ಈ ಹಿಂದೆ ಉದ್ಯಮಿ ಅರವಿಂದ್ ರೆಡ್ಡಿಗೆ ಕೊರಿಯರ್ ಮೂಲಕ ಬೆದರಿಕೆ ಹಾಕಿ, ಕೋಟಿಗಟ್ಟಲೆ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ವೈಶಾಕ್ ಬಂಧಿತನಾಗಿ ಜೈಲು ಸೇರಿದ್ದ. ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ಕೃಷಿ ತಾಪಂಡ ಅಪಾರ್ಟ್ ಮೆಂಟ್ ನಲ್ಲಿ ಅವರ ಗೆಳೆಯ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಟಿ ಕೃಷಿ ತಾಪಂಡ ಅಪಾರ್ಟ್ ಮೆಂಟ್ ನಲ್ಲೇ ವೈಶಾಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಘಟನಾ ಸ್ಥಳದಲ್ಲಿ ಸದ್ಯ ಯಾವುದೇ ಪತ್ರ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಉದ್ಯಮಿ ಅರವಿಂದ್ ರೆಡ್ಡಿಗೆ ಕೊರಿಯರ್ ಮೂಲಕ ಬೆದರಿಕೆ ಹಾಕಿ, ಕೋಟಿಗಟ್ಟಲೆ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ವೈಶಾಕ್ ಬಂಧಿತನಾಗಿ ಜೈಲು ಸೇರಿದ್ದ. ವೈಶಾಕ್ ಆತ್ಮಹತ್ಯೆಗೂ ಮುನ್ನ ಕೃಷಿ ತಾಪಂಡಗೆ ಕರೆ ಮಾಡಿ ತಿಳಿಸಿದ್ದ ಎನ್ನಲಾಗಿದೆ. ಬುಧವಾರ ರಾತ್ರಿ ಕೃಷಿ ಮನೆಯಲ್ಲೇ ವೈಶಾಕ್ ತಂಗಿದ್ದ. ಆ ಸಮಯದಲ್ಲಿ ಕೃಷಿ ನಿವಾಸದಲ್ಲಿ ಇರಲಿಲ್ಲ. ಈ ವೇಳೆ ನಟಿಗೆ ಕರೆ ಮಾಡಿ ತಾನು ಸಾಯುವುದಾಗಿ ವೈಶಾಕ್ ಹೇಳಿಕೊಂಡಿದ್ದ. ತಕ್ಷಣ ಕೃಷಿ ಈ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿದ್ದರು. ಆ ಬಳಿಕ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಪ್ರಸ್ತುತ ವೈಶಾಕ್ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆಯಾಗಿದೆ. #Sandalwoodactress #kris thapandas #friend vaishak #ounddead# ಸ್ಯಾಂಡಲ್ ವುಡ್ ನಟಿ #ಕೃಷಿ ತಾಪಂಡ #ಗೆಳೆಯ ವೈಶಾಕ್ #ಆತ್ಮಹತ್ಯೆ Share via: Facebook X (Twitter) LinkedIn More Post navigation Bidadi township: ಮತ್ತೆ ಪೋಸ್ಟರ್ ವಾರ್! ಡಿ.ಕೆ ಶಿವಕುಮಾರ್, HDK ಈ ರಾಜ್ಯದ ಪಾಳೆಗಾರರಾ..? ವಾಟಾಳ್ ನಾಗರಾಜ್ ಕಿಡಿ ನಾಡಪ್ರಭು ಕೆಂಪೇಗೌಡರ 517ನೇ ಜನ್ಮದಿನೋತ್ಸವ: ಪ್ರತಿಮೆಗೆ ಮಾಲಾರ್ಪಣೆ!