ಕೆಂಪೇಗೌಡರ ಜಯಂತಿಯಲ್ಲಿ ಸಿಎಂ ಡಿಕೆ ಶಿವಕುಮಾರ್


ಇಂದು ಕೆಂಪೇಗೌಡರ 517ನೇ ಜನ್ಮ ದಿನೋತ್ಸವ. ನಾಡಿನಾದ್ಯಂತ  ಸಂಭ್ರಮದಿಂದ ಆಚರಿಸಲಾಯಿತು. ನಾಡಪ್ರಭು ಹಿರಿಯ ಕೆಂಪೇಗೌಡ ಅವರು ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿದ್ದ ಒಬ್ಬ ಪ್ರಸಿದ್ಧ ಪಾಳೇಗಾರರು ಮತ್ತು 16ನೇ ಶತಮಾನದ ದೂರದೃಷ್ಟಿಯುಳ್ಳ ನಾಯಕರು.

ಇಂದು ಕೆಂಪೇಗೌಡರ 517ನೇ ಜನ್ಮ ದಿನೋತ್ಸವ. ನಾಡಿನಾದ್ಯಂತ  ಸಂಭ್ರಮದಿಂದ ಆಚರಿಸಲಾಯಿತು. ನಾಡಪ್ರಭು ಹಿರಿಯ ಕೆಂಪೇಗೌಡ ಅವರು ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿದ್ದ ಒಬ್ಬ ಪ್ರಸಿದ್ಧ ಪಾಳೇಗಾರರು ಮತ್ತು 16ನೇ ಶತಮಾನದ ದೂರದೃಷ್ಟಿಯುಳ್ಳ ನಾಯಕರು. ಅವರು ಕ್ರಿ.ಶ. 1537ರಲ್ಲಿ ಬೆಂಗಳೂರು ನಗರವನ್ನು ಸ್ಥಾಪಿಸಿದರು.ಮಣ್ಣಿನ ಕೋಟೆ ಮತ್ತು ವ್ಯವಸ್ಥಿತವಾದ ಪೇಟೆಗಳನ್ನು ನಿರ್ಮಿಸುವ ಮೂಲಕ ಆಧುನಿಕ ಬೆಂಗಳೂರಿಗೆ ಭದ್ರ ಬುನಾದಿ ಹಾಕಿದರು.

ಮೊರಸು ಒಕ್ಕಲಿಗ ಕೃಷಿಕ ಸಮುದಾಯಕ್ಕೆ ಸೇರಿದ ಕೆಂಪೇಗೌಡರನ್ನು ಆಧುನಿಕ ಬೆಂಗಳೂರಿನ ಶಿಲ್ಪಿ ಹಾಗೂ ಕರ್ನಾಟಕದ ಅತ್ಯಂತ ಐತಿಹಾಸಿಕ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.ದೂರದೃಷ್ಟಿಯ ನಾಯಕತ್ವ, ಸುಸಂಘಟಿತ ನಗರ ಯೋಜನೆ ಹಾಗೂ ಜನಪರ ಆಡಳಿತದ ಮೂಲಕ ನಮ್ಮ ಹೆಮ್ಮೆಯ ಬೆಂಗಳೂರಿಗೆ ಭದ್ರ ಬುನಾದಿಯನ್ನು ಹಾಕಿದ ಮಹಾನ್ ಶಿಲ್ಪಿ ಕೆಂಪೇಗೌಡರು.

ಹಂಪಿಯ ವೈಭವದಿಂದ ಪ್ರೇರಿತರಾಗಿ, ಕೆಂಪೇಗೌಡರು ಸುಸಂಘಟಿತ ಕೋಟೆನಗರವನ್ನು ನಿರ್ಮಿಸಿದರು. ಚಿಕ್ಕಪೇಟೆ, ದೊಡ್ಡಪೇಟೆ ಮುಂತಾದ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿ, ಪ್ರತಿಯೊಂದು ಪೇಟೆಯನ್ನು ನಿರ್ದಿಷ್ಟ ವಾಣಿಜ್ಯ ಚಟುವಟಿಕೆಗಳಿಗೆ ಮೀಸಲಿಟ್ಟರು. ನಗರದ ಸುಸ್ಥಿರ ಬೆಳವಣಿಗೆಗಾಗಿ ಅನೇಕ ಕೆರೆಗಳು, ಕಟ್ಟೆಗಳು ಹಾಗೂ ನೀರಾವರಿ ವ್ಯವಸ್ಥೆಗಳನ್ನು ನಿರ್ಮಿಸಿದರು. ಕೆಂಪಾಂಬುಧಿ ಕೆರೆ, ಹಲಸೂರು ಕೆರೆ ಸೇರಿದಂತೆ ಅನೇಕ ಜಲಾಶಯಗಳು ಅವರ ದೂರದೃಷ್ಟಿಯ ಸಾಕ್ಷಿಗಳಾಗಿವೆ.

