ್ಕೆ ಸಮಾನವಾಗಿದ್ದರೂ ಅವರು ಡಿಎಂಕೆ ಪಕ್ಷದ ಬೆಂಬಲ ಕೇಳುವುದು ಅಸಾಧ್ಯ ಎನ್ನಲಾಗಿದೆ. ಅಂತೆಯೇ ಇತ್ತ ಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟ ನಟ ವಿಜಯ್ ಗೆ ಬೆಂಬಲ ಘೋಷಿಸಿದ್ದರೂ ಸೈದ್ದಾಂತಿಕ ವಿಚಾರದಿಂದಾಗಿ ಅವರಿಂದಲೂ ವಿಜಯ್ ಬೆಂಬಲ ಪಡೆಯುವುದು ಅಸಾಧ್ಯ ಎನ್ನಲಾಗಿದೆ. ಹೀಗಾಗಿ ನಟ ವಿಜಯ್ ಇದೀಗ ಮೂರನೇ ಹಾದಿಯತ್ತ ಕಣ್ಣು ಹಾಯಿಸುವಂತಾಗಿದೆ. ಚುನಾವಣಾ ರಾಜಕೀಯಕ್ಕೆ ವಿಜಯ್ ಅವರು ಐತಿಹಾಸಿಕ ಪ್ರವೇಶ ನೀಡಿದ್ದರೂ, ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ಸಂಖ್ಯೆಯನ್ನು ಅವರು ಹೇಗೆ ಹೊಂದಿಸುತ್ತಾರೆ ಎಂಬುದು ಈಗಿನ ಕುತೂಹಲ. ಹಾಲಿ ಚುನಾವಣಾ ಆಯೋಗದ ಮೂಲಗಳ ಪ್ರಕಾರ ಟಿವಿಕೆ 108 ಸ್ಥಾನಗಳಲ್ಲಿ ಗೆದ್ದಿದ್ದು, ಡಿಎಂಕೆ 72ಮತ್ತು ಎಐಡಿಎಂಕೆ 54 ಸ್ಥಾನಗಳನ್ನು ಪಡೆದಿದೆ. ಇದಲ್ಲದೆ ಡಿಎಂಕೆ ಮೈತ್ರಿಕೂಟ ಪಕ್ಷಗಳಾದ ಕಾಂಗ್ರೆಸ್ 5, ವಿಸಿಕೆ 2 ಸಿಪಿಐ 2, ಡಿಎಂಡಿಕೆ 2 ಮತ್ತು ಐಯುಎಂಲ್ 1 ಸೇರಿದೆ ಒಟ್ಟು 13 ಸ್ಥಾನಗಳನ್ನು ಹೊಂದಿವೆ. ನಟ ವಿಜಯ್ ಸರ್ಕಾರಕ್ಕೆ 10 ಸ್ಥಾನಗಳ ಅಗತ್ಯತೆ ಇದ್ದು ಇದನ್ನು ಹೇಗೆ ಹೊಂದಿಸುತ್ತಾರೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಇದಲ್ಲದ ಡಿಎಂಕೆ ಮೈತ್ರಿಕೂಟದಲ್ಲಿರುವ ಕಾಂಗ್ರೆಸ್ ಅಥವಾ ವಿಸಿಕೆ ಪಕ್ಷಗಳು ಹೊಸ ಸರ್ಕಾರದ ಭಾಗವಾಗಲು ವಿಜಯ್ ಅವರ ಕೈ ಹಿಡಿಯುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. #Tamilnadu #pollresult #TVK #Formgovt #Magicnumber #DMK #Congress # ತಮಿಳುನಾಡು #ಚುನಾವಣಾಫಲಿತಾಂಶ #ಟಿವಿಕೆ # ಸರ್ಕಾರ ರಚನೆ #ಮ್ಯಾಜಿಕ್ ನಂಬರ್ #ಡಿಎಂಕೆ #ಕಾಂಗ್ರೆಸ್ Post navigation ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಹೊಸ ಜಾಮೀನು ಅರ್ಜಿ ವಿಚಾರಣೆ, ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ! ‘ವಿಜಯ್ ಜೊತೆಗೆ ರಾಹುಲ್ ಪ್ರಚಾರ ಮಾಡಿದ್ದರೆ 180-190 ಸ್ಥಾನ ಪಡೆಯಬಹುದಿತ್ತು- ತಮಿಳುನಾಡು AICC ಉಸ್ತುವಾರಿ