ಬೆಂಗಳೂರಿನ ಭವಿಷ್ಯದ ಗಡಿಗಳನ್ನು ಗುರುತಿಸಲು ನಾಲ್ಕು ಪ್ರಸಿದ್ಧ ಗೋಪುರಗಳನ್ನು ನಿರ್ಮಿಸಿದರು. ಲಾಲ್‌ಬಾಗ್, ಮೇಖ್ರಿ ವೃತ್ತ, ಹಲಸೂರು ಹಾಗೂ ಕೆಂಪಾಂಬುಧಿ ಪ್ರದೇಶಗಳಲ್ಲಿ ಇಂದಿಗೂ ಈ ಗೋಪುರಗಳು ನಗರದ ಇತಿಹಾಸದ ಸಂಕೇತಗಳಾಗಿ ನಿಂತಿವೆ. ವಿದ್ಯಾವಂತರಾಗಿದ್ದ ಕೆಂಪೇಗೌಡರು ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಗೆ ಉತ್ತೇಜನ ನೀಡಿದರು. ಕೆಂಪೇಗೌಡರ ಹೆಸರು ಇಂದಿಗೂ ಬೆಂಗಳೂರಿನ ಗುರುತಿನ ಅವಿಭಾಜ್ಯ ಅಂಗವಾಗಿದೆ:

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಜಾಗತಿಕ ಪ್ರವೇಶ ದ್ವಾರವಾಗಿದೆ. ವಿಮಾನ ನಿಲ್ದಾಣದ ಆವರಣದಲ್ಲಿರುವ 108 ಅಡಿ ಎತ್ತರದ ಪ್ರಗತಿಯ ಪ್ರತಿಮೆ” (Statue of Prosperity) ಕೆಂಪೇಗೌಡರ ಸ್ಮರಣಾರ್ಥ ನಿರ್ಮಿಸಲಾದ ಭವ್ಯ ಸ್ಮಾರಕವಾಗಿದೆ. ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಹಾಗೂ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ ಸೇರಿದಂತೆ ಪ್ರಮುಖ ಸಾರಿಗೆ ಕೇಂದ್ರಗಳು ಅವರ ಹೆಸರನ್ನು ಧರಿಸಿವೆ. ಪ್ರತಿ ವರ್ಷ ಜೂನ್ 27ರಂದು “ಕೆಂಪೇಗೌಡ ಜಯಂತಿ”ಯನ್ನು ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಅಧಿಕೃತವಾಗಿ ಆಚರಿಸುತ್ತದೆ.

ನಾಲ್ಕು ಶತಮಾನಗಳಿಗೂ ಅಧಿಕ ಕಾಲ ಕಳೆದರೂ, ನಾಡಪ್ರಭು ಹಿರಿಯ ಕೆಂಪೇಗೌಡರು ದೂರದೃಷ್ಟಿಯ ನಗರ ನಿರ್ಮಾಪಕ, ಸಮರ್ಥ ಆಡಳಿತಗಾರ ಹಾಗೂ ಸಂಸ್ಕೃತಿ ಪೋಷಕರಾಗಿ ಸ್ಮರಿಸಲ್ಪಡುತ್ತಾರೆ. ಅವರು ನಿರ್ಮಿಸಿದ ಅಡಿಪಾಯದ ಮೇಲೆಯೇ ಬೆಂಗಳೂರು ಇಂದು ಭಾರತದ ಪ್ರಮುಖ ತಂತ್ರಜ್ಞಾನ ಮತ್ತು ಜಾಗತಿಕ ಮಹಾನಗರಗಳಲ್ಲಿ ಒಂದಾಗಿ ಬೆಳೆದಿದೆ.

ಮಹಿಳೆಯರ ಮೇಲಿನ ಅನಿಷ್ಟ ಪದ್ಧತಿಗಳನ್ನು ಬಂಡಿ ದೇವರ ಪದ್ಧತಿಯಲ್ಲಿ ಬೆರಳು ಕತ್ತರಿಸುವ ಸಂಪ್ರದಾಯವಿರೋಧಿಸಿ ನಿಷೇಧಿಸಿದರು.ಮಾಗಡಿ ಬಳಿಯಿರುವ ಕೆಂಪಾಪುರದಲ್ಲಿರುವ ಕೆಂಪೇಗೌಡರ ಸಮಾಧಿ ಐತಿಹಾಸಿಕ ಸ್ಥಳವಾಗಿದೆ. 

ಸಿಎಂ ಡಿ .ಕೆ. ಶಿವಕುಮಾರ್ ಅವರು ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಪ್ರಯುಕ್ತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆಗೆ ಶನಿವಾರ ಮಾಲಾರ್ಪಣೆ ಮಾಡಿ, ಮಾತನಾಡಿದರು. ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

#Nadaprabhu Kempegowda #517thJayanti #celebrated #ನಾಡಪ್ರಭುಕೆಂಪೇಗೌಡ #517ನೇಜಯಂತಿ#ಆಚರಣೆ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link